AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್ ಜೊತೆ ಸಿನಿಮಾ ಮಾಡಲಿದ್ದಾರೆ ತೆಲುಗಿನ ಖ್ಯಾತ ನಿರ್ಮಾಪಕ​; ವಿಷಯ ಖಚಿತಪಡಿಸಿದ ದಿಲ್ ರಾಜು

ದಿಲ್ ರಾಜು ಅವರ ಪೋಸ್ಟ್ ವೈರಲ್ ಆಗಿದೆ. ಯಶ್ 19ನೇ ಚಿತ್ರಕ್ಕೆ ದಿಲ್ ರಾಜು ಬಂಡವಾಳ ಹೂಡುತ್ತಾರಾ ಎನ್ನುವ ಪ್ರಶ್ನೆಯೂ ಮೂಡಿದೆ.

ಯಶ್ ಜೊತೆ ಸಿನಿಮಾ ಮಾಡಲಿದ್ದಾರೆ ತೆಲುಗಿನ ಖ್ಯಾತ ನಿರ್ಮಾಪಕ​; ವಿಷಯ ಖಚಿತಪಡಿಸಿದ ದಿಲ್ ರಾಜು
ಯಶ್-ದಿಲ್ ರಾಜು
ರಾಜೇಶ್ ದುಗ್ಗುಮನೆ
|

Updated on: Apr 06, 2023 | 10:16 AM

Share

ದಿಲ್ ರಾಜು ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ನಿರ್ಮಾಣದ ಅನೇಕ ಸಿನಿಮಾಗಳು ಹಿಟ್ ಆಗಿವೆ. ಇತ್ತೀಚೆಗೆ ತೆರೆಗೆ ಬಂದ ದಳಪತಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ವಾರಿಸು’ (Varisu Movie) ಬಾಕ್ಸ್ ಆಫೀಸ್​ನಲ್ಲಿ 300+ ಕೋಟಿ ರೂಪಾಯಿ ಗಳಿಕೆ ಮಾಡಿತು. ಈ ಚಿತ್ರದಿಂದ ದಿಲ್ ರಾಜು ಒಳ್ಳೆಯ ಲಾಭ ಕಂಡರು. ಸದ್ಯ ರಾಮ್ ಚರಣ್ ನಟನೆಯ 15ನೇ ಸಿನಿಮಾ ‘ಗೇಮ್ ಚೇಂಜರ್​’ನ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಮಧ್ಯೆ ಹೊಸ ಅಪ್​ಡೇಟ್ ಒಂದು ಸಿಕ್ಕಿದೆ. ಯಶ್ ಜೊತೆ ದಿಲ್ ರಾಜು ಕೆಲಸ ಮಾಡಲಿದ್ದಾರಂತೆ.

ಯಶ್ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ‘ಕೆಜಿಎಫ್ 2’ ತೆರೆಕಂಡ ಬಳಿಕ ಅವರು ದೊಡ್ಡ ಬ್ರೇಕ್ ಪಡೆದಿದ್ದಾರೆ. ಯಶ್ ಮುಂದಿನ ಸಿನಿಮಾ ಬಗ್ಗೆ ಈವರೆಗೆ ಯಾವುದೇ ಅಪ್​ಡೇಟ್ ಸಿಕ್ಕಿಲ್ಲ. ಈ ಮಧ್ಯೆ ದಿಲ್ ರಾಜು ಅವರ ಪೋಸ್ಟ್ ವೈರಲ್ ಆಗಿದೆ. ಯಶ್ 19ನೇ ಚಿತ್ರಕ್ಕೆ ದಿಲ್ ರಾಜು ಬಂಡವಾಳ ಹೂಡುತ್ತಾರಾ ಎನ್ನುವ ಪ್ರಶ್ನೆಯೂ ಮೂಡಿದೆ.

ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಮೂಲಕ ದಿಲ್ ರಾಜು ಅವರು ಬಂಡವಾಳ ಹೂಡುತ್ತಾರೆ. ಇತ್ತೀಚೆಗೆ ಟ್ವಿಟರ್​ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ನಡೆಸಲಾಯಿತು. ಈ ವೇಳೆ ಯಶ್ ಅಭಿಮಾನಿಯೊಬ್ಬರು ದಿಲ್​ ರಾಜುಗೆ ಪ್ರಶ್ನೆ ಕೇಳಿದರು. ‘ಯಶ್ ಜೊತೆ ಸಿನಿಮಾ ನಿರೀಕ್ಷಿಸಬಹುದೇ’ ಎಂದು ಕೇಳಲಾಯಿತು. ಇದಕ್ಕೆ ದಿಲ್ ರಾಜು ಪರವಾಗಿ ಉತ್ತರಿಸಿರುವ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್, ‘ಹೌದು’ ಎನ್ನುವ ಉತ್ತರ ನೀಡಿದೆ.

ಇದನ್ನೂ ಓದಿ: ಸುದೀಪ್​, ಸುಮಲತಾ ಬಿಜೆಪಿ ಪರ ವಹಿಸಿದ ಬಳಿಕ ಯಶ್​ ನಿಲುವೇನು? ಜನರಲ್ಲಿ ಮೂಡಿದೆ ಪ್ರಶ್ನೆ

ಸದ್ಯ ಈ ಟ್ವೀಟ್ ವೈರಲ್ ಆಗುತ್ತಿದೆ. ಯಶ್ ಮುಂದಿನ ಸಿನಿಮಾ ದೊಡ್ಡ ಮಟ್ಟದಲ್ಲಿ ನಿರ್ಮಾಣ ಆಗಲಿದೆ ಎಂಬ ಅಂದಾಜು ಅಭಿಮಾನಿಗಳಿಗೆ ಇದೆ. ಆದರೆ, ಈ ಚಿತ್ರವನ್ನು ಯಾರು ನಿರ್ಮಾಣ ಮಾಡುತ್ತಾರೆ, ಯಾರು ನಿರ್ದೇಶನ ಮಾಡುತ್ತಾರೆ ಅನ್ನೋದು ಈವರೆಗೆ ರಿವೀಲ್ ಆಗಿಲ್ಲ. ಯಶ್ 19ನೇ ಚಿತ್ರಕ್ಕೆ ದಿಲ್ ರಾಜು ಅವರೇ ಬಂಡವಾಳ ಹೂಡಲಿ ಎಂದು ಎಲ್ಲರೂ ಕೋರುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ