ಬೆಂಗಳೂರಲ್ಲಿ ಹೊಯ್ಸಳಕ್ಕಿಂತಲೂ ಪರಭಾಷೆ ಸಿನಿಮಾಗಳದ್ದೇ ಅಬ್ಬರ! ಯಾವ ಸಿನಿಮಾಕ್ಕೆ ಎಷ್ಟು ಶೋ?

ಬೆಂಗಳೂರಿನಲ್ಲಿ ಪರಭಾಷಾ ಸಿನಿಮಾಗಳ ಅಬ್ಬರ ಮುಂದುವರೆದಿದೆ. ಡಾಲಿ ಧನಂಜಯ್ ನಟನೆಯ ಹೊಯ್ಸಳ ಸಿನಿಮಾ ಮಾರ್ಚ್ 30 ರಂದು ಬಿಡುಗಡೆ ಆಗುತ್ತಿದ್ದು, ಅದೇ ದಿನ ಬಿಡುಗಡೆ ಆಗುತ್ತಿರುವ ಪರಭಾಷೆ ಸಿನಿಮಾಗಳು ಹೊಯ್ಸಳಗಿಂತಲೂ ಹೆಚ್ಚು ಶೋಗಳನ್ನು ಪಡೆದುಕೊಂಡಿವೆ.

ಬೆಂಗಳೂರಲ್ಲಿ ಹೊಯ್ಸಳಕ್ಕಿಂತಲೂ ಪರಭಾಷೆ ಸಿನಿಮಾಗಳದ್ದೇ ಅಬ್ಬರ! ಯಾವ ಸಿನಿಮಾಕ್ಕೆ ಎಷ್ಟು ಶೋ?
ಹೊಯ್ಸಳ ಸಿನಿಮಾ
Follow us
ಮಂಜುನಾಥ ಸಿ.
|

Updated on: Mar 29, 2023 | 8:23 PM

ಈ ವಾರ ಸಿನಿಪ್ರೇಮಿಗಳಿಗೆ ಹಬ್ಬ. ಕನ್ನಡ ಸೇರಿದಂತೆ ಹಲವು ಭಾಷೆಗಳ ಟಾಪ್ ನಟರ ಬಿಗ್ ಬಜೆಟ್ ಸಿನಿಮಾಗಳು ಈ ಗುರುವಾರ ಹಾಗೂ ಶುಕ್ರವಾರ ಬಿಡುಗಡೆ ಆಗುತ್ತಿವೆ. ಡಾಲಿ ಧನಂಜಯ್ (Daali Dhananjay) ನಟನೆಯ ಹೊಯ್ಸಳ (Hoysala) ಸಿನಿಮಾ ಸೇರಿದಂತೆ ತೆಲುಗು, ತಮಿಳು, ಹಿಂದಿ ಭಾಷೆಗಳ ತಲಾ ಒಂದೊಂದು ಬಿಗ್ ಬಜೆಟ್ ಸಿನಿಮಾಗಳು ಇದೇ ಗುರುವಾರ ತೆರೆಗೆ ಬರುತ್ತಿವೆ. ಆದರೆ ಬೆಂಗಳೂರಿನಲ್ಲಿ ಕನ್ನಡ ಸಿನಿಮಾಕ್ಕಿಂತಲೂ ಪರಭಾಷೆಯ ಸಿನಿಮಾಗಳಿಗೆ ಹೆಚ್ಚು ಶೋಗಳು ದೊರೆತಿವೆ!

ಬೆಂಗಳೂರಿನಲ್ಲಿ ಪರಭಾಷೆ ಸಿನಿಮಾಗಳ ಅಬ್ಬರ ಮೊದಲಿನಿಂದಲೂ ಜೋರಾಗಿಯೇ ಇದೆ. ಅದೇ ಈಗಲೂ ಮುಂದುವರೆದಿದ್ದು, ಕನ್ನಡದ ಹೊಯ್ಸಳ ಸಿನಿಮಾಕ್ಕಿಂತಲೂ ಹೆಚ್ಚು ಶೋಗಳನ್ನು ಪರಭಾಷೆಯ ಸಿನಿಮಾಗಳು ಪಡೆದುಕೊಂಡಿವೆ. ಕೆಆರ್​ಜಿ ಪ್ರೊಡಕ್ಷನ್​ನಿಂದ ಮೂಡಿ ಬಂದಿರುವ ಹೊಯ್ಸಳ ಕನ್ನಡ ಸಿನಿಮಾ ಬೆಂಗಳೂರಿನಲ್ಲಿ ಮೊದಲ ದಿನ (ಮಾರ್ಚ್ 30) 236 ಶೋಗಳನ್ನು ಪಡೆದುಕೊಂಡಿದೆ. ಅದೇ ದಿನ ಬಿಡುಗಡೆ ಆಗುತ್ತಿರುವ ತೆಲುಗಿನ ನಾನಿ ನಟನೆಯ ದಸರಾ ಸಿನಿಮಾ ಒಟ್ಟು 320 ಶೋಗಳನ್ನು ಬೆಂಗಳೂರಿನಲ್ಲಿ ಪಡೆದುಕೊಂಡಿದೆ. ಇದರಲ್ಲಿ ಕನ್ನಡ ಡಬ್ ಆವೃತ್ತಿಯ ಐದು ಶೋಗಳು ಸೇರಿಕೊಂಡಿವೆ. ದಸರಾ ತೆಲುಗು ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡುತ್ತಿರುವುದು ಹೊಯ್ಸಳ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಕೆಆರ್​ಜಿ ಸ್ಟುಡಿಯೋಸ್ ಎಂಬುದು ಗಮನಿಸಬೇಕಾದ ಅಂಶ.

ಇನ್ನು ಇದೇ ದಿನ ಬಿಡುಗಡೆ ಆಗುತ್ತಿರುವ ಅಜಯ್ ದೇವಗನ್ ನಟಿಸಿರುವ ಹಿಂದಿ ಸಿನಿಮಾ ಭೋಲಾ ಸಹ ಭಾರಿ ಸಂಖ್ಯೆಯ ಶೋಗಳನ್ನು ಬೆಂಗಳೂರಿನಲ್ಲಿ ಬಾಚಿಕೊಂಡಿದೆ. 3ಡಿಯಲ್ಲಿಯೂ ಬಿಡುಗಡೆ ಆಗುತ್ತಿರುವ ಭೋಲಾ ಸಿನಿಮಾ ಮೊದಲ ದಿನ ಬೆಂಗಳೂರಿನಲ್ಲಿ 277 ಶೋಗಳನ್ನು ಪಡೆದುಕೊಂಡಿದೆ. ಇನ್ನು ತಮಿಳಿನ ಸಿಂಭು ನಟಿಸಿರುವ ಪತ್ತು ತಲಾ ಸಿನಿಮಾ ಸಹ ನಾಳೆಯೇ ಬಿಡುಗಡೆ ಆಗುತ್ತಿದ್ದು, ಇದು ಸಹ ಬಹುತೇಕ ಹೊಯ್ಸಳ ಸಿನಿಮಾದಷ್ಟೆ ಶೋಗಳನ್ನು ಬೆಂಗಳೂರಿನಲ್ಲಿ ಪಡೆದುಕೊಂಡಿದೆ. ಪತ್ತು ತಲಾ ಸಿನಿಮಾವು 230 ಶೋಗಳನ್ನು ಬೆಂಗಳೂರಿನಲ್ಲಿ ಪಡೆದುಕೊಂಡಿದೆ. ಇದು ಕನ್ನಡದ ಮಫ್ತಿ ಸಿನಿಮಾದ ರೀಮೇಕ್ ಎಂಬುದು ವಿಶೇಷ.

ಇದನ್ನೂ ಓದಿ: Multiplex: ಜನರು ಹೊರಗಿನ ಆಹಾರ ತರದಂತೆ ನಿರ್ಬಂಧಿಸುವ ಹಕ್ಕು ಚಿತ್ರಮಂದಿರದ ಮಾಲೀಕರಿಗೆ ಇದೆ: ಸುಪ್ರೀಂ ಕೋರ್ಟ್​

ಶುಕ್ರವಾರ (ಮಾರ್ಚ್ 31) ರಂದು ವಿಜಯ್ ಸೇತುಪತಿ ನಟನೆಯ ತಮಿಳು ಸಿನಿಮಾ ವಿಡುದಲೈ ಭಾಗ 1 ಸಿನಿಮಾ ಬಿಡುಗಡೆ ಆಗಲಿಕ್ಕಿದ್ದು, ವೆಟ್ರಿಮಾರನ್ ನಿರ್ದೇಶನದ ಈ ಸಿನಿಮಾ ಸಹ ಮೊದಲ ದಿನ ಬೆಂಗಳೂರಿನಲ್ಲಿ 150 ಕ್ಕೂ ಹೆಚ್ಚು ಶೋಗಳನ್ನು ಪಡೆದುಕೊಂಡಿದೆ. ಇನ್ನು ಕಳೆದ ವಾರವೇ ಬಿಡುಗಡೆ ಆಗಿರುವ ಇಂಗ್ಲೀಷ್ ಸಿನಿಮಾ ಜಾನ್ ವಿಕ್​ ಮಾರ್ಚ್ 30 ರಂದು ಸರಿ ಸುಮಾರು 200 ಶೊಗಳ ಪ್ರದರ್ಶನ ಕಾಣಲಿದೆ.

ಹೊಯ್ಸಳ ಸಿನಿಮಾ ಡಾಲಿಗೆ 25ನೇ ಸಿನಿಮಾ ಆಗಿದ್ದು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ನವೀನ್ ವಿಲನ್ ಆಗಿ ನಟಿಸಿರುವುದು ವಿಶೇಷ. ಸಿನಿಮಾವನ್ನು ವಿಜಯ್ ನಿರ್ದೇಶನ ಮಾಡಿದ್ದು ಅಮೃತಾ ಐಯ್ಯಂಗಾರ್ ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ರಾಜೇಶ್ ನಟರಂಗ, ಪ್ರತಾಪ್ ನಾರಾಯಣ್ ಇನ್ನೂ ಕೆಲವರು ನಟಿಸಿದ್ದಾರೆ. ನಿರ್ಮಾಣ ಮಾಡಿರುವುದು ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್