Hoysala: ಶಿವಣ್ಣ ನಟಿಸಿದ್ದ ಆ ಪೊಲೀಸ್ ಪಾತ್ರದಲ್ಲಿ ನಟಿಸುವಾಸೆ: ಡಾಲಿ ಧನಂಜಯ್

ಹಲವು ಭಿನ್ನ ಭಿನ್ನ ಪಾತ್ರಗಳಲ್ಲಿ ನಟಿಸಿರುವ ನಟ ಡಾಲಿ ಧನಂಜಯ್, ಶಿವಣ್ಣ ನಟಿಸಿರುವ ಹಳೆಯ ಸಿನಿಮಾ ಒಂದರ ರೀತಿಯ ಪಾತ್ರದಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ.

Hoysala: ಶಿವಣ್ಣ ನಟಿಸಿದ್ದ ಆ ಪೊಲೀಸ್ ಪಾತ್ರದಲ್ಲಿ ನಟಿಸುವಾಸೆ: ಡಾಲಿ ಧನಂಜಯ್
ಶಿವಣ್ಣ-ಡಾಲಿ
Follow us
ಮಂಜುನಾಥ ಸಿ.
|

Updated on: Mar 29, 2023 | 9:30 PM

ಡಾಲಿ ಧನಂಜಯ್ (Daali Dhananjay) ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾ ಬಂದಿರುವ ನಟ. ವಿಲನ್, ಪೋಷಕ ಪಾತ್ರ, ಡಿ ಗ್ಲಾಮರೈಸ್ ಆಗಿರುವ ಪಾತ್ರ, ಒರಟನ ರೀತಿಯ ಪಾತ್ರ, ಮಧ್ಯಮವರ್ಗ ಪ್ರತಿನಿಧಿಸುವ ಪಾತ್ರ ಹೀಗೆ ಹಲವು ರೀತಿಯ ಪಾತ್ರಗಳಿಗೆ ತಮ್ಮನ್ನು ಒಪ್ಪಿಸಿಕೊಂಡಿದ್ದಾರೆ. ಇದೀಗ ಹೊಯ್ಸಳ ಸಿನಿಮಾ ಮೂಲಕ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಪೊಲೀಸ್ ಪಾತ್ರಧಾರಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಸಲಗ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದರಾದರೂ ಅದು ನಾಯಕನ ಪಾತ್ರವಾಗಿರಲಿಲ್ಲ. ಆದರೆ ಮುಂದೊಮ್ಮೆ ಶಿವಣ್ಣ (Shiva Rajkumar) ನಟಿಸಿರುವ ಪಾತ್ರವೊಂದನ್ನು ಹೋಲುವ ಪಾತ್ರದಲ್ಲಿ ನಟಿಸುವ ಆಸೆಯನ್ನು ಡಾಲಿ ಧನಂಜಯ್ ವ್ಯಕ್ತಪಡಿಸಿದ್ದಾರೆ.

ಟಿವಿ9 ಜೊತೆಗೆ ಮಾತನಾಡಿರುವ ಡಾಲಿ ಧನಂಜಯ್, ಈ ಹಿಂದೆ ಹಲವು ದಿಗ್ಗಜರು ಪೊಲೀಸ್ ಪಾತ್ರಗಳನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ರಾಜ್​ಕುಮಾರ್, ಶಂಕರ್ ನಾಗ್, ಅಂಬರೀಶ್, ಶಿವರಾಜ್ ಕುಮಾರ್, ಸಾಯಿ ಕುಮಾರ್ ಅವರ ಸಿನಿಮಾಗಳನ್ನು ನೋಡಿಯೇ ಬೆಳೆದವನು. ಮಾಸ್ ಪ್ರೇಕ್ಷಕನಾಗಿ ನನಗೆ ಸಿನಿಮಾವನ್ನು ಸೆಲೆಬ್ರೇಟ್ ಮಾಡುವುದು ಇಷ್ಟ. ಹಾಗಾಗಿ ಎಲ್ಲ ಪೊಲೀಸ್ ಕತೆಯುಳ್ಳ ಸಿನಿಮಾಗಳನ್ನು ಎಂಜಾಯ್ ಮಾಡಿಕೊಂಡು ನೋಡುತ್ತೀನಿ” ಎಂದಿದ್ದಾರೆ.

ಪಾತ್ರಗಳ ವಿಷಯಕ್ಕೆ ಬಂದರೆ ನನಗೆ ಬೇರೆ-ಬೇರೆ ರೀತಿಯ ಪಾತ್ರಗಳಲ್ಲಿ ನಟಿಸುವುದು ಬಹಳ ಇಷ್ಟ. ನನ್ನ ಫಿಲ್ಮಾಗ್ರಫಿ ಗಮನಿಸಿದರೆ ಡಾಲಿ, ಮಿಠಾಯಿ ಸೂರಿ, ರತ್ನಾಕರ ಇಂಥಹಾ ಬೇರೆ ಬೇರೆ ಪಾತ್ರಗಳಿವೆ. ಇದಕ್ಕೆ ಗುರುದೇವ ಹೊಯ್ಸಳ ಸಹ ಸೇರಿಕೊಳ್ಳಲಿದೆ. ಇನ್ನು ಪಾತ್ರವನ್ನು ನಟಿಸಲು ತಯಾರಿಯ ವಿಷಯಕ್ಕೆ ಬಂದರೆ ಈ ಹಿಂದೆ ನೋಡಿದ ಸಿನಿಮಾಗಳ ಜೊತೆಗೆ ನನಗೆ ಕೆಲವು ಪೊಲೀಸ್ ಗೆಳೆಯರಿದ್ದಾರೆ ಅವರೊಟ್ಟಿಗೆ ಮಾತನಾಡಿರುತ್ತೇನೆ, ಅವರೊಟ್ಟಿಗೆ ಬೆರೆತಾಗ ನಾನು ಗಮನಿಸಿದ ಕೆಲವು ಅಂಶಗಳು ತಲೆಯಲ್ಲಿ ರಿಜಿಸ್ಟರ್ ಆಗಿರುತ್ತವೆ. ಜೊತೆಗೆ ನಿರ್ದೇಶಕರು ಪಾತ್ರವನ್ನು ಬರೆದಿರುವ ರೀತಿ ಎಲ್ಲವೂ ಒಂದಾಗಿ ಪಾತ್ರವನ್ನು ಅಪ್ರೋಚ್ ಮಾಡುತ್ತೇನೆ ಎಂದಿದ್ದಾರೆ ಧನಂಜಯ್.

ನನಗೆ ವೈಯಕ್ತಿಕವಾಗಿ ಪೊಲೀಸ್ ಅಧಿಕಾರಿ ಪಾತ್ರ ಮಾಡುವುದು ಬಹಳ ಇಷ್ಟ. ಸಲಗ ಸಿನಿಮಾದಲ್ಲಿ ಮಾಡಿದ್ದ ಸಾಮ್ರಾಟ್ ಪಾತ್ರ ಬಹಳ ಸೀರಿಯಸ್ ಆದ ಪೊಲೀಸ್ ಅಧಿಕಾರಿ ಪಾತ್ರವಾಗಿತ್ತು. ಇಲ್ಲಿಯೂ ಸಹ ಗುರುದೇವ್ ಹೊಯ್ಸಳ ಬಹಳ ಗಂಭೀರವಾದ ಪೊಲೀಸ್ ಅಧಿಕಾರಿ. ಮುಂದೆ ಪೊಲೀಸ್ ಅಧಿಕಾರಿ ಪಾತ್ರ ಮಾಡಿದರೆ ಇನ್​ಸ್ಪೆಕ್ಟರ್ ವಿಕ್ರಂ ಸಿನಿಮಾದಲ್ಲಿ ಶಿವಣ್ಣ ಮಾಡಿದ್ದರಲ್ಲ, ಜಾಲಿಯಾಗಿರುವ, ಚಿಲ್ಡ್, ಎಂಜಾಯ್ ಮಾಡಿಕೊಂಡಿರುವ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತೇನೆ ಎಂದಿದ್ದಾರೆ ಡಾಲಿ ಧನಂಜಯ್.

ಇದನ್ನೂ ಓದಿ: Dhananjay: ‘ಯಾಕ್ರಿ ಹೊಟ್ಟೆ ಬಿಟ್ಕೊಂಡು ಓಡಾಡ್ತಾ ಇದೀರಿ?’: ಡಾಲಿ ಧನಂಜಯ್​ಗೆ ಸುದೀಪ್​ ನೇರ ಪ್ರಶ್ನೆ

1989 ರಲ್ಲಿ ಶಿವರಾಜ್ ಕುಮಾರ್ ನಟಿಸಿದ್ದ ಇನ್​ಸ್ಪೆಕ್ಟರ್ ವಿಕ್ರಂ ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾದಲ್ಲಿ ಜಾಲಿಯಾಗಿರುವ ಇನ್​ಸ್ಪೆಕ್ಟರ್ ಪಾತ್ರದಲ್ಲಿ ಶಿವಣ್ಣ ನಟಿಸಿದ್ದರು. ಆ ಆಕ್ಷನ್ ಕಾಮಿಡಿ ಸಿನಿಮಾವನ್ನು ದಿನೇಶ್ ಬಾಬು ನಿರ್ದೇಶನ ಮಾಡಿದ್ದರು. ಅದೇ ಸಿನಿಮಾದ ಹೆಸರನ್ನಿಟ್ಟುಕೊಂಡು ಎರಡು ವರ್ಷದ ಹಿಂದೆ ಪ್ರಜ್ವಲ್ ದೇವರಾಜ್ ನಟನೆಯ ಇನ್​ಸ್ಪೆಕ್ಟರ್ ವಿಕ್ರಂ ಸಿನಿಮಾ ಬಿಡುಗಡೆ ಆಗಿತ್ತು. ಆದರೆ ಆ ಸಿನಿಮಾ ದೊಡ್ಡ ಹಿಟ್ ಆಗಲಿಲ್ಲ.

ಇನ್ನು ಡಾಲಿ ನಟನೆಯ ಹೊಯ್ಸಳ ಸಿನಿಮಾ ಮಾರ್ಚ್ 30 ರಂದು ಬಿಡುಗಡೆ ಆಗಲಿದೆ. ಹೊಂಬಾಳೆಯ ಸಹೋದರ ಸಂಸ್ಥೆಯಾಗಿರುವ ಕೆಆರ್​ಜಿ ಸಂಸ್ಥೆಯು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು ಸಿನಿಮಾವನ್ನು ವಿಜಯ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಅಮೃತಾ ಐಯ್ಯಂಗಾರ್ ನಾಯಕಿ. ಅಚ್ಯುತ್ ಕುಮಾರ್, ರಾಜೇಶ್ ನಟರಂಗ, ನಾಗಭೂಷಣ್ ಇನ್ನೂ ಹಲವರು ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್