Dhananjay: ‘ಯಾಕ್ರಿ ಹೊಟ್ಟೆ ಬಿಟ್ಕೊಂಡು ಓಡಾಡ್ತಾ ಇದೀರಿ?’: ಡಾಲಿ ಧನಂಜಯ್ಗೆ ಸುದೀಪ್ ನೇರ ಪ್ರಶ್ನೆ
‘ಹೊಯ್ಸಳ’ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಡಾಲಿ ಧನಂಜಯ್ ಅವರು ಕಿಚ್ಚ ಸುದೀಪ್ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಒಂದು ಘಟನೆಯನ್ನು ಅವರು ನೆನಪಿಸಿಕೊಂಡಿದ್ದಾರೆ.
ಡಾಲಿ ಧನಂಜಯ್ (Daali Dhananjay) ಅವರಿಗೆ ಚಿತ್ರರಂಗದಲ್ಲಿ ಎಲ್ಲರ ಜೊತೆ ಒಳ್ಳೆಯ ಒಡನಾಟ ಇದೆ. ಈಗ ಅವರು ನಟಿಸಿರುವ ‘ಹೊಯ್ಸಳ’ ಸಿನಿಮಾ (Hoysala Movie) ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ ಸೋಮವಾರ (ಮಾರ್ಚ್ 20) ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ (Kichcha Sudeep) ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ವೇದಿಕೆಯಲ್ಲಿ ಸುದೀಪ್ ಬಗ್ಗೆ ಡಾಲಿ ಮಾತನಾಡಿದರು. ‘ಹೆಡ್ ಬುಷ್’ ಚಿತ್ರದ ಸಂದರ್ಭದಲ್ಲಿ ‘ಯಾಕ್ರಿ ಹೀಗೆ ಹೊಟ್ಟೆ ಬಿಟ್ಕೊಂಡು ಓಡಾಡ್ತಾ ಇದೀರಾ’ ಅಂತ ಧನಂಜಯ್ಗೆ ಸುದೀಪ್ ಕೇಳಿದ್ದರು. ಆ ಮೂಲಕ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುವಂತೆ ಅವರು ಸಲಹೆ ನೀಡಿದ್ದರು. ಆ ಘಟನೆಯನ್ನು ಧನಂಜಯ್ ಅವರು ಈಗ ನೆನಪಿಸಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್ನಲ್ಲಿ ಆತ್ಮೀಯ ವಿದಾಯ
ಓಮನ್ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ

