AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಂತಾಳದ್ದು ಅಜ್ಜಿ ಮುಖ, ಹಣ ಗಳಿಸಲು ಅರೆಬೆತ್ತಲೆ ಕುಣಿಯುತ್ತಿದ್ದಾಳೆ: ನಾಲಿಗೆ ಹರಿಬಿಟ್ಟ ನಿರ್ಮಾಪಕ

Samantha: ನಟಿ ಸಮಂತಾ ಬಗ್ಗೆ ನಿರ್ಮಾಪಕ ಚಿಟ್ಟಿಬಾಬು ನಾಲಗೆ ಹರಿಬಿಟ್ಟಿದ್ದು, ಆಕೆಯ ವೃತ್ತಿ ಜೀವನ ಮುಗದಿದೆ, ಆಕೆಯದ್ದು ಅಜ್ಜಿಯ ಮುಖ, ಹಣ ಗಳಿಸಲು ಅರೆಬೆತ್ತಲೆ ಡ್ಯಾನ್ಸ್ ಮಾಡುತ್ತಿದ್ದಾಳೆ ಎಂದಿದ್ದಾರೆ.

ಸಮಂತಾಳದ್ದು ಅಜ್ಜಿ ಮುಖ, ಹಣ ಗಳಿಸಲು ಅರೆಬೆತ್ತಲೆ ಕುಣಿಯುತ್ತಿದ್ದಾಳೆ: ನಾಲಿಗೆ ಹರಿಬಿಟ್ಟ ನಿರ್ಮಾಪಕ
ಸಮಂತಾ
ಮಂಜುನಾಥ ಸಿ.
|

Updated on: Apr 14, 2023 | 8:41 PM

Share

ವೃತ್ತಿ ಜೀವನದಲ್ಲಿ ಹಾಗೂ ಖಾಸಗಿ ಜೀವನದಲ್ಲಿ ಭಿನ್ನ ಹಾದಿ ಹಿಡಿದಿರುವ ನಟಿ ಸಮಂತಾ (Samantha). ಮರಸುತ್ತುವ ಪಾತ್ರಗಳನ್ನು ದಾಟಿ ಪ್ರೇಕ್ಷಕರ ಮನಸ್ಸಿನಲ್ಲಿ ಗುರುತು ಮೂಡಿಸುವ ಗಟ್ಟಿ ಪಾತ್ರಗಳ ಕಡೆಗೆ ಹೊರಳಿರುವ ಈ ನಟಿ ಬಹುಬೇಡಿಕೆಯಲ್ಲಿರುವ ದಕ್ಷಿಣ ಭಾರತದ (South India) ನಟಿಯರಲ್ಲೊಬ್ಬರು. ಒಂದು ಮಾದರಿಯ ಪಾತ್ರಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಬೇರೆ ಬೇರೆ ಪಾತ್ರಗಳನ್ನು ಮಾಡುತ್ತಾ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಆದರೆ ತೆಲುಗು ಚಿತ್ರರಂಗದ ಹಿರಿಯ ನಿರ್ಮಾಪಕರೊಬ್ಬರು ಸಮಂತಾ ಬಗ್ಗೆ ಸುಖಾಸುಮ್ಮನೆ ನಾಲಿಗೆ ಹರಿಬಿಟ್ಟಿದ್ದು, ಸಮಂತಾಳದ್ದು ಅಜ್ಜಿಯ ಮುಖ, ಆಕೆಯ ವೃತ್ತಿ ಮುಗಿದಿದೆ ಎಂದಿದ್ದಾರೆ.

ತೆಲುಗಿನ (Tollywood) ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಚಿಟ್ಟಿಬಾಬು, ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸಮಂತಾರ ಹೊಸ ಸಿನಿಮಾ ಶಾಕುಂತಲಂ ಬಗ್ಗೆ ಮಾತನಾಡುತ್ತಾ, ”ಶಾಕುಂತಲೆ ಅಪ್ರತಿಮ ಸುಂದರಿ, ಆದರೆ ಆ ಪಾತ್ರ ಮಾಡಿರುವ ಸಮಂತಾ ಅದಕ್ಕೆ ಸೂಟ್ ಆಗಿಲ್ಲ. ಸಮಂತಾ ಮುಖ ಕಿತ್ತುಹೋಗಿದೆ. ಅದಕ್ಕಾಗಿ ಜನರನ್ನು ಸೆಳೆಯಲು ನಾನು ಸತ್ತುಹೋಗುತ್ತೇನೆ ಅದೂ ಇದು ಎಂದು ಡ್ರಾಮಾ ಮಾಡುತ್ತಿರುತ್ತಾಳೆ. ಆಕೆಯ ಕೆರಿಯರ್ ಮುಗಿದು ಹೋಗಿದೆ. ಹಿಂದೆ ಯಾವುದೋ ಸಿನಿಮಾಕ್ಕೆ ಬೆಡ್​ ಮೇಲೆ ಮಲಗಿ ಡಬ್ಬಿಂಗ್ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಳು. ಇದೆಲ್ಲ ಪ್ರಚಾರ ತಂತ್ರ. ಹಿಂದೆ ಹಲವು ಕಲಾವಿದರು ತೀವ್ರ ಜ್ವರದ ನಡುವೆಯೂ ಸಿನಿಮಾಗಳಲ್ಲಿ ನಟಿಸಿದ್ದಿದೆ. ಈಕೆಯೇನು ಸ್ಪೆಷಲ್ಲಾ?” ಎಂದು ಚಿಟ್ಟಿಬಾಬು ಪ್ರಶ್ನಿಸಿದ್ದಾರೆ.

ಮುಂದುವರೆದು, ”ಆಕೆಯನ್ನು ಯಾರೂ ನಾಯಕಿಯಾಗಿ ತಮ್ಮ ಸಿನಿಮಾಗಳಲ್ಲಿ ಹಾಕಿಕೊಳ್ಳುತ್ತಿಲ್ಲ ಅದಕ್ಕೆಂದೇ ಆಕೆ ಲೇಡಿ ಓರಿಯೆಂಟೆಡ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆಕೆಯ ಮುಖ ಅಜ್ಜಿ ಮುಖದಂತೆ ಆಗಿದೆ. ಅಂಥಹಾ ಮುಖ ಇಟ್ಟುಕೊಂಡು ಶಾಕುಂತಲಂ ಸಿನಿಮಾದ ಪಾತ್ರ ಹೇಗೆ ಮಾಡುತ್ತಾಳೋ ಏನೋ. ಕ್ಯಾಮೆರಾಮ್ಯಾನ್ ಏನಾದರೂ ಗಿಮಿಕ್ ಮಾಡಬೇಕು ಅಷ್ಟೆ. ಟಾಪ್ ಹೀರೋಯಿನ್ ಪಟ್ಟದಿಂದ ಆಕೆ ಕೆಳಗೆ ಬಿದ್ದು ಬಹಳ ಸಮಯವಾಗಿದೆ. ಅದೇ ಕಾರಣಕ್ಕೆ ಪುಷ್ಪ ಸಿನಿಮಾದಲ್ಲಿ ಊ ಅಂಟಾವ, ಊಹು ಅಂಟಾವ ಥರಹದ ಹಾಡಿನಲ್ಲಿ ಅರೆಬೆತ್ತಲೆಯಾಗಿ ಕುಣಿದಿದ್ದಾಳೆ. ಹಣ ಮಾಡಲು, ಇನ್ನೂ ಸ್ವಲ್ಪ ದಿನ ಇಂಡಸ್ಟ್ರಿಯಲ್ಲಿ ಇರಬೇಕೆಂಬ ಕಾರಣಕ್ಕೆ ಅಂಥಹಾ ಹಾಡುಗಳಲ್ಲಿ ನಟಿಸುತ್ತಿದ್ದಾಳೆ” ಎಂದಿದ್ದಾರೆ ಚಿಟ್ಟಿಬಾಬು.

”ಆಕೆಯ ವೃತ್ತಿ ಬದುಕು ಮುಗಿದಿದೆ. ಒಂದು ಸಮಯದಲ್ಲಿ ಒಳ್ಳೆಯ ಸ್ಟಾರ್ ಡಮ್ ಅನುಭವಿಸಿದ್ದಾಳೆ, ಈಗ ಸುಮ್ಮನಾಗಿಬಿಡುವುದು ಒಳಿತು. ಅದನ್ನು ಬಿಟ್ಟು ಪ್ರತಿ ಸಿನಿಮಾಕ್ಕೂ ಏನೋ ಒಂದು ಡ್ರಾಮಾ ಮಾಡಿಕೊಂಡು, ನಾನು ಸತ್ತುಹೋಗುತ್ತೇನೆ ಎಂದು ಅದು ಇದು ಹೇಳಿ ಡ್ರಾಮಾ ಮಾಡಿಕೊಂಡು ಸಿನಿಮಾ ಗೆಲ್ಲಿಸಿಕೊಳ್ಳಲು ನೋಡುತ್ತಿದ್ದಾಳೆ. ಆದರೆ ಅದೆಲ್ಲ ವರ್ಕೌಟ್ ಆಗುವುದಿಲ್ಲ. ಸಿನಿಮಾ ಚೆನ್ನಾಗಿದ್ದರೆ ಜನ ನೋಡುತ್ತಾರೆ ಇಲ್ಲವಾದರೆ ಇಲ್ಲ. ಶಾಕುಂತಲಂ ಸಿನಿಮಾದ ಕತೆಯೂ ಅಷ್ಟೆ. ಆದರೆ ನನಗಿರುವ ಪ್ರಶ್ನೆ ಎಂದರೆ, ಎಲ್ಲಾ ಚಾರ್ಮ್ ಕಳೆದುಕೊಂಡಿರುವ ನಟಿ ಶಾಕುಂತಲಂ ಅಂಥಹಾ ಅಂದಗಾತಿಯ ಪಾತ್ರಕ್ಕೆ ಹೇಗಾದರೂ ಸೂಟ್ ಆಗುತ್ತಾಳೆ ಎಂಬುದಷ್ಟೆ” ಎಂದಿದ್ದಾರೆ ಚಿಟ್ಟಿಬಾಬು.

ನಿರ್ಮಾಪಕ ಚಿಟ್ಟಿಬಾಬು ಮಾತುಗಳಿಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಹಿರಿಯ ನಿರ್ಮಾಪಕನಾಗಿ ನಟಿಯ ಬಗ್ಗೆ ಇಷ್ಟು ಕೀಳಾಗಿ ಮಾತನಾಡಿರುವುದು ಸರಿಯಲ್ಲ ಎಂದಿದ್ದಾರೆ ಹಲವರು. ಸಮಂತಾ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ. ಸಿನಿಮಾದ ವಿಷಯಕ್ಕೆ ಮರಳುವುದಾದರೆ ಸಮಂತಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಶಾಕುಂತಲಂ ಸಿನಿಮಾ ಇಂದು (ಏಪ್ರಿಲ್ 14) ಬಿಡುಗಡೆ ಆಗಿದೆ. ಸಿನಿಮಾವನ್ನು ಗುಣಶೇಖರ್ ನಿರ್ದೇಶನ ಮಾಡಿದ್ದಾರೆ. ಆದರೆ ಸಿನಿಮಾದ ಬಗ್ಗೆ ಉತ್ತಮ ವಿಮರ್ಶೆಗಳು ವ್ಯಕ್ತವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ