AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡಲು ಅನುಮತಿ ಪಡೆದ ಯಶ್, 19ನೇ ಸಿನಿಮಾಕ್ಕೆ ಭಾರಿ ಯೋಜನೆ

Yash 19: ಶ್ರೀಲಂಕಾನಲ್ಲಿರುವ ನಟ ಯಶ್ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣವನ್ನು ಶ್ರೀಲಂಕಾನಲ್ಲಿ ಮಾಡಲು ಅನುಮತಿಗಳನ್ನು ಪಡೆದಿದ್ದಾರೆ.

ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡಲು ಅನುಮತಿ ಪಡೆದ ಯಶ್, 19ನೇ ಸಿನಿಮಾಕ್ಕೆ ಭಾರಿ ಯೋಜನೆ
ಶ್ರೀಲಂಕಾನಲ್ಲಿ ಯಶ್
ಮಂಜುನಾಥ ಸಿ.
|

Updated on: Apr 13, 2023 | 8:29 PM

Share

ಕೆಜಿಎಫ್ 2 (KGF 2) ಸಿನಿಮಾ ಬಿಡುಗಡೆ ಆಗಿ ಒಂದು ವರ್ಷವಾಗುತ್ತಿರುವ ಬೆನ್ನಲ್ಲೆ ಯಶ್​ರ (Yash) ಮುಂದಿನ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಯಶ್​ರ 19ನೇ (Yash19) ಸಿನಿಮಾ ಬಗ್ಗೆ ಈಗಾಗಲೇ ಹಲವು ಗಾಳಿ ಸುದ್ದಿಗಳು ಹರಿದಾಡಿದ್ದು ಯಾವೊಂದು ಸಹ ಅಧಿಕೃತಗೊಂಡಿಲ್ಲ. ಆದರೆ ತಮ್ಮ ಮುಂದಿನ ಸಿನಿಮಾಕ್ಕೆ ಯಶ್ ಭರ್ಜರಿ ತಯಾರಿಯನ್ನಂತು ಮಾಡುತ್ತಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಸಿನಿಮಾಕ್ಕಾಗಿ ಸತತ ತಯಾರಿ ನಡೆಸುತ್ತಿದ್ದಾರೆ ಎಂಬುದು ಖಾತ್ರಿ. ಯಶ್ ಇದೀಗ ಶ್ರೀಲಂಕಾನಲ್ಲಿದ್ದು (Sri Lanka), ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣವನ್ನು ಅಲ್ಲಿ ಮಾಡಲು ಅನುಮತಿ ಪಡೆದಿದ್ದಾರೆ.

ಶ್ರೀಲಂಕಾದಲ್ಲಿರುವ ನಟ ಯಶ್ ಅಲ್ಲಿನ ಬೋರ್ಡ್ ಆಫ್ ಇನ್​ವೆಸ್ಟ್​ಮೆಂಟ್ ಇನ್ ಶ್ರೀಲಂಕಾದ ಮುಖ್ಯಾಧಿಕಾರಿ ದಿನೇಶ್ ವೇರಕ್ಕೋಡಿ ಅವರನ್ನು ಭೇಟಿಯಾಗಿದ್ದು, ಶ್ರೀಲಂಕಾನಲ್ಲಿ ತಮ್ಮ ಸಿನಿಮಾದ ಕೆಲವು ದೃಶ್ಯಗಳ ಚಿತ್ರೀಕರಣ ಮಾಡಲು ಅನುಮತಿ ಕೋರಿದ್ದಾರೆ. ಈ ಬಗ್ಗೆ ಸ್ವತಃ ಬಿಓಐನ ಮುಖ್ಯಾಧಿಕಾರಿ ದಿನೇಶ್ ವೀರಕ್ಕೋಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಯಶ್ ಜೊತೆಗಿನ ತಮ್ಮ ಚಿತ್ರವನ್ನು ಟ್ವೀಟ್ ಮಾಡಿರುವ ಬೋರ್ಡ್ ಆಫ್ ಇನ್​ವೆಸ್ಟ್​ಮೆಂಟ್ ಇನ್ ಶ್ರೀಲಂಕಾದ ಮುಖ್ಯಾಧಿಕಾರಿ ದಿನೇಶ್ ವೇರಕ್ಕೋಡಿ ”ಯಶ್ ಎಂಬ ಹೆಸರಿನಿಂದ ಜನಪ್ರಿಯರಾಗಿರುವ ಭಾರತದ ನಟ ನವೀನ್ ಕುಮಾರ್ ಅವರನ್ನು ಭೇಟಿಯಾದೆ. ಇವರು ಮೂರು ಫಿಲಂಫೇರ್ ವಿಜೇತರೂ ಹೌದು. ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡಲು ಅವರು ಬಯಸಿದ್ದಾರೆ” ಎಂದಿದ್ದಾರೆ. ಇದೀಗ ಈ ಟ್ವೀಟ್ ವೈರಲ್ ಆಗಿದ್ದು, ಯಶ್ ತಮ್ಮ ಸಿನಿಮಾವನ್ನು ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡುವುದು ಖಾತ್ರಿಯಾಗುತ್ತಿದ್ದಂತೆ ಮತ್ತೆ ಟ್ವಿಟ್ಟರ್​ನಲ್ಲಿ ಯಶ್ 19 ಟ್ರೆಂಡ್ ಆಗಲು ಆರಂಭವಾಗಿದೆ.

ಪ್ರಸ್ತುತ ಶ್ರೀಲಂಕಾನಲ್ಲಿರುವ ನಟ ಯಶ್, ಅಲ್ಲಿ ತಮ್ಮ ಸಿನಿಮಾದ ಚಿತ್ರೀಕರಣಕ್ಕೆ ಲೊಕೇಶನ್​ಗಳ ಹುಡುಕಾಟದಲ್ಲಿದ್ದಾರೆ. ಅಲ್ಲಿನ ಸ್ಥಳೀಯ ಅಧಿಕಾರಿಗಳು ಹಾಗೂ ಸಿನಿಮಾ ಕರ್ಮಿಗಳನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಯಶ್, ಶ್ರೀಲಂಕಾದಲ್ಲಿರುವ ಕೆಲವು ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಯಶ್ ತಂಗಿದ್ದ ಹೋಟೆಲ್ ಸಿಬ್ಬಂದಿ ಯಶ್ ಜೊತೆ ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ. ಆ ಚಿತ್ರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಯಶ್​ರ 19ನೇ ಸಿನಿಮಾ ಬಗ್ಗೆ ಈಗಾಗಲೇ ಹಲವು ಗಾಳಿಸುದ್ದಿಗಳು ಹರಿದಾಡುತ್ತಿವೆ. ಯಶ್​ ತಮ್ಮ ಮುಂದಿನ ಸಿನಿಮಾವನ್ನು ತಾವೇ ನಿರ್ಮಾಣ ಮಾಡಲಿದ್ದಾರೆ. ಸಿನಿಮಾಕ್ಕೆ ಹಾಲಿವುಡ್ ಆಕ್ಷನ್ ನಿರ್ದೇಶಕರನ್ನು ಕರೆತರಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಸಿನಿಮಾದ ನಿರ್ದೇಶಕರು ಯಾರಾಗಲಿದ್ದಾರೆ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಯಶ್ 19 ಸಿನಿಮಾದ ಅಧಿಕೃತ ಘೋಷಣೆಯನ್ನು ಮಾಡುವುದಾಗಿ ಈ ಹಿಂದೆಯೇ ಯಶ್ ಹೇಳಿದ್ದರು ಆದರೆ ಇನ್ನೂ ಘೋಷಣೆ ಆಗಿಲ್ಲ. ಅಭಿಮಾನಿಗಳಂತೂ ಯಶ್​ರ ಮುಂದಿನ ಸಿನಿಮಾಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಿಮಪಾತದಿಂದ ಜಮ್ಮು-ಶ್ರೀನಗರ ಹೈವೇ ಬಂದ್; ಪ್ರವಾಸಿಗರಿಗೆ ವಿಶೇಷ ರೈಲು ಸಂಚಾರ
ಹಿಮಪಾತದಿಂದ ಜಮ್ಮು-ಶ್ರೀನಗರ ಹೈವೇ ಬಂದ್; ಪ್ರವಾಸಿಗರಿಗೆ ವಿಶೇಷ ರೈಲು ಸಂಚಾರ
ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿದ ಪ್ರವಾಸಿಗನ ಕಾಪಾಡಿದ ಗೈಡ್
ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿದ ಪ್ರವಾಸಿಗನ ಕಾಪಾಡಿದ ಗೈಡ್
ಬೆಂಗಳೂರಿನಲ್ಲಿಲ್ಲೂ ಗನ್​ ತೋರಿಸಿ ಬಂಗಾರದ ಅಂಗಡಿ ದರೋಡೆ
ಬೆಂಗಳೂರಿನಲ್ಲಿಲ್ಲೂ ಗನ್​ ತೋರಿಸಿ ಬಂಗಾರದ ಅಂಗಡಿ ದರೋಡೆ
ಜೈಲಿಗೆ ಕರೆದೊಯ್ಯವಾಗ ಅಡ್ಡಹಾಕಿದ ರಾಜೀವ್ ಗೌಡನ ಬೆಂಬಲಿಗರಿಗೆ ಲಾಠಿ ರುಚಿ!
ಜೈಲಿಗೆ ಕರೆದೊಯ್ಯವಾಗ ಅಡ್ಡಹಾಕಿದ ರಾಜೀವ್ ಗೌಡನ ಬೆಂಬಲಿಗರಿಗೆ ಲಾಠಿ ರುಚಿ!
ಏಮ್ಸ್ ಆಸ್ಪತ್ರೆಯೊಳಗೆ ಲಿಫ್ಟ್​ನಲ್ಲೇ ಮಾಂಗಲ್ಯ ದೋಚಿ ಕಳ್ಳ ಪರಾರಿ
ಏಮ್ಸ್ ಆಸ್ಪತ್ರೆಯೊಳಗೆ ಲಿಫ್ಟ್​ನಲ್ಲೇ ಮಾಂಗಲ್ಯ ದೋಚಿ ಕಳ್ಳ ಪರಾರಿ
ವಿಜಯಪುರ ರಾಬರಿ: ಟಾರ್ಗೆಟ್ಟೇ ಬೇರೆ, ದರೋಡೆ ಮಾಡಿದ ಬಂಗಾರದ ಅಂಗಡಿಯೇ ಬೇರೆ!
ವಿಜಯಪುರ ರಾಬರಿ: ಟಾರ್ಗೆಟ್ಟೇ ಬೇರೆ, ದರೋಡೆ ಮಾಡಿದ ಬಂಗಾರದ ಅಂಗಡಿಯೇ ಬೇರೆ!
10ನೇ ದಿನ ಉತ್ಖನನ ವೇಳೆ ಲಕ್ಕುಂಡಿಯಲ್ಲಿ ಮತ್ತೊಂದು ಪ್ರಾಚ್ಯಾವಶೇಷ ಪತ್ತೆ!
10ನೇ ದಿನ ಉತ್ಖನನ ವೇಳೆ ಲಕ್ಕುಂಡಿಯಲ್ಲಿ ಮತ್ತೊಂದು ಪ್ರಾಚ್ಯಾವಶೇಷ ಪತ್ತೆ!
ಕಾವ್ಯಾ ಗೌಡ ಪತಿಯಿಂದ ಕೊಲೆ ಬೆದರಿಕೆ? ಎಲ್ಲವನ್ನೂ ವಿವರಿಸಿದ ಸಂಬಂಧಿ ಪ್ರೇಮಾ
ಕಾವ್ಯಾ ಗೌಡ ಪತಿಯಿಂದ ಕೊಲೆ ಬೆದರಿಕೆ? ಎಲ್ಲವನ್ನೂ ವಿವರಿಸಿದ ಸಂಬಂಧಿ ಪ್ರೇಮಾ
ಹಲ್ಲೆ, ಅತ್ಯಾಚಾರ ಬೆದರಿಕೆ, ಕಳ್ಳತನ ಆರೋಪ: ನಟಿ ಕಾವ್ಯಾ ಗೌಡ ಹೇಳಿದ್ದೇನು?
ಹಲ್ಲೆ, ಅತ್ಯಾಚಾರ ಬೆದರಿಕೆ, ಕಳ್ಳತನ ಆರೋಪ: ನಟಿ ಕಾವ್ಯಾ ಗೌಡ ಹೇಳಿದ್ದೇನು?
ಶಿವಮೊಗ್ಗ: ಶಾಲೆಯಲ್ಲಿ ನೀಡಿದ ಮಾತ್ರೆ ನುಂಗಿ 59 ವಿದ್ಯಾರ್ಥಿಗಳು ಅಸ್ವಸ್ಥ
ಶಿವಮೊಗ್ಗ: ಶಾಲೆಯಲ್ಲಿ ನೀಡಿದ ಮಾತ್ರೆ ನುಂಗಿ 59 ವಿದ್ಯಾರ್ಥಿಗಳು ಅಸ್ವಸ್ಥ