Ambareesh Road Inauguration: ರೇಸ್​ ಕೋರ್ಸ್​ ರಸ್ತೆಗೆ ಅಂಬರೀಷ್​ ಹೆಸರು ಇಟ್ಟಿದ್ದೇಕೆ? ಉದ್ಘಾಟನೆ ವೇಳೆ ವಿವರಣೆ ನೀಡಿದ ಸಿಎಂ

Ambareesh | CM Basavaraj Bommai: ‘ನಟ ಅಂಬರೀಷ್​ ಅವರ ಜೀವನ ತೆರೆದ ಪುಸ್ತಕದ ರೀತಿ ಇತ್ತು. ಅದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ’ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Follow us
|

Updated on:Mar 27, 2023 | 7:05 PM

ಬೆಂಗಳೂರಿನ ರೇಸ್​ ಕೋರ್ಸ್​ ರಸ್ತೆಗೆ (Race Course Road) ನಟ ಅಂಬರೀಷ್​ ಅವರ ಹೆಸರು ಇಡಬೇಕು ಎಂಬುದು ಅಭಿಮಾನಿಗಳ ಬೇಡಿಕೆ ಆಗಿತ್ತು. ಆ ಬೇಡಿಕೆ ಇಂದು (ಮಾರ್ಚ್​ 27) ನೆರವೇರಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ರೆಬೆಲ್​ ಸ್ಟಾರ್​ ಡಾ. ಎಂ.ಎಚ್​. ಅಂಬರೀಷ್​ ರಸ್ತೆ’ (Ambareesh Road) ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಅಂಬರೀಷ್​ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದರು. ಚಿತ್ರರಂಗಕ್ಕೆ ಮತ್ತು ಕರುನಾಡಿಗೆ ಅಂಬಿ ನೀಡಿದ ಕೊಡುಗೆ ಬಗ್ಗೆಯೂ ಬೊಮ್ಮಾಯಿ ಮಾತನಾಡಿದರು. ರೇಸ್​ ಕೋರ್ಸ್​ ರಸ್ತೆಗೆ ಅಂಬರೀಷ್​ ಅವರ ಹೆಸರು ಯಾಕೆ ಸೂಕ್ತ ಎಂಬುದನ್ನು ಕೂಡ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ವಿವರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಅಂಬಿ ಕುಟುಂಬದ ಸದಸ್ಯರು ಹಾಗೂ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಸಾಕ್ಷಿ ಆಗಿದ್ದಾರೆ.

ಇದು ಅಂಬರೀಷ್​ ಕಾರ್ಯಕ್ಷೇತ್ರ:

‘ಅಂಬರೀಷ್​ ಅವರದ್ದು ನೇರ ನಡೆ-ನುಡಿಯ ವ್ಯಕ್ತಿತ್ವ ಆಗಿತ್ತು. ಅವರ ನೆನಪಿಗಾಗಿ ಇಂದು ರೇಸ್​ ಕೋರ್ಸ್​ ರಸ್ತೆಗೆ ಅವರ ಹೆಸರು ಇಡಲಾಗಿದೆ. ಇದು ನನಗೆ ಅತ್ಯಂತ ಸಂತೋಷ ತಂದಿದೆ. ಇಲ್ಲಿ ಫಿಲ್ಮ್​ ಚೇಂಬರ್​ ಇದೆ. ಹತ್ತಿರದಲ್ಲೇ ಗಾಂಧಿ ನಗರ ಇದೆ. ಇದು ಅಂಬರೀಷ್​ ಅವರ ಕಾರ್ಯಕ್ಷೇತ್ರವಾಗಿದ್ದ ಜಾಗ. ಹಾಗಾಗಿ ಅವರ ಹೆಸರು ಅತ್ಯಂತ ಸೂಕ್ತ. ಅವರ ಅಭಿಮಾನಿಗಳ ಒತ್ತಾಸೆಯ ಮೇರೆಗೆ ಈ ಹೆಸರು ಇಟ್ಟಿದ್ದೇವೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ: Ambareesh Road: ಬಸವರಾಜ ಬೊಮ್ಮಾಯಿ ಅವರಿಂದ ‘ಅಂಬರೀಷ್​ ರಸ್ತೆ’ ಉದ್ಘಾಟನೆ; ಇಲ್ಲಿದೆ ಲೈವ್​ ವಿಡಿಯೋ

ಇದನ್ನೂ ಓದಿ
Image
‘ಅಂಬರೀಷ್​​ಗೆ ಅನಾರೋಗ್ಯ ಉಂಟಾದಾಗ ಬದುಕಿಸಿದವರು ಇವರೇ’; ಹಳೆ ಘಟನೆ ನೆನೆದ ಸುಂದರ್ ರಾಜ್
Image
ಅಂಬಿ ಸಮಾಧಿಗೆ ಎಡೆ ಇಟ್ಟು ನಮಿಸಿದ ಸುಮಲತಾ ಅಂಬರೀಷ್​; ಸಾಥ್​ ನೀಡಿದ ರಾಕ್​ಲೈನ್​ ವೆಂಕಟೇಶ್​
Image
‘ರೆಬೆಲ್​ ಸ್ಟಾರ್​​’ 70ನೇ ಜನ್ಮದಿನಕ್ಕೆ ಕೇಕ್​ ಕತ್ತರಿಸಿ ವಿಶೇಷ ಮಾತುಗಳನ್ನು ಹಂಚಿಕೊಂಡ ಸುಮಲತಾ ಅಂಬರೀಷ್​
Image
‘ಇಲ್ಲಿಗೆ ಬರಲು ನಂಗೆ ಧೈರ್ಯ ಸಾಕಾಗಲ್ಲ’: ಕಲಾವಿದರ ಭವನದಲ್ಲಿ ಅಂಬರೀಷ್​ ನೆನೆದು ರಾಕ್​ಲೈನ್​ ಭಾವುಕ

ನಿಜಜೀವನದಲ್ಲೂ ಅವರು ರೆಬೆಲ್​:

‘ಸಿನಿಮಾಗಳಲ್ಲಿ ಅಂಬರೀಷ್​ ಅವರು ಅದ್ಭುತವಾದ ಅಭಿನಯ ತೋರಿದ್ದರು. ಜನರನ್ನು ಸೆಳೆದಿಟ್ಟುಕೊಳ್ಳುವಂತಹ ಶಕ್ತಿ ಅವರಿಗೆ ಇತ್ತು. ಅವರ ನಟನೆ ಸಹಜವಾಗಿತ್ತು. ನಟನೆಗಾಗಿ ಅವರು ಕಷ್ಟಪಟ್ಟಿಲ್ಲ. ಪದರೆ ಮೇಲೆ ಇದ್ದಂತೆಯೇ ನಿಜಜೀವನದಲ್ಲೂ ಇದ್ದರು. ನೇರವಾಗಿ, ಸತ್ಯವನ್ನೇ ಮಾತನಾಡುತ್ತಿದ್ದರು. ಒಮ್ಮೆ ಮಾತನಾಡಿದರೆ ಹಿಂದೆ ಸರಿಯುವ ಮಾತೇ ಇರಲಿಲ್ಲ. ಎಲ್ಲ ಕ್ರೀಡೆಗಳಲ್ಲೂ ಅವರಿಗೆ ಆಸಕ್ತಿ ಇತ್ತು. ರಾಜಕೀಯಕ್ಕೆ ಬಂದಾಗ ಜನಪರವಾದ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಕಾವೇರಿ ವಿಚಾರದಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಅಧಿಕಾರದ ಹಿಂದೆ ಅವರು ಹೋಗಿರಲಿಲ್ಲ. ಅವರ ಹಿಂದೆಯೇ ಅಧಿಕಾರ ಬಂದಿತ್ತು. ರಿಯಲ್​ ಲೈಫ್​ನಲ್ಲಿಯೂ ಅವರು ರೆಬೆಲ್​ ಸ್ಟಾರ್​ ಆಗಿ ಕೆಲಸ ಮಾಡಿದ್ದಾರೆ’ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ: Ambareesh: ‘ಅಂಬರೀಷ್​​ಗೆ ಕುದುರೆ ಹೆಸರು ಮಾತ್ರ ಮರೆಯುತ್ತಿರಲಿಲ್ಲ’; ದೊಡ್ಡಣ್ಣ

ರೇಸ್​ ಕೋರ್ಸ್​ ರಸ್ತೆಗೆ ಅಂಬಿ ಹೆಸರು ಸೂಕ್ತ:

‘ಅಂಬರೀಷ್​ ನನ್ನ ಆತ್ಮೀಯ ಮಿತ್ರ. ನಾವು ಸುಮ್ಮನೆ ಹರಟೆ ಹೊಡೆಯುತ್ತಿರಲಿಲ್ಲ. ಅನೇಕ ಗಂಭೀರ ವಿಚಾರಗಳನ್ನು ನಾವು ಚರ್ಚೆ ಮಾಡುತ್ತಿದ್ದೆವು. ಅವರ ಜೀವನ ತೆರೆದ ಪುಸ್ತಕ. ಮುಚ್ಚಿಡುವಂಥದ್ದು ಏನೂ ಇಲ್ಲ. ಕೇಸ್​ ಕೋರ್ಸ್​ನಲ್ಲಿ ಅವರು ಇರುತ್ತಿದ್ದರು. ಅವರಿಗೆ ಸೂಕ್ತವಾದ ರಸ್ತೆಗೆ ಅವರ ಹೆಸರು ಇಟ್ಟಿದ್ದೇವೆ’ ಎಂದು ಬಸವರಾಜ್​ ಬೊಮ್ಮಾಯಿ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:05 pm, Mon, 27 March 23

Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ