ಶಿವರಾಜ್ಕುಮಾರ್ ಚಿತ್ರಕ್ಕೆ ನೀವೂ ನಾಯಕಿ ಆಗಬಹುದು; ಈ ಅರ್ಹತೆ ಇದ್ದರೆ ಮೊದಲ ಆದ್ಯತೆ
‘ನಾತಿಚರಾಮಿ’, ‘ಗಾಳಿಪಟ 2’ ಮೊದಲಾದ ಸಿನಿಮಾಗಳನ್ನು ರಮೇಶ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಈಗ ಅವರು ಶಿವಣ್ಣ-ಅರ್ಜುನ್ ಜನ್ಯಾ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.
ಶಿವರಾಜ್ಕುಮಾರ್ (Shivarajkumar) ನಟನೆಯ ‘45’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ಚಿತ್ರದ ಮೂಲಕ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ (Arjun Janya) ಅವರು ನಿರ್ದೇಶಕರ ಕ್ಯಾಪ್ ತೊಟ್ಟಿದ್ದಾರೆ. ಈ ಚಿತ್ರಕ್ಕೆ ಈಗ ನಾಯಕಿಯ ಹುಡುಕಾಟ ಶುರುವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಡಿಷನ್ ಕರೆಯಲಾಗಿದೆ. ಕನ್ನಡ ಬರಲೇಬೇಕು ಎಂದು ತಂಡ ಸೂಚಿಸಿದೆ. ನಾಯಕಿ ಆಗಬೇಕು ಎಂದುಕೊಂಡವರು ಫೋಟೋ ಹಾಗೂ ವಿಡಿಯೋ ಕಳುಹಿಸಬೇಕು. ನಂತರ ಚಿತ್ರತಂಡದವರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಶಿವರಾಜ್ಕುಮಾರ್ ನಟನೆಯ ‘45’ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧಗೊಳ್ಳಲಿದೆ. ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ ಜೊತೆ ‘ರಿಯಲ್ ಸ್ಟಾರ್’ ಉಪೇಂದ್ರ ಕೂಡ ನಟಿಸಲಿದ್ದಾರೆ. ‘ಕಬ್ಜ’ ಚಿತ್ರದಲ್ಲಿ ಈ ಜೋಡಿ ಮೋಡಿ ಮಾಡಿತ್ತು. ಈ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಕೂಡ ಇದ್ದಾರೆ. ಈ ಸಿನಿಮಾಗೆ ರಮೇಶ್ ರೆಡ್ಡಿ ಬಂಡವಾಳ ಹೂಡುತ್ತಿದ್ದು, ಅರ್ಜುನ್ ಜನ್ಯ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈಗ ತಂಡಕ್ಕೆ ನಾಯಕಿಗಾಗಿ ಹುಡುಕಾಟ ಆರಂಭ ಆಗಿದೆ.
‘ನಾತಿಚರಾಮಿ’, ‘ಗಾಳಿಪಟ 2’ ಮೊದಲಾದ ಸಿನಿಮಾಗಳನ್ನು ರಮೇಶ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಈಗ ಅವರು ಶಿವಣ್ಣ-ಅರ್ಜುನ್ ಜನ್ಯಾ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೆಸುತ್ತಿದೆ. ಈ ಸಿನಿಮಾದಲ್ಲಿ ನಟಿಸಬೇಕು ಎಂದುಕೊಳ್ಳುವವರಿಗೆ ಕನ್ನಡ ಬರಬೇಕು. ಅಂಥವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಆಸಕ್ತಿ ಇರುವವರು ತಮ್ಮ ಇತ್ತೀಚಿನ ಎಡಿಟ್ ಮಾಡದ ಫೋಟೋ ಹಾಗೂ ಚಿಕ್ಕ ವಿಡಿಯೋ ತುಣುಕನ್ನು 45kannadamovie@gmail.comಗೆ ಕಳುಹಿಸಬೇಕು.
ದೊಡ್ಡ ಬಜೆಟ್ನಲ್ಲಿ ‘45’ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭ ಆಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಕಾಣಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಅರ್ಜುನ್ ಜನ್ಯ ಅವರೇ ಕಥೆ-ಚಿತ್ರಕಥೆ ಬರೆದಿದ್ದು, ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಕೂಡ ವಹಿಸಿಕೊಂಡಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳಿಗೆ ಸಖತ್ ಡಿಮ್ಯಾಂಡ್ ಬಂದಿದೆ ಎನ್ನಲಾಗಿದೆ.
ಇದನ್ನೂ ಓದಿ: ‘ಕಬ್ಜ’ ಚಿತ್ರದ ಅದ್ದೂರಿ ಪ್ರೀ-ರಿಲೀಸ್ ಇವೆಂಟ್ಗೆ ಶಿವರಾಜ್ಕುಮಾರ್ ಗೈರು; ಕಾರಣ ಏನು?
ಶಿವರಾಜ್ಕುಮಾರ್ ಮತ್ತು ಉಪೇಂದ್ರ ಅವರು ಈ ಚಿತ್ರದಲ್ಲಿ ಜೊತೆಯಾಗಿ ನಟಿಸಲಿರುವುದರಿಂದ ಅವರಿಬ್ಬರ ಪಾತ್ರಗಳು ಹೇಗಿರಲಿವೆ ಎಂಬ ಕೌತುಕ ನಿರ್ಮಾಣ ಆಗಿದೆ. ಈ ಹಿಂದೆ ‘ಓಂ’ ಚಿತ್ರದಲ್ಲಿ ಉಪೇಂದ್ರ ಮತ್ತು ಶಿವಣ್ಣ ಒಟ್ಟಿಗೆ ಕೆಲಸ ಮಾಡಿದ್ದರು. ಬಳಿಕ ‘ಪ್ರೀತ್ಸೆ’, ‘ಲವ ಕುಶ’, ‘ಕಬ್ಜ’ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ಈ ಮತ್ತೆ ಅವರಿಬ್ಬರು ‘45’ ಚಿತ್ರಕ್ಕಾಗಿ ಒಂದಾಗಿರುದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ