Halal Cut Vs Jhatka Cut: ಯುಗಾದಿ ಹಬ್ಬ ಮತ್ತು ಹೊಸತೊಡುಕು, ಮತ್ತೇ ಮುನ್ನೆಲೆಗೆ ಬಂದ ಹಲಾಲ್ ಕಟ್-ಜಟ್ಕಾ ಕಟ್ ವಿವಾದ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕಾರ್ಯಕರ್ತರೊಬ್ಬರು, ಹಲಾಲ್ ಕಟ್ ಮಾಂಸದಂಗಡಿಗಳ ಮೂಲಕ ಮುಸಲ್ಮಾನರು ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ, ಅದನ್ನು ನಿಲ್ಲಿಸಲು ಅಭಿಯಾನದ ಮೂಲಕ ಜನಜಾಗೃತಿ ಮೂಡಿಸುತ್ತಿದ್ದೇವೆ ಎಂದು ಹೇಳಿದರು.
ಬೆಂಗಳೂರು: ನಾಳೆ ಯುಗಾದಿ ಹಬ್ಬ (Ugadi festival) ಮತ್ತು ನಾಡಿದ್ದು ಹೊಸತೊಡುಕು. ಹಲಾಲ್ ಕಟ್ (Halal Cut), ಜಟ್ಕಾ ಕಟ್ (Jhatka Cut) ವಿವಾದ ಇಂಥ ಸಂದರ್ಭದಲ್ಲಿ ಮುನ್ನೆಲೆಗೆ ಬಾರದಿರಲು ಸಾಧ್ಯವೇ? ಹಿಂದೂಪರ ಸಂಘಟನೆಯ ಕೆಲ ಕಾರ್ಯಕರ್ತರು ಮುಸಲ್ಮಾನರ ಹಲಾಲ್ ಕಟ್ ಮಾಂಸದಂಗಡಿಗಳಲ್ಲಿ ಮಾಂಸ ಖರೀದಿಸದಂತೆ ಹಿಂದೂಗಳಲ್ಲಿ ಜಾಗೃತಿ ಮೂಡಿಸಲು ಇಂದು ನಗರದ ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಬಸವಗುಡಿಯವರೆಗೆ ಭಿತ್ತಿ ಪತ್ರಗಳನ್ನು ಹಂಚುವ ಅಭಿಯಾನ ಅರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಪುನೀತ್ ಹೆಸರಿನ ಕಾರ್ಯಕರ್ತರೊಬ್ಬರು, ಹಲಾಲ್ ಕಟ್ ಮಾಂಸದಂಗಡಿಗಳ ಮೂಲಕ ಮುಸಲ್ಮಾನರು ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ, ಅದನ್ನು ನಿಲ್ಲಿಸಲು ಅಭಿಯಾನದ ಮೂಲಕ ಜನಜಾಗೃತಿ ಮೂಡಿಸುತ್ತಿದ್ದೇವೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos