- Kannada News Photo gallery Ram Charan Birthday celebrated by Kiara Advani and Shankar in RC15 shooting set
Ram Charan Birthday: ಒಂದು ದಿನ ಮುಂಚಿತವಾಗಿ ರಾಮ್ ಚರಣ್ ಬರ್ತ್ಡೇ ಆಚರಿಸಿದ ಕಿಯಾರಾ ಅಡ್ವಾಣಿ, ಶಂಕರ್
Kiara Advani | Ram Charan: ‘ಆರ್ಸಿ 15’ ಸಿನಿಮಾದ ಶೂಟಿಂಗ್ ಸೆಟ್ನಲ್ಲಿ ರಾಮ್ ಚರಣ್ ಅವರ ಹುಟ್ಟುಹಬ್ಬ ಆಚರಿಸಲಾಗಿದೆ. ಈ ಫೋಟೋಗಳು ಸಖತ್ ವೈರಲ್ ಆಗಿವೆ.
Updated on:Mar 26, 2023 | 11:03 AM

ನಟ ರಾಮ್ ಚರಣ್ ಅವರಿಗೆ ಮಾರ್ಚ್ 27ರಂದು ಹುಟ್ಟುಹಬ್ಬದ ಸಂಭ್ರಮ. ಅಂದು ಫ್ಯಾನ್ಸ್ ಅದ್ದೂರಿಯಾಗಿ ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಆಚರಿಸಲಿದ್ದಾರೆ. ಆದರೆ ಒಂದು ದಿನ ಮುಂಚಿತವಾಗಿ ‘ಆರ್ಸಿ 15’ ತಂಡದವರು ಸೆಲೆಬ್ರೇಟ್ ಮಾಡಿದ್ದಾರೆ.

ರಾಮ್ ಚರಣ್ ಅವರ 15ನೇ ಸಿನಿಮಾಗೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಇದನ್ನು ತಾತ್ಕಾಲಿಕವಾಗಿ ‘ಆರ್ಸಿ 15’ ಎಂದು ಕರೆಯಲಾಗುತ್ತಿದೆ. ಹೈದರಾಬಾದ್ನಲ್ಲಿ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ.

‘ಆರ್ಸಿ 15’ ಸಿನಿಮಾದಲ್ಲಿ ರಾಮ್ ಚರಣ್ ಅವರಿಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಶಂಕರ್ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಶೂಟಿಂಗ್ ಬಿಡುವಿನಲ್ಲಿ ಬರ್ತ್ಡೇ ಆಚರಿಸಲಾಗಿದೆ.

ಶೂಟಿಂಗ್ ಸೆಟ್ಗೆ ಕಾಲಿಟ್ಟ ರಾಮ್ ಚರಣ್ ಅವರ ಮೇಲೆ ಹೂವಿನ ಮಳೆ ಸುರಿಸಲಾಗಿದೆ. ಕೇಕ್ ಕಟ್ ಮಾಡುವ ಮೂಲಕ ಇಡೀ ತಂಡದವರು ಸೇರಿ ಅವರ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.

ರಾಮ್ ಚರಣ್ ನಟಿಸಿದ ‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು..’ ಹಾಡು ಆಸ್ಕರ್ ಪ್ರಶಸ್ತಿ ಗೆದ್ದಿದೆ. ಅಮೆರಿಕದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭ ಮುಗಿಸಿಕೊಂಡು ಬಂದಿರುವ ರಾಮ್ ಚರಣ್ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.
Published On - 11:03 am, Sun, 26 March 23




