AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್​, ಸುಮಲತಾ ಬಿಜೆಪಿ ಪರ ವಹಿಸಿದ ಬಳಿಕ ಯಶ್​ ನಿಲುವೇನು? ಜನರಲ್ಲಿ ಮೂಡಿದೆ ಪ್ರಶ್ನೆ

Karnataka Assembly Elections 2023: ಕಿಚ್ಚ ಸುದೀಪ್​ ಅವರು ಬಿಜೆಪಿ ಜೊತೆ ಗುರುತಿಸಿಕೊಂಡ ಬಳಿಕ ಅಭಿಮಾನಿಗಳ ವಲಯದಲ್ಲಿ ಬಗೆಬಗೆಯ ಚರ್ಚೆ ನಡೆಯುತ್ತಿದೆ. ಯಶ್​ ನಿಲುವು ಏನಿರಬಹುದು ಎಂದು ಫ್ಯಾನ್ಸ್​ ಊಹಿಸುತ್ತಿದ್ದಾರೆ.

ಸುದೀಪ್​, ಸುಮಲತಾ ಬಿಜೆಪಿ ಪರ ವಹಿಸಿದ ಬಳಿಕ ಯಶ್​ ನಿಲುವೇನು? ಜನರಲ್ಲಿ ಮೂಡಿದೆ ಪ್ರಶ್ನೆ
ಯಶ್, ಸುಮಲತಾ ಅಂಬರೀಷ್, ಸುದೀಪ್
ಮದನ್​ ಕುಮಾರ್​
|

Updated on: Apr 06, 2023 | 7:15 AM

Share

ಕರ್ನಾಟಕದಲ್ಲಿ ಚುನಾವಣೆಯ ಕಾವು ಜೋರಾಗಿದೆ. ವಿಧಾನಸಭಾ ಚುನಾವಣೆಯ (Karnataka Assembly Elections 2023) ಪ್ರಚಾರದಲ್ಲಿ ಎಲ್ಲ ಪಕ್ಷಗಳು ಹಗಲಿರುಳು ತೊಡಗಿಕೊಂಡಿವೆ. ಸಕಲ ರೀತಿಯಿಂದಲೂ ಜನರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಸ್ಟಾರ್​ ಕಲಾವಿದರ ಖ್ಯಾತಿಯನ್ನು ಬಳಸಿಕೊಂಡು ಪ್ರಚಾರ ಮಾಡಲು ಪ್ರಮುಖ ಪಕ್ಷದ ಮುಖಂಡರು ಮುಂದಾಗಿದ್ದಾರೆ. ನಟ ಸುದೀಪ್​ (Kichcha Sudeep) ಅವರು ಈಗಾಗಲೇ ಬಿಜೆಪಿ ಪರ ಗುರುತಿಸಿಕೊಂಡಿದ್ದಾರೆ. ಹಾಗಾದರೆ ಇನ್ನುಳಿದ ಸ್ಟಾರ್​ ಕಲಾವಿದರು ಯಾವ ಪಕ್ಷಕ್ಕೆ ತಮ್ಮ ಬೆಂಬಲ ನೀಡುತ್ತಾರೆ ಎಂಬ ಕೌತುಕ ನಿರ್ಮಾಣ ಆಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಷ್​ ಪರವಾಗಿ ಪ್ರಚಾರ ನಡೆಸಿದ್ದ ‘ರಾಕಿಂಗ್​ ಸ್ಟಾರ್​’ ಯಶ್​ (Yash) ಅವರು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಯಾರ ಜೊತೆ ಕೈ ಜೋಡಿಸುತ್ತಾರೆ ಎಂಬ ಪ್ರಶ್ನೆ ಮೂಡಿದೆ.

ಮಂಡ್ಯದಲ್ಲಿ ಸುಮಲತಾ ಅಂಬರೀಷ್​ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ನಿಂತಿದ್ದರು. ಜೆಡಿಎಸ್​ ವಿರುದ್ಧ ಕಠಿಣ ಸ್ಪರ್ಧೆ ನೀಡಿದ್ದ ಅವರಿಗೆ ಯಶ್​ ಸಾಥ್​ ನೀಡಿದ್ದರು. ಬಹಿರಂಗ ಪ್ರಚಾರದಲ್ಲಿ ಭಾಗಿಯಾಗಿ ಸುಮಲತಾ ಅಂಬರೀಷ್​ ಪರವಾಗಿ ಮತ ಕೇಳುವಲ್ಲಿ ಯಶ್​ ಶ್ರಮಿಸಿದ್ದರು. ಈಗ ಸುಮಲತಾ ಅವರು ತಾವು ಬಿಜೆಪಿ ಪರವಾಗಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಅದರ ಬೆನ್ನಲ್ಲೇ ಸುದೀಪ್​ ಕೂಡ ಬಿಜೆಪಿ ಪರ ಬ್ಯಾಟ್​ ಬೀಸಿದ್ದಾರೆ. ಈ ಸಂದರ್ಭದಲ್ಲಿ ಯಶ್​ ಅವರು ಯಾವುದಾದರೂ ಪಕ್ಷದ ಪರ ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ, ನಟ ಸುದೀಪ್​ ಬೆಂಬಲ: ಬಿಜೆಪಿ ವಿರುದ್ಧ ಟ್ವೀಟ್​ ಮೂಲಕ ಕಾಂಗ್ರೆಸ್​ ವ್ಯಂಗ್ಯ

ಇದನ್ನೂ ಓದಿ
Image
‘ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ, ಯಾರಿಗೂ ಟಿಕೆಟ್ ಕೇಳಿಲ್ಲ’; ಸುದೀಪ್ ಸ್ಪಷ್ಟನೆ
Image
Kiccha Sudeep: ತೆರೆಮೇಲೆ ಸುದೀಪ್​ ರಾಜಕಾರಣಿ ಪಾತ್ರ ಮಾಡಿದ್ದು ಒಮ್ಮೆ ಮಾತ್ರ; ‘ಕಿಚ್ಚ’ ಚಿತ್ರದಲ್ಲಿತ್ತು ಪಕ್ಕಾ ಪೊಲಿಟಿಕಲ್​ ಕಥೆ​
Image
‘ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ’; ಸುದೀಪ್ ಬಿಜೆಪಿ ಸೇರ್ತಾರೆ ಎನ್ನುವ ವಿಚಾರದಲ್ಲಿ ಪ್ರಕಾಶ್ ರಾಜ್ ಪ್ರತಿಕ್ರಿಯೆ
Image
Kichcha Sudeep: ನಟ ಕಿಚ್ಚ ಸುದೀಪ್​ಗೆ ಬೆದರಿಕೆ ಪತ್ರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

ಸ್ಟಾರ್​ ಕಲಾವಿದರಿಗೆ ಮಣೆ ಹಾಕುವಲ್ಲಿ ಕಾಂಗ್ರೆಸ್​ ಕೂಡ ಹಿಂದುಳಿಯುವುದಿಲ್ಲ. ಕೆಲವು ದಿನಗಳ ಹಿಂದೆ ಸುದೀಪ್​ ಅವರನ್ನು ಡಿಕೆ ಶಿವಕುಮಾರ್ ಭೇಟಿ ಆಗಿದ್ದರು. ಆದರೆ ಅದು ಫಲ ನೀಡಿಲ್ಲ. ಇನ್ನುಳಿದ ಸ್ಟಾರ್​ ನಟರನ್ನು ಸೆಳೆಯುವ ಪ್ರಯತ್ನ ಖಂಡಿತ ಆಗಲಿದೆ. ಹಾಗಾದರೆ ಯಶ್​ಗೆ ಕಾಂಗ್ರೆಸ್​ ನಾಯಕರು ಮಣೆ ಹಾಕುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ: ಮಾತು ತಪ್ಪದ ಯಶ್, ಪ್ರಕಾಶ್ ರೈ ಜೊತೆ ಸೇರಿ ಅಪ್ಪು ಹೆಸರಲ್ಲಿ ಆಂಬುಲೆನ್ಸ್ ವಿತರಣೆ

ಪ್ರಸ್ತುತ ಯಶ್​ ಅವರು ಹೊಸ ಸಿನಿಮಾ ಘೋಷಿಸಿಲ್ಲ. ‘ಕೆಜಿಎಫ್​: ಚಾಪ್ಟರ್​ 2’ ಬಿಡುಗಡೆಯಾಗಿ ಒಂದು ವರ್ಷ ಕಳೆಯುತ್ತಿದೆ. ಇಷ್ಟು ದೀರ್ಘ ಗ್ಯಾಪ್​ ಪಡೆದಿರುವ ಅವರು ಆದಷ್ಟು ಬೇಗ ಹೊಸ ಸಿನಿಮಾದ ಬಗ್ಗೆ ಅಪ್​ಡೇಟ್​ ನೀಡಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ. ಈಗ ಯಶ್​ ಅವರು ಯಾವುದೇ ಚಿತ್ರವನ್ನು ಕೈಗೆತ್ತಿಕೊಳ್ಳದೇ ಇರುವುದರಿಂದ ಕೊಂಚ ಬಿಡುವು ಅವರಿಗೆ ಇದೆ. ಹಾಗಾಗಿ ಹೊಸ ಚಿತ್ರ ಸೆಟ್ಟೇರುವುದಕ್ಕೂ ಮುನ್ನ ಚುನಾವಣೆಯ ಪ್ರಚಾರಕ್ಕೆ ಅವರು ಸಮಯ ನೀಡಬಹುದು. ಆದರೆ ಈ ಎಲ್ಲ ವಿಚಾರಗಳ ಬಗ್ಗೆ ಇನ್ನಷ್ಟೇ ಸ್ಪಷ್ಟ ಚಿತ್ರಣ ಸಿಗಬೇಕಿದೆ.

ಸಿನಿಮಾ ನಟರಿಗೆ ಎಲ್ಲ ವರ್ಗದ ಅಭಿಮಾನಿಗಳಿಂದ ಪ್ರೀತಿ ಸಿಗುತ್ತದೆ. ಆದರೆ ಅವರು ಯಾವುದಾದರೊಂದು ಪಕ್ಷದ ಜೊತೆ ಗುರುತಿಸಿಕೊಂಡಾಗ ಜನರ ಅಭಿಮಾನದಲ್ಲಿ ಕೊಂಚ ಏರಿಳಿತ ಆಗುವುದು ಖಂಡಿತ. ಅದರಲ್ಲೂ ಕಲಾವಿದರಿಗೆ ರಾಜಕೀಯದ ಗಾಳಿ ತಗುಲಿದರೆ ಅವರನ್ನು ಜನರು ನೋಡುವ ರೀತಿ ಬದಲಾಗುತ್ತದೆ. ಹಾಗಾಗಿ ಅನೇಕ ಕಲಾವಿದರು ರಾಜಕೀಯದಿಂದ ದೂರ ಇರಲು ಪ್ರಯತ್ನಿಸುವುದುಂಟು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.