ಮಾತು ತಪ್ಪದ ಯಶ್, ಪ್ರಕಾಶ್ ರೈ ಜೊತೆ ಸೇರಿ ಅಪ್ಪು ಹೆಸರಲ್ಲಿ ಆಂಬುಲೆನ್ಸ್ ವಿತರಣೆ

ಪುನೀತ್ ರಾಜ್​ಕುಮಾರ್ ನೆನಪನ್ನು ಜನಸೇವೆಯ ಮೂಲಕ ಜೀವಂತವಿರಿಸಲು ನಿಶ್ಚಯಿಸಿರುವ ಪ್ರಕಾಶ್ ರೈ, ನಟ ಯಶ್, ಸೂರ್ಯ, ಚಿರಂಜೀವಿ, ಕೆವಿಎನ್ ವೆಂಕಟ್ ಸಹಾಯದೊಂದಿಗೆ ಮತ್ತೆ ಐದು ಹೊಸ ಆಂಬುಲೆನ್ಸ್ ಗಳನ್ನು ಉಚಿತವಾಗಿ ವಿತರಣೆ ಮಾಡಿದ್ದಾರೆ.

ಮಾತು ತಪ್ಪದ ಯಶ್, ಪ್ರಕಾಶ್ ರೈ ಜೊತೆ ಸೇರಿ ಅಪ್ಪು ಹೆಸರಲ್ಲಿ ಆಂಬುಲೆನ್ಸ್ ವಿತರಣೆ
ಅಪ್ಪು ಆಂಬುಲೆನ್ಸ್
Follow us
ಮಂಜುನಾಥ ಸಿ.
|

Updated on:Mar 25, 2023 | 7:38 PM

ಪುನೀತ್ ರಾಜ್​ಕುಮಾರ್ (Puneeth Rajkumar) ಬಿಟ್ಟುಹೋದ ಸಮಾಜ ಸೇವೆಯನ್ನು ಅವರ ಕುಟುಂಬ, ಅವರ ಅಭಿಮಾನಿಗಳು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅಂತೆಯೇ ಪುನೀತ್ ರಾಜ್​ಕುಮಾರ್​ಗೆ ಆಪ್ತರಾಗಿದ್ದ ನಟ ಪ್ರಕಾಶ್ ರೈ (Prakash Raj) ಸಹ ಅಪ್ಪು ಹೆಸರಲ್ಲಿ ಸೇವಾ ಕಾರ್ಯ ಮಾಡುತ್ತಿದ್ದು, ಅಪ್ಪು ಎಕ್ಸ್​ಪ್ರೆಸ್ ಹೆಸರಿನ ಆಂಬುಲೆನ್ಸ್ ವಾಹನಗಳನ್ನು ಉಚಿತವಾಗಿ ಆಸ್ಪತ್ರೆಗಳಿಗೆ ನೀಡುತ್ತಿದ್ದಾರೆ. ಈ ಕಾರ್ಯಕ್ಕೆ ಅವರು ತಮಿಳು ನಟ ಸೂರ್ಯ ಹಾಗೂ ತೆಲುಗಿನ ಚಿರಂಜೀವಿ ಅವರ ಸಹಾಯ ಪಡೆದಿದ್ದರು. ಆದರೆ ಅಪ್ಪು ಸ್ಮರಣೆ ಕಾರ್ಯಕ್ರಮದಲ್ಲಿ ನಟ ಯಶ್ (Yash) ತಾವೂ ಸಹ ಈ ಕಾರ್ಯದಲ್ಲಿ ಕೈ ಜೋಡಿಸುವುದಾಗಿ ಘೋಷಿಸಿ ಕರ್ನಾಟಕದ ಪ್ರತಿ ಜಿಲ್ಲೆಗೂ ಒಂದೊಂದು ಆಂಬುಲೆನ್ಸ್ ಅನ್ನು ತಲುಪಿಸೋಣ ಎಂದಿದ್ದರು.

ಆ ಸೇವಾಕಾರ್ಯದ ಭಾಗವಾಗಿ ಇದೀಗ ಕರ್ನಾಟಕದ ಆರು ಜಿಲ್ಲೆಗಳಿಗೆ ಅಪ್ಪು ಆಂಬುಲೆನ್ಸ್ ಅನ್ನು ಪ್ರಕಾಶ್ ರೈ ಅವರು ಉಚಿತವಾಗಿ ನೀಡಿದ್ದಾರೆ. ಈ ಬಗ್ಗೆ ವಿಡಿಯೋವನ್ನು ಸಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಹಾಯ ಮಾಡಿದ ನಟ ಯಶ್, ಸೂರ್ಯ ಹಾಗೂ ಚಿರಂಜೀವಿ ಅವರುಗಳಿಗೆ ಧನ್ಯವಾದವನ್ನು ಅರ್ಪಿಸಿದ್ದಾರೆ.

ವಿಡಿಯೋದಲ್ಲಿ ಮಾತನಾಡಿರುವ ಪ್ರಕಾಶ್ ರೈ, ಅಪ್ಪು ನಮ್ಮೆಲ್ಲರೊಟ್ಟಿಗೆ ಶಾಶ್ವತವಾಗಿ ಉಳಿಯಬೇಕೆಂದರೆ ಅವರು ಮಾಡುತ್ತಿದ್ದ ಸಮಾಜ ಸೇವೆಯನ್ನು ನಾವು ಮುಂದುವರೆಸಬೇಕಾಗಿದೆ. ಹಾಗಾಗಿ ನಾನು ನನ್ನ ಪ್ರಕಾಶ್ ರಾಜ್ ಫೌಂಡೇಶನ್ ಮೂಲಕ ಅಪ್ಪು ಎಕ್ಸ್​ಪ್ರೆಸ್ ಕನಸು ಕಂಡೆ. ಪ್ರತಿಜಿಲ್ಲೆಗೂ ಅಪ್ಪು ಎಕ್ಸ್​ಪ್ರೆಸ್ ಆಂಬುಲೆನ್ಸ್ ಸೇವೆ ನೀಡುವ ಕಾರ್ಯವನ್ನು ನಾವು ಮೈಸೂರಿನಿಂದ ಆರಂಭಿಸಿದೆವು. ಇದೀಗ ಅದರ ಎರಡನೇ ಹಂತವಾಗಿ ಬೀದರ್, ಕಲಬುರ್ಗಿ, ಕೊಳ್ಳೆಗಾಲ, ಕೊಪ್ಪಳ, ಉಡುಪಿಗಳಿಗೆ ಆಂಬುಲೆನ್ಸ್ ವಿತರಿಸುತ್ತಿದ್ದೇವೆ” ಎಂದಿದ್ದಾರೆ.

”ಆದರೆ ಈ ಬಾರಿ ನಾನು ಒಬ್ಬಂಟಿಯಲ್ಲ. ನಮ್ಮೊಂದಿಗೆ ಮೆಗಾಸ್ಟಾರ್ ಚಿರಂಜೀವಿ, ನಟ ಸೂರ್ಯ, ನಮ್ಮೆಲ್ಲರ ಪ್ರೀತಿಯ ಯಶ್ ಹಾಗೂ ವೆಂಕಟ್ ಅವರುಗಳು ಇದ್ದಾರೆ. ಯಶ್ ಹೇಳಿದ ಮಾತು ನನಗೆ ಬಹಳ ಇಷ್ಟವಾಯಿತು. ಸರ್, ಇದು ನಿಮ್ಮೊಬ್ಬರ ಕನಸಲ್ಲ, ನಮ್ಮೆಲ್ಲರ ಕನಸು ಎಂದಿದ್ದರು. ಅವರ ಉದಾರತೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ಆಂಬುಲೆನ್ಸ್ ವಿತರಣೆಯನ್ನು ದೊಡ್ಡ ಸಮಾರಂಭ ಮಾಡಿ ಮಾಡಬಹುದಿತ್ತು. ಆದರೆ ಯಶ್ ಹಾಗೂ ನಾನು ಯೋಚಿಸಿದೆವು ಸಮಾರಂಭ ಮಾಡಲು ಖರ್ಚಾಗುವ ಹಣದಲ್ಲಿ ಇನ್ನೊಂದು ಆಂಬುಲೆನ್ಸ್ ಖರೀದಿ ಮಾಡಬಹುದೆಂದು ಹಾಗಾಗಿ ಅಬ್ಬರವಿಲ್ಲದೆ ಸರಳವಾಗಿ ವಿತರಣೆ ಮಾಡುತ್ತಿದ್ದೇವೆ” ಎಂದಿದ್ದಾರೆ ಪ್ರಕಾಶ್ ರೈ.

ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ, ಪ್ರತಿ ಜಿಲ್ಲೆಗೂ ಆಂಬುಲೆನ್ಸ್ ತಲುಪಿಸುತ್ತೇವೆ ಎಂದು ಯಶ್ ಹೇಳಿದ್ದ ವಿಡಿಯೋ ಹಂಚಿಕೊಂಡು ‘ಆಂಬುಲೆನ್ಸ್ ಬಂತಾ?’ ಎಂದು ಕೆಲವರು ಕಾಲೆಳೆದಿದ್ದರು. ಆದರೆ ಇದೀಗ ಯಶ್, ಪ್ರಕಾಶ್ ರೈ, ಸೂರ್ಯ, ಚಿರಂಜೀವಿ, ಕೆವಿಎಂ ವೆಂಕಟ್ ಅವರುಗಳು ಐದು ಆಂಬುಲೆನ್ಸ್ ವಿತರಣೆ ಮಾಡಿದ್ದಾರೆ. ಮುಂದಿನ ಹಂತದಲ್ಲಿ ಇನ್ನಷ್ಟು ಜಿಲ್ಲೆಗಳಿಗೆ ಆಂಬುಲೆನ್ಸ್ ವಿತರಣೆ ನಡೆಯುವ ಭರವಸೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:37 pm, Sat, 25 March 23

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು