AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದ ಇಬ್ಬರು ಸ್ಟಾರ್ ಡೈರೆಕ್ಟರ್ ಜೊತೆ ಸಿನಿಮಾ ಮಾಡಲಿದ್ದಾರೆ ರಾಮ್ ಚರಣ್; ಗುಟ್ಟು ರಟ್ಟು

ರಾಮ್ ಚರಣ್​ 15ನೇ ಸಿನಿಮಾ ‘ಗೇಮ್ ಚೇಂಜರ್​’ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ಜೊತೆ ಜೊತೆಗೆ ಅವರು ಹೊಸ ಸಿನಿಮಾ ಕೂಡ ಒಪ್ಪಿಕೊಳ್ಳುತ್ತಿದ್ದಾರೆ.

ಕನ್ನಡದ ಇಬ್ಬರು ಸ್ಟಾರ್ ಡೈರೆಕ್ಟರ್ ಜೊತೆ ಸಿನಿಮಾ ಮಾಡಲಿದ್ದಾರೆ ರಾಮ್ ಚರಣ್; ಗುಟ್ಟು ರಟ್ಟು
ರಾಮ್ ಚರಣ್
Follow us
ರಾಜೇಶ್ ದುಗ್ಗುಮನೆ
|

Updated on: Mar 29, 2023 | 7:56 AM

‘ಆರ್​ಆರ್​ಆರ್​’ ಚಿತ್ರದ (RRR Movie) ‘ನಾಟು ನಾಟು..’ ಆಸ್ಕರ್ ಗೆದ್ದಿದ್ದು ರಾಮ್ ಚರಣ್ ಪಾಲಿಗೆ ಹೆಮ್ಮೆ ತಂದಿದೆ. ಇದರಿಂದ ಅವರ ಖ್ಯಾತಿ ಹೆಚ್ಚಿದೆ. ಹಾಗಂತ ಅವರು ಈಗ ಸುಮ್ಮನೆ ಕೂತಿಲ್ಲ. ಮುಂದಿನ ಚಿತ್ರಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮಾಡಲು ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಬರ್ತ್​ಡೇ ಆಚರಿಸಿಕೊಂಡರು. ಈ ಸಂಭ್ರಮಕ್ಕೆ ಇಬ್ಬರು ಕನ್ನಡದ ಡೈರೆಕ್ಟರ್​ಗಳು ಕೂಡ ಸಾಕ್ಷಿ ಆದರು. ಈ ನಿರ್ದೇಶಕರ ಜೊತೆ ರಾಮ್ ಚರಣ್ (Ram Charan) ಕೆಲಸ ಮಾಡಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ರಾಮ್ ಚರಣ್ ಅವರು ಉಳಿದ ಹೀರೋಗಳಂತಲ್ಲ. ಸಿನಿಮಾ ಆಯ್ಕೆಯಲ್ಲಿ ಅವರು ಹೆಚ್ಚು ಚ್ಯೂಸಿ. ಕುಟುಂಬದ ಕಡೆ ಗಮನ ನೀಡುವ ಕಾರಣಕ್ಕೆ ಪ್ರತಿ ಸಿನಿಮಾ ಕೆಲಸಗಳ ಮಧ್ಯೆ ದೊಡ್ಡ ಬ್ರೇಕ್ ತೆಗೆದುಕೊಳ್ಳುತ್ತಾರೆ. ಸದ್ಯ ಅವರು 15ನೇ ಸಿನಿಮಾ ‘ಗೇಮ್ ಚೇಂಜರ್​’ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ಜೊತೆ ಜೊತೆಗೆ ಅವರು ಹೊಸ ಸಿನಿಮಾ ಕೂಡ ಒಪ್ಪಿಕೊಳ್ಳುತ್ತಿದ್ದಾರೆ. ರಾಮ್ ಚರಣ್ ಅವರು ಮುಂದಿನ ದಿನಗಳಲ್ಲಿ ಪ್ರಶಾಂತ್ ನೀಲ್ ಹಾಗೂ ನರ್ತನ್ ಜೊತೆ ಕೆಲಸ ಮಾಡುತ್ತಾರೆ ಎನ್ನಲಾಗಿದೆ.

ನರ್ತನ್ ಹಾಗೂ ಪ್ರಶಾಂತ್ ನೀಲ್ ಅವರು ರಾಮ್ ಚರಣ್ ಬರ್ತ್​ಡೇ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ರಾಮ್ ಚರಣ್ ಆಯೋಜಿಸಿದ್ದ ಪಾರ್ಟಿಗೆ ಹಾಜರಿ ಹಾಕಿದವರಲ್ಲಿ ಬಹುತೇಕರು ರಾಮ್ ಚರಣ್​ ಜೊತೆ ಕೆಲಸ ಮಾಡಿದವರೇ ಆಗಿದ್ದರು. ನರ್ತನ್ ಹಾಗೂ ಪ್ರಶಾಂತ್​ ನೀಲ್ ಈವರೆಗೆ ರಾಮ್ ಚರಣ್ ಜೊತೆ ಕೆಲಸ ಮಾಡಿಲ್ಲ. ಆದಾಗ್ಯೂ ಈ ಪಾರ್ಟಿಗೆ ಅವರಿಗೆ ಆಹ್ವಾನ ಇತ್ತು. ಈ ಕಾರಣಕ್ಕೆ ಇಬ್ಬರೂ ಸಿನಿಮಾ ಮಾಡೋದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಇದನ್ನೂ ಓದಿ:  ‘ಗ್ಲೋಬಲ್​ ಸ್ಟಾರ್​’ ಎಂಬ ಬಿರುದು ಬೇಡ ಅಂದಿ​ದ್ದೇಕೆ ರಾಮ್​ ಚರಣ್​? ಇಲ್ಲಿದೆ ಇನ್​ಸೈಡ್​ ವಿಷಯ

‘ಗೇಮ್ ಚೇಂಜರ್​’ ಸಿನಿಮಾ ಕೆಲಸ ಮುಗಿದ ಬಳಿಕ ರಾಮ್ ಚರಣ್ ಅವರು ಆರು ತಿಂಗಳು ಬ್ರೇಕ್ ತೆಗೆದುಕೊಳ್ಳಲಿದ್ದಾರೆ ಎಂದು ವರದಿ ಆಗಿದೆ. ರಾಮ್ ಚರಣ್ ಹಾಗೂ ಪತ್ನಿ ಉಪಾಸನಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಗು ಜನಿಸಿದ ಬಳಿಕ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಬೇಕು ಎಂಬುದು ರಾಮ್ ಚರಣ್ ಆಸೆ. ಇನ್ನು, ಪ್ರಶಾಂತ್ ನೀಲ್ ಅವರು ‘ಸಲಾರ್’ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಇದಾದ ಬಳಿಕ ಜೂನಿಯರ್ ಎನ್​ಟಿಆರ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಲಿದ್ದಾರೆ. ನರ್ತನ್​ ‘ಭೈರತಿ ರಣಗಲ್’ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ, ರಾಮ್ ಚರಣ್ ಜೊತೆಗಿನ ಈ ಎರಡು ಡೈರೆಕ್ಟರ್​ಗಳ ಸಿನಿಮಾ ಸೆಟ್ಟೇರೋದು ವಿಳಂಬ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ