AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ram Charan: ‘ಗ್ಲೋಬಲ್​ ಸ್ಟಾರ್​’ ಎಂಬ ಬಿರುದು ಬೇಡ ಅಂದಿ​ದ್ದೇಕೆ ರಾಮ್​ ಚರಣ್​? ಇಲ್ಲಿದೆ ಇನ್​ಸೈಡ್​ ವಿಷಯ

Game Changer | Global Star: ‘ಗೇಮ್​ ಚೇಂಜರ್​’ ಸಿನಿಮಾದ ಪೋಸ್ಟರ್​ನಲ್ಲಿ ರಾಮ್​ ಚರಣ್​ ಅವರಿಗೆ ‘ಗ್ಲೋಬಲ್​ ಸ್ಟಾರ್​’ ಎಂಬ ಬಿರುದು ಇರುತ್ತದೆ ಎಂದು ಊಹಿಸಲಾಗಿತ್ತು. ಆದರೆ ಅದು ನಿಜವಾಗಿಲ್ಲ.

Ram Charan: ‘ಗ್ಲೋಬಲ್​ ಸ್ಟಾರ್​’ ಎಂಬ ಬಿರುದು ಬೇಡ ಅಂದಿ​ದ್ದೇಕೆ ರಾಮ್​ ಚರಣ್​? ಇಲ್ಲಿದೆ ಇನ್​ಸೈಡ್​ ವಿಷಯ
ರಾಮ್ ಚರಣ್
ಮದನ್​ ಕುಮಾರ್​
|

Updated on:Mar 27, 2023 | 8:02 PM

Share

ನಟ ರಾಮ್​ ಚರಣ್​ (Ram Charan) ಅವರ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅವರು ನಟಿಸಿದ ‘ಆರ್​ಆರ್​ಆರ್​’ ಸಿನಿಮಾ ವಿದೇಶದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದು ಬಂದಿದೆ. ಅದರಲ್ಲೂ ‘ನಾಟು ನಾಟು..’ ಹಾಡಿಗೆ ಆಸ್ಕರ್​ ಪ್ರಶಸ್ತಿ ಸಿಕ್ಕ ಬಳಿಕ ಅವರ ಚಾರ್ಮ್​ ಹೆಚ್ಚಾಗಿದೆ. ರಾಮ್​ ಚರಣ್​ ನಟಿಸಲಿರುವ ಹೊಸ ಸಿನಿಮಾಗಳ ಮೇಲೆ ಅಭಿಮಾನಿಗಳು ದೊಡ್ಡ ನಿರೀಕ್ಷೆ ಇಟ್ಟುಕೊಳ್ಳುವಂತಾಗಿದೆ. ಈ ನಡುವೆ ಅವರಿಗೆ ‘ಗ್ಲೋಬಲ್​ ಸ್ಟಾರ್​’ (Global Star) ಎಂಬ ಬಿರುದು ನೀಡಲಾಗಿದೆ. ಆದರೆ, ಆ ಬಿರುದನ್ನು ಬಳಸಲು ಸ್ವತಃ ರಾಮ್​ ಚರಣ್​ ಅವರು ಗ್ರೀನ್​ ಸಿಗ್ನಲ್​ ನೀಡಿಲ್ಲ. ಇಂದು (ಮಾರ್ಚ್​ 27) ಅವರ ಹುಟ್ಟುಹಬ್ಬದ ಪ್ರಯುಕ್ತ ಅನಾವರಣಗೊಂಡ ‘ಗೇಮ್​ ಚೇಂಜರ್​’ (Game Changer Movie) ಸಿನಿಮಾದ ಪೋಸ್ಟರ್​ನಲ್ಲಿ ಈ ಬಿರುದು ಕಾಣಿಸಿಲ್ಲ. ಈ ಕುರಿತು ಟಾಲಿವುಡ್​ ಅಂಗಳದಲ್ಲಿ ಚರ್ಚೆ ಆಗುತ್ತಿದೆ.

‘ಆರ್​ಆರ್​ಆರ್​’ ಸಿನಿಮಾವನ್ನು ಜಾಗತಿಕ ಮಟ್ಟದ ಪ್ರಶಸ್ತಿಗಳ ಸ್ಪರ್ಧೆಗೆ ಕಳಿಸಿದಾಗ, ಅದರ ಪ್ರಚಾರದ ಸಲುವಾಗಿ ರಾಮ್​ ಚರಣ್​ ಅವರು ಚಿತ್ರತಂಡದ ಜೊತೆ ವಿದೇಶಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿನ ಕೆಲವು ವೇದಿಕೆಗಳಲ್ಲಿ ರಾಮ್​ ಚರಣ್​ ಅವರನ್ನು ‘ಗ್ಲೋಬಲ್​ ಸ್ಟಾರ್​’ ಎಂದು ಕರೆಯಲಾಯಿತು. ಆ ಬಳಿಕ ಚಿತ್ರರಂಗದವರು ಕೂಡ ಅವರನ್ನು ಹಾಗೆಯೇ ಕರೆಯಲು ಆರಂಭಿಸಿದರು.

ಇದನ್ನೂ ಓದಿ
Image
ನರ್ತನ್ ಚಿತ್ರಕ್ಕೆ ರಾಮ್​ ಚರಣ್ ಗ್ರೀನ್ ಸಿಗ್ನಲ್​? ಕೇಳಿ ಬರ್ತಿದೆ ಹೊಸ ಸುದ್ದಿ
Image
‘ಆರ್​ಆರ್​ಆರ್​’ನಿಂದ ರಾಮ್​ ಚರಣ್​ಗೆ ಹೆಚ್ಚಿತು ಬೇಡಿಕೆ; ಬಾಲಿವುಡ್​ನಿಂದ ಬಂತು ಎರಡೆರಡು ಆಫರ್​
Image
ನೆಟ್​ಫ್ಲಿಕ್ಸ್​ ಜತೆ ಕೈ ಜೋಡಿಸಲಿರುವ ರಾಮ್​ ಚರಣ್​? ಹೊಸ ಡೀಲ್​ ಸಲುವಾಗಿ ಮುಂಬೈನಲ್ಲಿ ಮಾತುಕತೆ
Image
ವಿವಾದದಲ್ಲಿ ರಾಮ್​ ಚರಣ್​ ಪತ್ನಿ ಉಪಾಸನಾ; ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ

‘ಗೇಮ್​ ಚೇಂಜರ್​’ ಪೋಸ್ಟರ್​ನಲ್ಲಿ ರಾಮ್​ ಚರಣ್​ಗೆ ‘ಗ್ಲೋಬಲ್​ ಸ್ಟಾರ್​’ ಎಂಬ ಬಿರುದು ಇರುತ್ತದೆ ಎಂದು ಊಹಿಸಲಾಗಿತ್ತು. ಆದರೆ ಅದು ನಿಜವಾಗಿಲ್ಲ. ಅಭಿಮಾನಿಗಳಿಗೆ ಈ ವಿಷಯದಲ್ಲಿ ಬೇಸರ ಇದೆ. ಅಂದಹಾಗೆ, ರಾಮ್​ ಚರಣ್​ ಅವರು ಈ ಬಿರುದು ಈಗಲೇ ಬೇಡ ಎಂದಿದ್ದಾರೆ ಎನ್ನುತ್ತಿವೆ ಟಾಲಿವುಡ್​ ಇನ್​ಸೈಡ್​​ ಮೂಲಗಳು.

‘ಆರ್​ಆರ್​ಆರ್​’ ಸಿನಿಮಾ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ ಎಂಬುದು ನಿಜ. ಆದರೆ ಗ್ಲೋಬಲ್​ ಸ್ಟಾರ್​ ಎಂಬ ಬಿರುದು ಪಡೆಯಲು ಇಷ್ಟು ಮಾತ್ರವೇ ಸಾಕಾಗಲ್ಲ ಎಂಬುದು ರಾಮ್​ ಚರಣ್​ ಅಭಿಪ್ರಾಯವಂತೆ. ಅವರ ಇನ್ನೂ ಒಂದೆರಡು ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಹವಾ ಸೃಷ್ಟಿಸಿದರೆ, ಆಗ ಗ್ಲೋಬಲ್​ ಸ್ಟಾರ್​ ಎಂಬ ಬಿರುದಿಗೆ ಅರ್ಥ ಬರುತ್ತದೆ. ಹಾಗಾಗಿ ಈಗಲೇ ಆ ಬಿರುದನ್ನು ಬಳಸುವುದು ಬೇಡ ಅಂತ ‘ಗೇಮ್​ ಚೇಂಜರ್​’ ಚಿತ್ರತಂಡಕ್ಕೆ ರಾಮ್​ ಚರಣ್​ ಸೂಚನೆ ನೀಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

Game Changer: ರಾಮ್ ಚರಣ್ ಹೊಸ ಚಿತ್ರದ ಟೈಟಲ್ ರಿವೀಲ್​; ‘ಗೇಮ್ ಚೇಂಜರ್’ ಆದ ನಟ

‘ಗೇಮ್​ ಚೇಂಜರ್​’ ಸಿನಿಮಾಗೆ ಶಂಕರ್​ ನಿರ್ದೇಶನ ಮಾಡುತ್ತಿದ್ದಾರೆ. ಇದು ರಾಮ್​ ಚರಣ್​ ನಟನೆಯ 15ನೇ ಸಿನಿಮಾ. ಅದ್ದೂರಿ ಬಜೆಟ್​ನಲ್ಲಿ ಈ ಚಿತ್ರ ನಿರ್ಮಾಣ ಆಗುತ್ತಿದ್ದು, ನಿರ್ಮಾಪಕ ದಿಲ್​ ರಾಜು ಬಂಡವಾಳ ಹೂಡುತ್ತಿದ್ದಾರೆ. ರಾಮ್​ ಚರಣ್​ಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:02 pm, Mon, 27 March 23

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್