AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ram Charan Birthday: ಒಂದು ದಿನ ಮುಂಚಿತವಾಗಿ ರಾಮ್​ ಚರಣ್​ ಬರ್ತ್​ಡೇ ಆಚರಿಸಿದ ಕಿಯಾರಾ ಅಡ್ವಾಣಿ, ಶಂಕರ್​

Kiara Advani | Ram Charan: ‘ಆರ್​ಸಿ 15’ ಸಿನಿಮಾದ ಶೂಟಿಂಗ್ ಸೆಟ್​ನಲ್ಲಿ ರಾಮ್​ ಚರಣ್​ ಅವರ ಹುಟ್ಟುಹಬ್ಬ ಆಚರಿಸಲಾಗಿದೆ. ಈ ಫೋಟೋಗಳು ಸಖತ್​ ವೈರಲ್​ ಆಗಿವೆ.

ಮದನ್​ ಕುಮಾರ್​
|

Updated on:Mar 26, 2023 | 11:03 AM

Share
ನಟ ರಾಮ್​ ಚರಣ್​ ಅವರಿಗೆ ಮಾರ್ಚ್​ 27ರಂದು ಹುಟ್ಟುಹಬ್ಬದ ಸಂಭ್ರಮ. ಅಂದು ಫ್ಯಾನ್ಸ್​ ಅದ್ದೂರಿಯಾಗಿ ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಆಚರಿಸಲಿದ್ದಾರೆ. ಆದರೆ ಒಂದು ದಿನ ಮುಂಚಿತವಾಗಿ ‘ಆರ್​ಸಿ 15’ ತಂಡದವರು ಸೆಲೆಬ್ರೇಟ್​ ಮಾಡಿದ್ದಾರೆ.

1 / 5
ರಾಮ್​ ಚರಣ್​ ಅವರ 15ನೇ ಸಿನಿಮಾಗೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಇದನ್ನು ತಾತ್ಕಾಲಿಕವಾಗಿ ‘ಆರ್​ಸಿ 15’ ಎಂದು ಕರೆಯಲಾಗುತ್ತಿದೆ. ಹೈದರಾಬಾದ್​ನಲ್ಲಿ ಈ ಸಿನಿಮಾದ ಶೂಟಿಂಗ್​​ ನಡೆಯುತ್ತಿದೆ.

2 / 5
‘ಆರ್​ಸಿ 15’ ಸಿನಿಮಾದಲ್ಲಿ ರಾಮ್​ ಚರಣ್​ ಅವರಿಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಶಂಕರ್​ ಅವರು ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಶೂಟಿಂಗ್​ ಬಿಡುವಿನಲ್ಲಿ ಬರ್ತ್​ಡೇ ಆಚರಿಸಲಾಗಿದೆ.

3 / 5
ಶೂಟಿಂಗ್​ ಸೆಟ್​ಗೆ ಕಾಲಿಟ್ಟ ರಾಮ್​ ಚರಣ್​ ಅವರ ಮೇಲೆ ಹೂವಿನ ಮಳೆ ಸುರಿಸಲಾಗಿದೆ. ಕೇಕ್​ ಕಟ್​ ಮಾಡುವ ಮೂಲಕ ಇಡೀ ತಂಡದವರು ಸೇರಿ ಅವರ ಹುಟ್ಟುಹಬ್ಬವನ್ನು ಸೆಲೆಬ್ರೇಟ್​ ಮಾಡಿದ್ದಾರೆ. ಈ ಫೋಟೋಗಳು ವೈರಲ್​ ಆಗಿವೆ.

4 / 5
ರಾಮ್​ ಚರಣ್​ ನಟಿಸಿದ ‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡು ಆಸ್ಕರ್​ ಪ್ರಶಸ್ತಿ ಗೆದ್ದಿದೆ. ಅಮೆರಿಕದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭ ಮುಗಿಸಿಕೊಂಡು ಬಂದಿರುವ ರಾಮ್​ ಚರಣ್​ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

5 / 5

Published On - 11:03 am, Sun, 26 March 23

Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us