Sign In

By signing in or creating an account, you agree with Associated Broadcasting Company's Terms & Conditions and Privacy Policy.

KGF Chapter 2: ‘ಕೆಜಿಎಫ್ ಚಾಪ್ಟರ್​ 2’ ಜನರಿಗೆ ಹೆಚ್ಚು ಇಷ್ಟ ಆಗೋಕೆ ಇದೇ ಕಾರಣ..

ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಸಿನಿಮಾ ಸೂಪರ್ ಹಿಟ್ ಆಯಿತು. ಸಿನಿಮಾ ಅಬ್ಬರದ ಕಲೆಕ್ಷನ್ ಮಾಡಲಿದೆ ಎನ್ನುವ ನಿರೀಕ್ಷೆ ಇತ್ತು. ಆದರೆ, ಈ ಎಲ್ಲಾ ನಿರೀಕ್ಷೆಯನ್ನು ಸಿನಿಮಾ ಮೀರಿತ್ತು.

KGF Chapter 2: ‘ಕೆಜಿಎಫ್ ಚಾಪ್ಟರ್​ 2’ ಜನರಿಗೆ ಹೆಚ್ಚು ಇಷ್ಟ ಆಗೋಕೆ ಇದೇ ಕಾರಣ..
ಯಶ್
Follow us
ರಾಜೇಶ್ ದುಗ್ಗುಮನೆ
|

Updated on:Apr 14, 2023 | 7:28 AM

ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ ಏಪ್ರಿಲ್ 14, 2022ರಂದು ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ರಿಲೀಸ್ ಆಯಿತು. ಯಶ್ ನಟನೆಯ, ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ಈ ಸಿನಿಮಾ ಬರೆದ ರೆಕಾರ್ಡ್​ ಒಂದೆರಡಲ್ಲ. ಹಲವು ದಾಖಲೆಗಳನ್ನು ಬರೆದ ಈ ಚಿತ್ರ ತೆರೆಕಂಡು ಈಗ ಒಂದು ವರ್ಷ ಪೂರ್ಣಗೊಂಡಿದೆ. ಈ ವಿಶೇಷ ದಿನದಂದು ಎಲ್ಲರೂ ‘ಕೆಜಿಎಫ್ 2’ (KGF Chapter 2) ಚಿತ್ರವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಟ್ವಿಟರ್​ನಲ್ಲಿ ‘KGFChapte2’ ಟ್ರೆಂಡ್ ಆಗಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ಒಂದೊಳ್ಳೆಯ ಸುದ್ದಿ ಸಿಗುವ ಸೂಚನೆ ಸಿಕ್ಕಿದೆ.

ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್’ ಸಿನಿಮಾ ಸೂಪರ್ ಹಿಟ್ ಆಯಿತು. ಇದಾದ ಬೆನ್ನಲ್ಲೇ ತೆರೆಗೆ ಬಂದಿದ್ದು ‘ಕೆಜಿಎಫ್ 2’ ಚಿತ್ರ. ಟ್ರೇಲರ್ ಹಾಗೂ ಸಾಂಗ್ ಮೂಲಕವೇ ರಾಕಿ ಚಿತ್ರ ನಿರೀಕ್ಷೆ ಹುಟ್ಟುಹಾಕಿತ್ತು. ಹೀಗಾಗಿ ಸಿನಿಮಾ ಅಬ್ಬರದ ಕಲೆಕ್ಷನ್ ಮಾಡಲಿದೆ ಎನ್ನುವ ನಿರೀಕ್ಷೆ ಇತ್ತು. ಆದರೆ, ಈ ಎಲ್ಲಾ ನಿರೀಕ್ಷೆಯನ್ನು ಸಿನಿಮಾ ಮೀರಿತ್ತು. ಮೊದಲ ದಿನ ಹಿಂದಿಯಲ್ಲೇ 53 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಈ ಚಿತ್ರ, ಎಲ್ಲಾ ಭಾಷೆಗಳಿಂದ ಮೊದಲ ದಿನದ ಒಟ್ಟಾರೆ ಗಳಿಕೆ 100+ ಕೋಟಿ ರೂಪಾಯಿ ದಾಟಿತ್ತು. ಇನ್ನು ಚಿತ್ರ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 1230+ ಕೋಟಿ ರೂಪಾಯಿ ಗಳಿಕೆ ಮಾಡಿದ್ದು ‘ಕೆಜಿಎಫ್ 2’ ಚಿತ್ರದ ಹೆಚ್ಚುಗಾರಿಕೆ.

‘ಕೆಜಿಎಫ್ 2’ ಜನರಿಗೆ ಹೆಚ್ಚು ಇಷ್ಟ ಆಗೋಕೆ ಹಲವು ಕಾರಣಗಳಿದ್ದವು. ನಿರ್ದೇಶಕ ಪ್ರಶಾಂತ್ ನೀಲ್ ಕೈಚಳಕ, ಯಶ್ ಹೀರೋಯಿಸಂ, ಅವರು ಹೇಳಿದ್ದ ಖಡಕ್ ಡೈಲಾಗ್​, ರವಿ ಬಸ್ರೂರು ಅವರ ಸಂಗೀತ ಸಂಯೋಜನೆ, ರವೀನಾ ಟಂಡನ್​ ನಿರ್ವಹಿಸಿದ್ದ ಪ್ರಧಾನಿ ಪಾತ್ರ, ಖಡಕ್ ವಿಲನ್ ಆಗಿ ಸಂಜಯ್ ದತ್​.. ಹೀಗೆ ಹಲವು ವಿಚಾರಗಳು ಅಭಿಮಾನಿಗಳಿಗೆ ಇಷ್ಟ ಆಗಿದೆ.

ಇದನ್ನೂ ಓದಿ: KGF Chapter 2: 100 ದಿನ ಪೂರೈಸಿದ ‘ಕೆಜಿಎಫ್​: ಚಾಪ್ಟರ್​ 2’; ಪ್ರೇಕ್ಷಕರಿಗೆ ‘ಹೊಂಬಾಳೆ ಫಿಲ್ಮ್ಸ್​’ ಧನ್ಯವಾದ

‘ಕೆಜಿಎಫ್ 2’ ಸಿನಿಮಾ ತೆರೆಗೆ ಬಂದು ಒಂದು ವರ್ಷ ಕಳೆದರೂ ಯಶ್ ಹೊಸ ಸಿನಿಮಾ ಬಗ್ಗೆ ಯಾವುದೇ ಅಪ್​ಡೇಟ್ ಸಿಕ್ಕಿಲ್ಲ. ಇದಕ್ಕಾಗಿ ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದರು. ಹೊಸ ಚಿತ್ರದ ಬಗ್ಗೆ ಅಪ್​ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾದಿದ್ದರು. ಈ ವಿಶೇಷ ದಿನದ ಸಂದರ್ಭದಲ್ಲೇ ಅಭಿಮಾನಿಗಳಿಗೆ ಹೊಸ ಸುದ್ದಿ ಸಿಗುವ ಸೂಚನೆ ಸಿಕ್ಕಿದೆ. ಯಶ್ ಅವರು ಶ್ರೀಲಂಕಾದಲ್ಲಿ ಶೂಟಿಂಗ್​ಗಾಗಿ ಸ್ಪಾಟ್ ಹುಡುಕಲು ತೆರಳಿದ್ದರು. ಈ ಸಂದರ್ಭದ ಫೋಟೋ ವೈರಲ್ ಆಗಿದೆ.

‘ಕೆಜಿಎಫ್​ 2’ ಸಿನಿಮಾ ರಿಲೀಸ್ ಆಗಿ ಒಂದು ವರ್ಷ ಕಳೆದ ಹಿನ್ನೆಲೆಯಲ್ಲಿ ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಈ ದಿನವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಪರಭಾಷೆಯ ಬಾಕ್ಸ್ ಆಫೀಸ್ ಪಂಡಿತರು ‘ಕೆಜಿಎಫ್ 2’ ಮಾಡಿದ ದಾಖಲೆಗಳ ಪಟ್ಟಿ ತೆರೆದಿಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:15 am, Fri, 14 April 23