ಹೊಯ್ಸಳ ಸಿನಿಮಾಕ್ಕೆ ರಶ್ಮಿಕಾ ಹಾರೈಕೆ, ಆದರೆ ನೋಡಲು ಕಾಯುತ್ತಿರುವುದು ತೆಲುಗು ಸಿನಿಮಾವನ್ನು!

ಕನ್ನಡ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಅಪರೂಪಕ್ಕೆ ಕನ್ನಡದ ಹೊಯ್ಸಳ ಸಿನಿಮಾಕ್ಕೆ ಶುಭ ಹಾರೈಸಿದ್ದಾರೆ. ಆದರೆ ತೆಲುಗು ಸಿನಿಮಾ ನೋಡಲು ಕಾತರಳಾಗಿರುವುದಾಗಿ ಹೇಳಿದ್ದಾರೆ!

ಹೊಯ್ಸಳ ಸಿನಿಮಾಕ್ಕೆ ರಶ್ಮಿಕಾ ಹಾರೈಕೆ, ಆದರೆ ನೋಡಲು ಕಾಯುತ್ತಿರುವುದು ತೆಲುಗು ಸಿನಿಮಾವನ್ನು!
ರಶ್ಮಿಕಾ ಮಂದಣ್ಣ
Follow us
ಮಂಜುನಾಥ ಸಿ.
|

Updated on:Mar 29, 2023 | 11:10 PM

ಡಾಲಿ ಧನಂಜಯ್ (Daali Dhananjay) ನಟನೆಯ ಹೊಯ್ಸಳ  (Hoysala) ಸಿನಿಮಾ ಮಾರ್ಚ್ 30 ರಂದು ಅದ್ಧೂರಿಯಾಗೆ ತೆರೆಗೆ ಬರುತ್ತಿದೆ. ನಟ ಕಿಚ್ಚ ಸುದೀಪ್ (Sudeep) ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಸಿನಿಮಾಕ್ಕೆ ಶುಭ ಹಾರೈಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಪ್ರಕಟಿಸಿದ್ದಾರೆ. ವಿಶೇಷವೆಂದರೆ ಕನ್ನಡ ಚಿತ್ರರಂಗದಿಂದ ಬಹುತೇಕ ದೂರವಾಗಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸಹ ಈ ಸಿನಿಮಾಕ್ಕೆ ಶುಭ ಹಾರೈಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಹೊಯ್ಸಳ ಸಿನಿಮಾದ 17 ಸೆಕೆಂಡ್​ನ ವಿಡಿಯೋವನ್ನು ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ, ನಟ ಡಾಲಿ ಧನಂಜಯ್​ ಅನ್ನು ಟ್ಯಾಗ್ ಮಾಡಿ ಹೊಯ್ಸಳ ಸಿನಿಮಾಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ. ಅದೇ ಪೋಸ್ಟ್ ಅನ್ನು ನಿರ್ಮಾಪಕ ವಿಜಯ್ ಕಿರಗಂದೂರು, ನಾಯಕಿ ಅಮೃತಾ ಐಯ್ಯಂಗಾರ್, ಕೆಆರ್​ಜಿ ಸ್ಟುಡಿಯೋಸ್, ನಿರ್ದೇಶಕ ವಿಜಯ್, ಕಾರ್ತಿಕ್ ಗೌಡ, ನಿರ್ಮಾಪಕ ಯೋಗಿರಾಜು, ಸಿನಿಮಾಟೊಗ್ರಾಫರ್ ಕಾರ್ತಿಕ್, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಆನಂದ್ ಆಡಿಯೋ ಅನ್ನು ಸಹ ಟ್ಯಾಗ್ ಮಾಡಿದ್ದಾರೆ.

ಹೊಯ್ಸಳ ಸಿನಿಮಾಕ್ಕೆ ಶುಭ ಹಾರೈಸಿ ಸ್ಟೋರಿ ಹಾಕಿರುವ ಜೊತೆಗೆ ನಾಳೆ ಹೊಯ್ಸಳ ಸಿನಿಮಾದ ಜೊತೆಗೇ ಬಿಡುಗಡೆ ಆಗುತ್ತಿರುವ ತೆಲುಗು ಸಿನಿಮಾ ದಸರಾ ಬಗ್ಗೆಯೂ ಸ್ಟೋರಿ ಹಾಕಿದ್ದಾರೆ. ‘ನಾನಿ, ಕೀರ್ತಿ ಸುರೇಶ್, ದೀಕ್ಷಿತ್ ಹಾಗೂ ಇಡೀಯ ದಸರಾ ಚಿತ್ರತಂಡಕ್ಕೆ ದೊಡ್ಡ ಚಪ್ಪಾಳೆ. ನಿಮ್ಮೆಲ್ಲರಿಗೂ ನನ್ನ ಕಡೆಯಿಂದ ಶುಭ ಹಾರೈಕೆಗಳು. ಸಿನಿಮಾದ ಪೋಸ್ಟರ್ ಸಖತ್ ಆಗಿದೆ ಆಗಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಕಾತರಳಾಗಿ ಕಾಯುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ನಟ ನಾನಿ, ಕೀರ್ತಿ ಸುರೇಶ್ ಹಾಗೂ ಕನ್ನಡಿಗರಾಗಿರುವ ದೀಕ್ಷಿತ್​ಗೆ ಪೋಸ್ಟ್ ಅನ್ನು ಟ್ಯಾಗ್ ಮಾಡಿದ್ದಾರೆ.

ಹೊಯ್ಸಳ ಸಿನಿಮಾದ ಜೊತೆಗೆ ದಸರಾ ಸಿನಿಮಾ ಸಹ ಮಾರ್ಚ್ 30 ರಂದೇ ಬಿಡುಗಡೆ ಆಗುತ್ತಿದೆ. ದೊಡ್ಡ ಬಜೆಟ್​ನ ಇದು ಪ್ಯಾನ್​ ಇಂಡಿಯಾ ಸಿನಿಮಾ ಸಹ ಆಗಿದೆ. ಬಹುತೇಕ ತೆಲುಗು ಚಿತ್ರರಂಗದಲ್ಲಿಯೇ ಹೆಚ್ಚು ಗುರುತಿಸಿಕೊಳ್ಳುತ್ತಿರುವ ರಶ್ಮಿಕಾ ಸಹಜವಾಗಿಯೇ ತೆಲುಗು ಸಿನಿಮಾದ ಬಗ್ಗೆ ತುಸು ಹೆಚ್ಚೇ ಕಾಳಜಿ, ಪ್ರೇಮ ತೋರಿಸಿದ್ದಾರೆ ತಮ್ಮ ಇನ್​ಸ್ಟಾ ಸ್ಟೋರಿಯಲ್ಲಿ.

ಇದನ್ನೂ ಓದಿಬೆಂಗಳೂರಲ್ಲಿ ಹೊಯ್ಸಳಕ್ಕಿಂತಲೂ ಪರಭಾಷೆ ಸಿನಿಮಾಗಳದ್ದೇ ಅಬ್ಬರ! ಯಾವ ಸಿನಿಮಾಕ್ಕೆ ಎಷ್ಟು ಶೋ?

ರಶ್ಮಿಕಾರ ಸಿನಿಮಾ ವಿಷಯಕ್ಕೆ ಬರುವುದಾದರೆ, ರಶ್ಮಿಕಾ ಇದೀಗ ಬಾಲಿವುಡ್​ನಲ್ಲಿ ಸೆಟಲ್ ಆಗುವ ಯೋಜನೆಯಲ್ಲಿದ್ದಾರೆ. ಈಗಾಗಲೇ ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದು ಎರಡು ಬಿಡುಗಡೆ ಆಗಿವೆ. ಇದೀಗ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಜೊತೆಗೆ ಅನಿಮಲ್ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಟೈಗರ್ ಶ್ರಾಫ್ ಜೊತೆಗೆ ಒಂದು ಸಿನಿಮಾದಲ್ಲಿ ನಟಿಸಲಿದ್ದಾರೆ. ಇನ್ನು ತೆಲುಗಿನಲ್ಲಿ ಪುಷ್ಪ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಟ ನಿತಿನ್ ಜೊತೆಗೆ ಇತ್ತೀಚೆಗಷ್ಟೆ ಹೊಸ ಸಿನಿಮಾಕ್ಕೆ ಸಹಿ ಹಾಕಿದ್ದು ಸಿನಿಮಾದ ಮುಹೂರ್ತವೂ ಇತ್ತೀಚೆಗಷ್ಟೆ ಮುಗಿದು ಚಿತ್ರೀಕರಣ ಪ್ರಾರಂಭವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:09 pm, Wed, 29 March 23

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್