ಹೇಗಿತ್ತು ರಾಕಿ-ರಾಧಿಕಾ ಪಂಡಿತ್ ಭೇಟಿ; ಹಳೆಯ ವಿಡಿಯೋ ಹಂಚಿಕೊಂಡ ಯಶ್ ಪತ್ನಿ

Radhika Pandit: ಯಶ್ ಅವರು ರಾಕಿ ಪಾತ್ರಕ್ಕಾಗಿ ರೆಡಿ ಆಗಿದ್ದರು. ಈ ವೇಳೆ ಅಲ್ಲಿಗೆ ರಾಧಿಕಾ ಪಂಡಿತ್ ಬರುತ್ತಾರೆ. ಯಶ್ ಗೆಟಪ್​ಗೆ ರಾಧಿಕಾ ಪಂಡಿತ್ ಅವರು ಮೆಚ್ಚುಗೆ ಸೂಚಿಸಿದ್ದಾರೆ.

ಹೇಗಿತ್ತು ರಾಕಿ-ರಾಧಿಕಾ ಪಂಡಿತ್ ಭೇಟಿ; ಹಳೆಯ ವಿಡಿಯೋ ಹಂಚಿಕೊಂಡ ಯಶ್ ಪತ್ನಿ
ರಾಧಿಕಾ-ಯಶ್
Follow us
ರಾಜೇಶ್ ದುಗ್ಗುಮನೆ
|

Updated on: Apr 14, 2023 | 1:31 PM

ಕೆಜಿಎಫ್ 2’ ಸಿನಿಮಾದಲ್ಲಿ ಬರುವ ರಾಕಿ ಪಾತ್ರ ವಿಶೇಷ ಎನಿಸಿಕೊಂಡಿದೆ. ಪಾತ್ರವನ್ನು ಕಟ್ಟಿಕೊಟ್ಟ ರೀತಿಗೆ ಅನೇಕರು ಫಿದಾ ಆಗಿದ್ದಾರೆ. ಇಂದಿಗೂ ಈ ಪಾತ್ರವನ್ನು ಅನೇಕರು ಕೊಂಡಾಡುತ್ತಾರೆ. ಪಾತ್ರದ ಮ್ಯಾನರಿಸಂ ಸಾಕಷ್ಟು ಜನರಿಗೆ ಇಷ್ಟವಾಗಿದೆ. ‘ಕೆಜಿಎಫ್ 2’ ಸಿನಿಮಾ (KGF Chapter 2) ರಿಲೀಸ್ ಆಗಿ ಇಂದಿಗೆ (ಏಪ್ರಿಲ್ 14) ಒಂದು ವರ್ಷ. ಹೀಗಾಗಿ ಚಿತ್ರವನ್ನು ವಿವಿಧ ರೀತಿಯಲ್ಲಿ ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ. ಅದೇ ರೀತಿ ರಾಧಿಕಾ ಪಂಡಿತ್ (Radhik Pandit) ಕೂಡ ಸೆಟ್​ನ ವಿಡಿಯೋ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

‘ಕೆಜಿಎಫ್ 2’ ಸಿನಿಮಾ ಕಳೆದ ವರ್ಷ ಏಪ್ರಿಲ್ 14ರಂದು ರಿಲೀಸ್ ಆಯಿತು. ಈ ಸಿನಿಮಾದ ಮೊದಲ ಭಾಗ ಬಂದಿದ್ದು 2018ರಲ್ಲಿ. ನಾಲ್ಕು ವರ್ಷಗಳ ಗ್ಯಾಪ್ ಬಳಿಕ ಎರಡನೇ ಚಾಪ್ಟರ್ ಬಂತು. ಈ ಸಿನಿಮಾ ಕೆಲಸ ವಿಳಂಬ ಆಗಲು ಕೊವಿಡ್ ಕೂಡ ಕಾರಣ ಆಗಿತ್ತು. ಅದೇನೆ ಇದ್ದರೂ ಸಿನಿಮಾ ರಿಲೀಸ್ ಆಗಿ ಮಾಡಿದ ದಾಖಲೆಗಳು ಹಲವು. ‘ಕೆಜಿಎಫ್ 2’ ಸೆಟ್​ನಲ್ಲಿ ಯಾವ ರೀತಿಯ ಮೂಡ್ ಇತ್ತು ಎಂಬುದನ್ನು ತೋರಿಸಲು ರಾಧಿಕಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಯಶ್ ಅವರು ರಾಕಿ ಪಾತ್ರಕ್ಕಾಗಿ ರೆಡಿ ಆಗಿದ್ದರು. ಈ ವೇಳೆ ಅಲ್ಲಿಗೆ ರಾಧಿಕಾ ಪಂಡಿತ್ ಬರುತ್ತಾರೆ. ‘ನಾನು 70ರ ದಶಕದಲ್ಲಿದ್ದೀನಿ. ಸಖತ್ ಆಗಿ ಕಾಣುತ್ತದೆ’ ಎಂದು ರಾಧಿಕಾ ಪಂಡಿತ್ ಅವರು ವಿಡಿಯೋದಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ. ‘ರಾಕಿನ ರಾಧಿಕಾ ಭೇಟಿ ಮಾಡಿದಾಗ’ ಎನ್ನುವ ಕ್ಯಾಪ್ಶನ್ ಇದಕ್ಕೆ ನೀಡಲಾಗಿದೆ. ಅಭಿಮಾನಿಗಳು ಈ ವಿಡಿಯೋನ ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ:  ‘ನನಗೆ ವೈಯಕ್ತಿಕವಾಗಿ ಇರೋದೇ ಓರ್ವ ಫೋಟೋಗ್ರಾಫರ್’; ಹೆಸರು ರಿವೀಲ್ ಮಾಡಿದ ರಾಧಿಕಾ ಪಂಡಿತ್

ರಾಧಿಕಾ ಪಂಡಿತ್ ಇತ್ತೀಚೆಗೆ ಯಾವುದೇ ಪೋಸ್ಟ್ ಹಾಕಿದರೂ ಅದಕ್ಕೆ ಅಭಿಮಾನಿಗಳು ಯಶ್ 19ನೇ ಸಿನಿಮಾ ಬಗ್ಗೆ ಕಮೆಂಟ್ ಮಾಡುತ್ತಾರೆ. ಈ ಪೋಸ್ಟ್​​ಗೂ ಅದೇ ರೀತಿಯ ಕಮೆಂಟ್​ಗಳು ಬಂದಿವೆ. ಯಶ್ ಹೊಸ ಸಿನಿಮಾ ಬಗ್ಗೆ ಮಾಹಿತಿ ನೀಡಿ ಎಂದು ಅನೇಕರು ಕಮೆಂಟ್ ಬಾಕ್ಸ್​​ನಲ್ಲಿ ಕೋರಿದ್ದಾರೆ.

ಇದನ್ನೂ ಓದಿ: KGF Chapter 2: ‘ಕೆಜಿಎಫ್ ಚಾಪ್ಟರ್​ 2’ ಜನರಿಗೆ ಹೆಚ್ಚು ಇಷ್ಟ ಆಗೋಕೆ ಇದೇ ಕಾರಣ..

‘ಕೆಜಿಎಫ್ 2’ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಮಾಡಿದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಇದೆ. 2022ರಲ್ಲಿ ರಿಲೀಸ್ ಆಗಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಸಿನಿಮಾ ಎನ್ನುವ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ. ಈ ಚಿತ್ರದಿಂದ ಹೊಂಬಾಳೆ ಫಿಲ್ಮ್ಸ್​ಗೆ ದೊಡ್ಡ ಮಟ್ಟದ ಕಲೆಕ್ಷನ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ