AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dhananjay: ‘ಅಮೃತಾನ ನನ್ನ ಸಿನಿಮಾ ಹೀರೋಯಿನ್ ಮಾಡಿ ಎಂದು ನಾನು ಎಂದಿಗೂ ಕೇಳಿಲ್ಲ’; ಡಾಲಿ ಧನಂಜಯ್

Amrutha Iyengar: ‘ಎಲ್ಲರನ್ನೂ ನಗಿಸಬೇಕು ಎಂದು ಸುದೀಪ್ ಅವರು ಆ ರೀತಿ ಹೇಳಿದರು ಅಷ್ಟೇ. ಅವರು ಹೇಳಿದ್ದೆಲ್ಲವೂ ಹಾಸ್ಯಕ್ಕಾಗಿ’ ಎಂದು ಧನಂಜಯ್ ಹೇಳಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on: Mar 30, 2023 | 7:56 AM

Share

ಅಮೃತಾ ಅಯ್ಯಂಗಾರ್ (Amrutha Iyengar) ಹಾಗೂ ಡಾಲಿ ಧನಂಜಯ್ ವಿಚಾರದ ಬಗ್ಗೆ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಅನ್ನೋದು ಕೆಲವರ ವಾದ. ‘ನಾವು ಒಳ್ಳೆಯ ಫ್ರೆಂಡ್ಸ್​ ಅಷ್ಟೇ’ ಅನ್ನೋದು ಧನಂಜಯ್ ಹಾಗೂ ಅಮೃತಾ ಸ್ಪಷ್ಟನೆ. ಈ ವಿಚಾರದಲ್ಲಿ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಈ ವಿಚಾರದಲ್ಲಿ ಧನಂಜಯ್ (Dhananjay) ಅವರು ಮಾತನಾಡಿದ್ದಾರೆ. ‘ಹೊಯ್ಸಳ’ ಸಿನಿಮಾ ರಿಲೀಸ್​ಗೂ ಮೊದಲು ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮುಕ್ತವಾಗಿ ಎಲ್ಲವನ್ನೂ ಹೇಳಿಕೊಂಡಿದ್ದಾರೆ.

ಸುದೀಪ್ ಕಾಲೆಳೆದ ಬಗ್ಗೆ ಸ್ಪಷ್ಟನೆ ನೀಡಿದ ಧನಂಜಯ್

ಇತ್ತೀಚೆಗೆ ‘ಹೊಯ್ಸಳ’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೆಯಿತು. ಇದಕ್ಕೆ ಸುದೀಪ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ವೇದಿಕೆ ಏರಿದ ಅವರು, ಧನಂಜಯ್ ಹಾಗೂ ಅಮೃತಾ ವಿಚಾರದಲ್ಲಿ ಕಾಲೆಳೆದಿದ್ದರು. ‘ಅಮೃತಾ ಅವರು ಧನಂಜಯ್ ಜೊತೆ ಮೂರು ಸಿನಿಮಾ ಮಾಡಿದ್ದು ಏಕೆ’ ಎಂದು ನಗುತ್ತಲೇ ಕಿಚ್ಚ ಕೇಳಿದ್ದರು. ಈ ವಿಚಾರವಾಗಿ ಧನಂಜಯ್ ಮಾತನಾಡಿದ್ದಾರೆ. ‘ಟ್ರೇಲರ್ ಲಾಂಚ್ ಕಾರ್ಯಕ್ರಮ ತುಂಬಾನೇ ಗಂಭೀರವಾಗಿ ಸಾಗುತ್ತಿತ್ತು. ಸ್ವಲ್ಪ ಎಲ್ಲರನ್ನೂ ನಗಿಸಬೇಕು ಎಂದು ಸುದೀಪ್ ಅವರು ಆ ರೀತಿ ಹೇಳಿದರು ಅಷ್ಟೇ. ಅವರು ಹೇಳಿದ್ದೆಲ್ಲವೂ ಹಾಸ್ಯಕ್ಕಾಗಿ’ ಎಂದು ಧನಂಜಯ್ ಹೇಳಿದ್ದಾರೆ.

ನಾನು ಅಮೃತಾನ ರೆಫರ್ ಮಾಡಿಲ್ಲ

ಅಮೃತಾ ಅಯ್ಯಂಗಾರ್ ಹಾಗೂ ಧನಂಜಯ್ ಮೊದಲು ನಟಿಸಿದ್ದು ‘ಪಾಪ್​ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲಿ. ಇವರ ಕೆಮಿಸ್ಟ್ರಿ ಕೆಲಸ ಮಾಡಿತು. ನಂತರ ‘ಬಡವ ರಾಸ್ಕಲ್’ ಸಿನಿಮಾದಲ್ಲಿ ಇವರು ಒಟ್ಟಿಗೆ ನಟಿಸಿದರು. ಇಂದು (ಮಾರ್ಚ್ 30) ರಿಲೀಸ್ ಆದ  ‘ಹೊಯ್ಸಳ’ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ‘ನಾಯಕಿಯರ ಆಯ್ಕೆ ವಿಚಾರದಲ್ಲಿ ನಾನು ತಲೆ ಹಾಕಲ್ಲ. ಹಿಂದಿನ ಸಿನಿಮಾ ನೋಡಿ ಬಡವ ರಾಸ್ಕಲ್ ಚಿತ್ರಕ್ಕೆ ಅಮೃತಾನ ಆಯ್ಕೆ ಮಾಡಿದ್ದು ನಿರ್ದೇಶಕ ಶಂಕರ್. ಈ ಚಿತ್ರ ಹಿಟ್ ಆದ ಬಳಿಕ ಹೊಯ್ಸಳ ಚಿತ್ರಕ್ಕೆ ಅಮೃತಾನ ಆಯ್ಕೆ ಮಾಡಿದ್ದು ನಿರ್ಮಾಪಕರು. ಡಾಲಿ ಇದರಲ್ಲಿ ತಲೆ ಹಾಕಿಲ್ಲ. ಅಮೃತಾ ಅವರ ಸಾಮರ್ಥ್ಯದಿಂದ ಆಫರ್ ಸಿಕ್ಕಿದೆ ಅಷ್ಟೇ’ ಎಂದಿದ್ದಾರೆ ಧನಂಜಯ್.

ನಾವು ಫ್ರೆಂಡ್ಸ್

‘ಧನಂಜಯ್ ಎಲ್ಲರ ಜೊತೆ ಇದೇ ರೀತಿ ಇರ್ತಾರೆ. ಅವರ ಗೆಳೆಯರ ಬಳಗ ದೊಡ್ಡದಿದೆ. ಈ ಗೆಳೆಯರಲ್ಲಿ ನಾನು ಕೂಡ ಒಬ್ಬಳು’ ಎಂದಿದ್ದಾರೆ ಅಮೃತಾ. ಈ ಮೂಲಕ ಇಬ್ಬರ ಮಧ್ಯೆ ಇರೋದು ಫ್ರೆಂಡ್​ಶಿಪ್ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ