AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್ ಮಾತ್ರವಲ್ಲ ಪ್ರಭಾಸ್ ಜೊತೆಗೂ ದಿಲ್ ರಾಜು ಸಿನಿಮಾ, ನಿರ್ದೇಶಕ ಪ್ರಶಾಂತ್ ನೀಲ್, ಸಿನಿಮಾ ಹೆಸರು ಘೋಷಣೆ

ಯಶ್ ಜೊತೆ ಸಿನಿಮಾ ಮಾಡಲಿದ್ದೇನೆ ಎಂದಿದ್ದ ನಿರ್ಮಾಪಕ ದಿಲ್ ರಾಜು ಈಗ ಪ್ರಭಾಸ್ ಜೊತೆಗೂ ಸಿನಿಮಾ ಮಾಡಲಿದ್ದೇನೆ ಎಂದಿದ್ದು, ಆ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿರುವುದಾಗಿ ಹೇಳಿದ್ದಾರೆ.

ಯಶ್ ಮಾತ್ರವಲ್ಲ ಪ್ರಭಾಸ್ ಜೊತೆಗೂ ದಿಲ್ ರಾಜು ಸಿನಿಮಾ, ನಿರ್ದೇಶಕ ಪ್ರಶಾಂತ್ ನೀಲ್, ಸಿನಿಮಾ ಹೆಸರು ಘೋಷಣೆ
ಪ್ರಭಾಸ್-ನೀಲ್-ದಿಲ್ ರಾಜು
ಮಂಜುನಾಥ ಸಿ.
|

Updated on: Apr 12, 2023 | 8:45 AM

Share

ಕೆಲವು ದಿನಗಳ ಹಿಂದಷ್ಟೆ ತಾವು ನಟ ಯಶ್ (Yash) ಜೊತೆಗೆ ಸಿನಿಮಾ ಮಾಡಲಿರುವುದಾಗಿ ಹೇಳಿದ್ದ ತೆಲುಗಿನ ಬಿಗ್ ಬಜೆಟ್ ಸಿನಿಮಾ ನಿರ್ಮಾಪಕ ದಿಲ್ ರಾಜು (Dil Raju), ಇದೀಗ ತಾವು ಪ್ರಭಾಸ್ ಜೊತೆಗೂ ಸಿನಿಮಾ ಮಾಡಲಿದ್ದು, ಆ ಬಗ್ಗೆ ಮಾತುಕತೆ ಚಾಲ್ತಿಯಲ್ಲಿದೆ ಎಂದಿದ್ದಾರೆ. ವಿಶೇಷವೆಂದರೆ ದಿಲ್ ರಾಜು ನಿರ್ಮಾಣ ಮಾಡಲಿರುವ ಪ್ರಭಾಸ್ ಸಿನಿಮಾವನ್ನು ನಿರ್ದೇಶನ ಮಾಡಲಿರುವುದು ಪ್ರಶಾಂತ್ ನೀಲ್ ಅಂತೆ!

ಪ್ರಭಾಸ್ ನಟಿಸುತ್ತಿರುವ ಸಲಾರ್ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ಆ ಸಿನಿಮಾ ತೆರೆಗೆ ಬರಲಿದೆ. ಇದರ ನಡುವೆ ನಿರ್ಮಾಪಕ ದಿಲ್ ರಾಜು ತಾವು ಪ್ರಭಾಸ್ ಸಿನಿಮಾ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದು, ಆ ಸಿನಿಮಾವನ್ನು ಪ್ರಶಾಂತ್ ನೀಲ್ ಅವರೇ ನಿರ್ದೇಶನ ಮಾಡಲಿದ್ದಾರಂತೆ. ಮಾತ್ರವಲ್ಲ ಸಿನಿಮಾದ ಹೆಸರು ಸದ್ಯಕ್ಕೆ ರಾವಣನ್ ಎಂದಿದ್ದು, ಮುಂದಿನ ದಿನಗಳಲ್ಲಿ ಬದಲಾವಣೆ ಸಹ ಆಗಲಿದೆ ಎಂದು ಸಹ ಹೇಳಿದ್ದಾರೆ.

ಮಾಧ್ಯಮವೊಂದರ ಜೊತೆ ಈ ಬಗ್ಗೆ ಮಾತನಾಡಿರುವ ದಿಲ್ ರಾಜು, ”ಪ್ರಶಾಂತ್ ನೀಲ್ ಈಗಾಗಲೇ ಒಂದು ಚಿತ್ರಕತೆ ತಯಾರು ಮಾಡಿಕೊಂಡಿದ್ದು, ಆ ಕತೆಯನ್ನು ನಾನು ಸಿನಿಮಾ ನಿರ್ಮಾಣ ಮಾಡುವುದು ಪಕ್ಕಾ ಆಗಿದೆ. ಸಿನಿಮಾಕ್ಕೆ ಪ್ರಭಾಸ್ ಸೂಕ್ತ ಎಂದುಕೊಂಡಿದ್ದೇವೆ. ಸದ್ಯಕ್ಕೆ ಪ್ರಶಾಂತ್ ನೀಲ್ ಪ್ರಭಾಸ್ ನಟನೆಯ ಸಲಾರ್ ನಿರ್ದೇಶನ ಮಾಡುತ್ತಿದ್ದಾರೆ. ಅದಾದ ಬಳಿಕ ಜೂ ಎನ್​ಟಿಆರ್ ಜೊತೆಗೆ ಸಿನಿಮಾ ಮಾಡಲಿದ್ದಾರೆ. ಅದರ ಬಳಿಕ ಪ್ರಶಾಂತ್ ನೀಲ್ ಈ ಸಿನಿಮಾದ ಮೇಲೆ ಕೆಲಸ ಮಾಡಲಿದ್ದಾರೆ” ಎಂದಿದ್ದಾರೆ ದಿಲ್ ರಾಜು.

ಪ್ರಭಾಸ್ ಗಾಗಿ ದಿಲ್ ರಾಜು ಬ್ಯಾನರ್​ ಅಡಿಯಲ್ಲಿ ಪ್ರಶಾಂತ್ ನಿರ್ದೇಶಿಸಲಿರುವ ಸಿನಿಮಾ ಪೌರಾಣಿಕ ಕತೆಯನ್ನು ಹೊಂದಿರಲಿದೆ ಎನ್ನಲಾಗುತ್ತಿದೆ ಮಾತ್ರವಲ್ಲ ಈವರೆಗೆ ಯಾವ ಸಿನಿಮಾಕ್ಕೂ ಹಾಕಿರದಷ್ಟು ಬಂಡವಾಳ ಈ ಸಿನಿಮಾಕ್ಕೆ ದಿಲ್ ರಾಜು ಹೂಡಲಿದ್ದಾರಂತೆ.

ಇದನ್ನೂ ಓದಿ: ಯಶ್ ಜೊತೆ ಸಿನಿಮಾ ಮಾಡಲಿದ್ದಾರೆ ತೆಲುಗಿನ ಖ್ಯಾತ ನಿರ್ಮಾಪಕ​; ವಿಷಯ ಖಚಿತಪಡಿಸಿದ ದಿಲ್ ರಾಜು

ಪ್ರಭಾಸ್ ಪ್ರಸ್ತುತ ಮೂರು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಲಾರ್, ಪ್ರಾಜೆಕ್ಟ್ ಕೆ ಸಿನಿಮಾಗಳಲ್ಲಿ ಪ್ರಭಾಸ್ ನಟಿಸುತ್ತಿದ್ದು, ಆದಿಪುರುಷ್ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿಯೂ ಪ್ರಭಾಸ್ ತೊಡಗಿಕೊಳ್ಳಲಿದ್ದಾರೆ. ಈ ಸಿನಿಮಾಗಳ ಬಳಿಕ ಸಂದೀಪ್ ವಂಗ ನಿರ್ದೇಶನದ ಸ್ಪಿರಿಟ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಮಾರುತಿ ನಿರ್ದೇಶನದ ಹಾರರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವುಗಳ ಬಳಿಕವಷ್ಟೆ ಪ್ರಭಾಸ್ ಮತ್ತೊಮ್ಮೆ ಪ್ರಶಾಂತ್ ನೀಲ್ ಸಿನಿಮಾದಲ್ಲಿ ನಟಿಸಲು ಸಾಧ್ಯ.

ಇನ್ನು ಪ್ರಶಾಂತ್ ನೀಲ್ ಸಹ ಬ್ಯುಸಿಯಾಗಿದ್ದು, ಸಲಾರ್ ಸಿನಿಮಾದ ಬಳಿಕ ಜೂ ಎನ್​ಟಿಆರ್​ಗಾಗಿ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಅದಾದ ಬಳಿಕ ಬಹುಷಃ ಕೆಜಿಎಫ್ 3 ಸಿನಿಮಾ ಮಾಡುವ ಸಾಧ್ಯತೆ ಇದೆ. ಅಲ್ಲು ಅರ್ಜುನ್​ಗಾಗಿಯೂ ಒಂದು ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅದರ ಬಳಿಕವಷ್ಟೆ ಅವರು ಮತ್ತೊಮ್ಮೆ ಪ್ರಭಾಸ್ ಜೊತೆ ಸಿನಿಮಾ ಮಾಡಬಹುದಾಗಿದೆ.

ಇನ್ನು ನಿರ್ಮಾಪಕ ದಿಲ್ ರಾಜು, ಕೆಲವು ದಿನಗಳ ಹಿಂದಷ್ಟೆ ಸಾಮಾಜಿಕ ಜಾಲತಾಣ ಪ್ರಶ್ನೋತ್ತರದಲ್ಲಿ ತಾವು ನಟ ಯಶ್ ಜೊತೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ