AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kabzaa 2: ಕಬ್ಜ 2 ಸಿನಿಮಾ ಪೋಸ್ಟರ್ ಬಿಡುಗಡೆ, ಖಾಲಿ ಕುರ್ಚಿಯ ಒಡೆಯ ಯಾರು?

Kabzaa 2: ಆರ್ ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೆ ಇದೀಗ ಕಬ್ಜ 2 ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ.

Kabzaa 2: ಕಬ್ಜ 2 ಸಿನಿಮಾ ಪೋಸ್ಟರ್ ಬಿಡುಗಡೆ, ಖಾಲಿ ಕುರ್ಚಿಯ ಒಡೆಯ ಯಾರು?
ಕಬ್ಜ 2
ಮಂಜುನಾಥ ಸಿ.
|

Updated on: Apr 14, 2023 | 5:58 PM

Share

ಉಪೇಂದ್ರ (Upendra) ನಟಿಸಿ ಆರ್.ಚಂದ್ರು (R Chandru) ನಿರ್ದೇಶನ ಮಾಡಿರುವ ಕಬ್ಜ (Kabzaa) ಸಿನಿಮಾ ಈಗಾಗಲೇ ಸೂಪರ್ ಡೂಪ್ ಹಿಟ್ ಆಗಿದೆ. ಸಿನಿಮಾದ ಚಿತ್ರೀಕರಣ (shooting) ಮಾಡುವಾಗಲೇ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಮಾಡುವುದಾಗಿ ಆರ್.ಚಂದ್ರು ಹೇಳಿದ್ದರು. ಇದೀಗ ಕಬ್ಜ 2 ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಮೊದಲ ಭಾಗದಂತೆ ಕಬ್ಜ 2 (Kabzaa 2) ಸಿನಿಮಾ ಸಹ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ದು, ಐದು ಭಾಷೆಗಳ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ.

ಕಬ್ಜ 2 ಸಿನಿಮಾದ ಮೊದಲ ಪೋಸ್ಟರ್​ನಲ್ಲಿ ಉಪೇಂದ್ರ ಆಗಲಿ, ಶಿವಣ್ಣ ಆಗಲಿ ಅಥವಾ ಸುದೀಪ್ ಆಗಲಿ ಇಲ್ಲ. ಇರುವುದು ಒಂದು ಖಾಲಿ ಕುರ್ಚಿ ಹಾಗೂ ಒಂದು ಬಂದೂಕು ಮಾತ್ರ. ಮರದ ಖಾಲಿ ಕುರ್ಚಿಗೆ ಬಂದೂಕೊಂದನ್ನು ಒರಗಿಸಿ ಇಡಲಾಗಿದೆ. ಹಿನ್ನೆಲೆಯಲ್ಲಿ ಕೆಲವು ಜೀಪುಗಳು, ಆಕಾಶದಲ್ಲಿ ಒಂದು ಹೆಲಿಕ್ಯಾಪ್ಟರ್ ಹಾಗೂ ಅರಮನೆಯನ್ನು ಹೋಲುವ ಹಳೆಯ ಕಟ್ಟಡವೊಂದು ಕಾಣುತ್ತಿದೆ. ಪೋಸ್ಟರ್ ಅನ್ನು ಕನ್ನಡ, ಇಂಗ್ಲೀಷ್, ಹಿಂದಿ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ.

ಕಬ್ಜ ಸಿನಿಮಾದ ಅಂತ್ಯದಲ್ಲಿ ಉಪೇಂದ್ರ-ಸುದೀಪ್ ನಡುವೆ ಶಿವಣ್ಣ ಬಂದಿದ್ದರು. ಈಗ ಕಬ್ಜ 2 ನಲ್ಲಿ ಯಾರು ಯಾರ ವಿರುದ್ಧ ನಿಲ್ಲಲಿದ್ದಾರೆ. ಕುರ್ಚಿ ಯಾರದ್ದಾಗಲಿದೆ ಎಂಬ ಕುತೂಹಲ ಇದೆ. ಸಿನಿಮಾದ ಪೋಸ್ಟರ್ ಮೊದಲ ಸಿನಿಮಾದ ಕ್ಲೈಮ್ಯಾಕ್ಸ್ ಗೆ ಪೂರಕವಾಗಿಯೇ ಇದೆ. ಇನ್ನು ಕಬ್ಜ 2 ಸಿನಿಮಾದ ಚಿತ್ರೀಕರಣ ಇನ್ನಷ್ಟೆ ಶುರುವಾಗಬೇಕಿದೆ. ಮೊದಲ ಭಾಗದಂತೆಯೇ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಲು ಆರ್.ಚಂದ್ರು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಥಿಯೇಟರ್​ನಲ್ಲಿ ‘ಕಬ್ಜ’ ಚಿತ್ರ ಮಿಸ್​ ಮಾಡಿಕೊಂಡಿದ್ದೀರಾ? ಏಪ್ರಿಲ್​ 14ರಿಂದ ಒಟಿಟಿಯಲ್ಲಿ ಸಿಗಲಿದೆ ಈ ಸಿನಿಮಾ

ಕಬ್ಜ ಸಿನಿಮಾವು ಇದೇ ವರ್ಷ ಮಾರ್ಚ್ 17 ರಂದು ಬಿಡುಗಡೆ ಆಗಿದ್ದು, ಬಿಡುಗಡೆ ಆದ ಮೂರೇ ದಿನದಲ್ಲಿ ನೂರು ಕೋಟಿ ಕಲೆಕ್ಷನ್ ಮಾಡಿ ಸೂಪರ್ ಹಿಟ್ ಸಿನಿಮಾ ಎನಿಸಿಕೊಂಡಿತ್ತು. ಸಿನಿಮಾದಲ್ಲಿ ಉಪೇಂದ್ರ, ಸುದೀಪ್, ಶ್ರಿಯಾ ಶರಣ್ ಜೊತೆಗೆ ವಿಶೇಷ ಅತಿಥಿ ಪಾತ್ರದಲ್ಲಿ ಶಿವರಾಜ್ ಕುಮಾರ್ ಸಹ ನಟಿಸಿದ್ದರು. ಸಿನಿಮಾದ ಪ್ರಚಾರವನ್ನು ಅದ್ಭುತವಾಗಿ ಚಿತ್ರತಂಡ ಮಾಡಿತ್ತು. ಸುದೀಪ್ ಬೆಂಬಲದೊಂದಿಗೆ ಹಿಂದಿ ಪ್ರೇಕ್ಷಕರನ್ನು ಸೆಳೆಯಲು ಯಶಸ್ವಿಯಾಗಿತ್ತು ಚಿತ್ರತಂಡ.

ಇದೀಗ ಕಬ್ಜ 2 ನಲ್ಲಿ, ಮೊದಲ ಭಾಗದಲ್ಲಿದ್ದ ನಟರುಗಳೇ ಮುಂದುವರೆಯುತ್ತಾರಾ? ಅಥವಾ ಬೇರೆ ಸ್ಟಾರ್​ಗಳನ್ನು ಅತಿಥಿ ಪಾತ್ರಕ್ಕೆ ಕರೆದುಕೊಂಡು ಬರುತ್ತಾರಾ ಆರ್.ಚಂದ್ರು ಎಂಬುದು ಕುತೂಹಲ. ಕಬ್ಜ ಸಿನಿಮಾ ಸೂಪರ್ ಹಿಟ್ ಆಗಿದ್ದರೂ ಸಹ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿರಲಿಲ್ಲ. ಹಾಗಾಗಿ ಮೊದಲ ಸಿನಿಮಾಕ್ಕಿಂತಲೂ ಭಿನ್ನವಾಗಿ ಆರ್.ಚಂದ್ರು ಈ ಸಿನಿಮಾ ಮಾಡಲಿದ್ದಾರಾ ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್