AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ambareesh Memorial: ‘ಸಾವಿನ ನಂತರವೂ ಬದುಕಿರುವ ಸಾಧಕ ಅಂಬರೀಷ್​’: ಸ್ಮಾರಕ ಉದ್ಘಾಟನೆ ಬಳಿಕ ಬಸವರಾಜ ಬೊಮ್ಮಾಯಿ ಮಾತು

Basavaraj Bommai | Ambareesh Memorial: ‘ಅಂಬರೀಷ್​ ಅವರ ಸ್ಮಾರಕಕ್ಕೆ ನಾನೇ ಅಡಿಗಲ್ಲು ಹಾಕಿದ್ದು. ಇಂದು ನಾನೇ ಉದ್ಘಾಟನೆ ಮಾಡಿದ್ದೇನೆ. ಇದನ್ನು ದೇವರ ಇಚ್ಛೆ ಅಂತ ಭಾವಿಸುತ್ತೇನೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Ambareesh Memorial: ‘ಸಾವಿನ ನಂತರವೂ ಬದುಕಿರುವ ಸಾಧಕ ಅಂಬರೀಷ್​’: ಸ್ಮಾರಕ ಉದ್ಘಾಟನೆ ಬಳಿಕ ಬಸವರಾಜ ಬೊಮ್ಮಾಯಿ ಮಾತು
ಬಸವರಾಜ ಬೊಮ್ಮಾಯಿ
ಮದನ್​ ಕುಮಾರ್​
|

Updated on:Mar 27, 2023 | 9:35 PM

Share

ಮುಖ್ಯಾಂಶಗಳು

  • ಕಂಠೀರವ ಸ್ಟುಡಿಯೋ ಆವರಣದಲ್ಲಿ ಅಂಬರೀಷ್​ ಸ್ಮಾರಕ ಉದ್ಘಾಟನೆ
  • ‘ರೆಬೆಲ್​ ಸ್ಟಾರ್​’ ಪ್ರತಿಮೆ ಅನಾವರಣ ಮಾಡಿದ ಬಸವರಾಜ ಬೊಮ್ಮಾಯಿ
  • ಸ್ಮಾರಕ ಉದ್ಘಾಟನೆ ಬಳಿಕ ಅಂಬರೀಷ್​ ವ್ಯಕ್ತಿತ್ವದ ಬಗ್ಗೆ ಮಾತನಾಡಿದ ಸಿಎಂ

‘ರೆಬೆಲ್​ ಸ್ಟಾರ್​’ ಅಂಬರೀಷ್ (Ambareesh)​ ಅವರ ಅಭಿಮಾನಿಗಳ ಪಾಲಿಗೆ ಇಂದು (ಮಾರ್ಚ್​ 27) ವಿಶೇಷವಾದ ದಿನ. ಯಾಕೆಂದರೆ, ಈ ದಿನ ಅಂಬರೀಷ್​ ಅವರಿಗೆ ಸಂಬಂಧಿಸಿದ ಎರಡು ಪ್ರಮುಖ ಘಟನೆಗಳು ನಡೆದಿವೆ. ಬೆಂಗಳೂರಿನ ರೇಸ್​ ಕೋರ್ಸ್​ ರಸ್ತೆಗೆ ಅವರ ಹೆಸರನ್ನು ಇಡಲಾಗಿದೆ. ಅಲ್ಲದೇ, ಕಂಠೀರವ ಸ್ಟುಡಿಯೋ ಆವರಣದಲ್ಲಿ ಅಂಬರೀಷ್​ ಸ್ಮಾರಕ (Ambareesh Memorial) ಮತ್ತು ಪ್ರತಿಮೆ ಅನಾವರಣ ಆಗಿದೆ. ಇದರ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ನೆರವೇರಿಸಿದ್ದಾರೆ. ಬೊಮ್ಮಾಯಿ ಮತ್ತು ಅಂಬರೀಷ್​ ನಡುವೆ ಸ್ನೇಹವಿತ್ತು. ಆ ದಿನಗಳ ಬಗ್ಗೆ ಇಂದು ಸಿಎಂ ಮಾತನಾಡಿದ್ದಾರೆ. ಅಂಬರೀಷ್​ ಸ್ಮಾರಕ ಉದ್ಘಾಟನೆ ಬಳಿಕ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು.

ಅಂಬಿ ಸವಿ ನೆನಪಿಗಾಗಿ ಸ್ಮಾರಕ:

‘ಅಂಬರೀಷ್​ ಅವರ ನೆನಪು ಸದಾ ಕಾಲ ಇರುತ್ತದೆ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವವನು ಸಾಧಕ. ಹೀಗೆ ಅಂಬರೀಷ್​ ಅವರು ಸಾವಿನ ನಂತರವೂ ಬದುಕುತ್ತಿದ್ದಾರೆ. ಅವರ ಸವಿ ನೆನಪಿಗಾಗಿ ಈ ಸ್ಮಾರಕ, ಮ್ಯೂಸಿಯಂ ನಿರ್ಮಾಣಕ್ಕೆ ಅನುದಾನ ನೀಡಲಾಯಿತು. ಇಂದು ಉದ್ಘಾಟನೆ ಮಾಡಿದ್ದು ಸಂತಸ ತಂದಿದೆ’ ಎಂದಿದ್ದಾರೆ ಬಸವರಾಜ ಬೊಮ್ಮಾಯಿ.

ಮಾತು ಒರಟು, ಮನಸ್ಸು ಮೃದು:

‘ನನಗೆ ಅಂಬರೀಷ್​ ಅವರು ಅತ್ಯಂತ ಅತ್ಮೀಯ ಮಿತ್ರನಾಗಿದ್ದರು. ‘ಈ ಸ್ಮಾರಕಕ್ಕೆ ನಾನೇ ಅಡಿಗಲ್ಲು ಹಾಕಿದ್ದು. ಇಂದು ನಾನೇ ಉದ್ಘಾಟನೆ ಮಾಡಿದ್ದೇನೆ. ಇದನ್ನು ದೇವರ ಇಚ್ಛೆ ಎಂದು ಭಾವಿಸುತ್ತೇನೆ. ಅಂಬರೀಷ್​ ಅವರು ಮಾತಿನಲ್ಲಿ ಒರಟು. ಆದರೆ ಸ್ವಚ್ಛ ಹಾಗೂ ಸರಳ ಹೃದಯ ಇದ್ದಂತಹ ವ್ಯಕ್ತಿ ಅವರು. ಅವರ ಸ್ವಭಾವ ಬಹಳ ಮೃದು ಆಗಿತ್ತು’ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ
Image
‘ಅಂಬರೀಷ್​​ಗೆ ಅನಾರೋಗ್ಯ ಉಂಟಾದಾಗ ಬದುಕಿಸಿದವರು ಇವರೇ’; ಹಳೆ ಘಟನೆ ನೆನೆದ ಸುಂದರ್ ರಾಜ್
Image
ಅಂಬಿ ಸಮಾಧಿಗೆ ಎಡೆ ಇಟ್ಟು ನಮಿಸಿದ ಸುಮಲತಾ ಅಂಬರೀಷ್​; ಸಾಥ್​ ನೀಡಿದ ರಾಕ್​ಲೈನ್​ ವೆಂಕಟೇಶ್​
Image
‘ರೆಬೆಲ್​ ಸ್ಟಾರ್​​’ 70ನೇ ಜನ್ಮದಿನಕ್ಕೆ ಕೇಕ್​ ಕತ್ತರಿಸಿ ವಿಶೇಷ ಮಾತುಗಳನ್ನು ಹಂಚಿಕೊಂಡ ಸುಮಲತಾ ಅಂಬರೀಷ್​
Image
‘ಇಲ್ಲಿಗೆ ಬರಲು ನಂಗೆ ಧೈರ್ಯ ಸಾಕಾಗಲ್ಲ’: ಕಲಾವಿದರ ಭವನದಲ್ಲಿ ಅಂಬರೀಷ್​ ನೆನೆದು ರಾಕ್​ಲೈನ್​ ಭಾವುಕ

ಇದನ್ನೂ ಓದಿ: Ambareesh Road Inauguration: ರೇಸ್​ ಕೋರ್ಸ್​ ರಸ್ತೆಗೆ ಅಂಬರೀಷ್​ ಹೆಸರು ಇಟ್ಟಿದ್ದೇಕೆ? ಉದ್ಘಾಟನೆ ವೇಳೆ ವಿವರಣೆ ನೀಡಿದ ಸಿಎಂ

ಬಡವರ ಬಗ್ಗೆ ಕಾಳಜಿ ಇಟ್ಟುಕೊಂಡಿದ್ದ ನಾಯಕ:

‘ಅಂಬರೀಷ್​ ಅವರು ಕೊಡುಗೈ ದಾನಿ ಆಗಿದ್ದರು. ದೀನ ದಲಿತರ ಬಗ್ಗೆ ಹಾಗೂ ಬಡವರ ಬಗ್ಗೆ ಕಾಳಜಿ ಹೊಂದಿ​ದ್ದರು. ಅವರ ಸ್ಮಾರಕವನ್ನು ಇಡೀ ರಾಜ್ಯದ ಜನರು ನೋಡಿ ಅಭಿಮಾನಪಡುತ್ತಾರೆ. ಇದನ್ನು ರಾಜ್ಯದ ಜನರಿಗೆ ಅರ್ಪಿಸುತ್ತೇನೆ’ ಎಂದಿದ್ದಾರೆ ಬೊಮ್ಮಾಯಿ.

ಅಂಬರೀಷ್​ ಅವರ ಸ್ಮಾರಕ ಉದ್ಘಾಟನೆ ವೇಳೆ ಸುಮಲತಾ ಅಂಬರೀಷ್​, ಅಭಿಷೇಕ್​ ಅಂಬರೀಷ್​, ಭಾ.ಮ. ಹರೀಶ್​, ದೊಡ್ಡಣ್ಣ, ರಾಕ್​ಲೈನ್​ ವೆಂಕಟೇಶ್​, ರಾಘವೇಂದ್ರ ರಾಜ್​ಕುಮಾರ್​, ಸಂದರ್​ ರಾಜ್​ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:35 pm, Mon, 27 March 23

Follow Us
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ