AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಬ್ಜ’ ಚಿತ್ರದ ಅದ್ದೂರಿ ಪ್ರೀ-ರಿಲೀಸ್ ಇವೆಂಟ್​ಗೆ ಶಿವರಾಜ್​ಕುಮಾರ್ ಗೈರು; ಕಾರಣ ಏನು?

ಶಿವಣ್ಣ ‘ಕಬ್ಜ’ ಪ್ರೀ-ರಿಲೀಸ್​ ಇವೆಂಟ್​ಗೆ ಏಕೆ ಬಂದಿಲ್ಲ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ವೇದಿಕೆ ಏರುತ್ತಿದ್ದಂತೆ ಈ ಬಗ್ಗೆ ಆರ್.ಚಂದ್ರು ಮಾತನಾಡಿದರು.

‘ಕಬ್ಜ’ ಚಿತ್ರದ ಅದ್ದೂರಿ ಪ್ರೀ-ರಿಲೀಸ್ ಇವೆಂಟ್​ಗೆ ಶಿವರಾಜ್​ಕುಮಾರ್ ಗೈರು; ಕಾರಣ ಏನು?
‘ಕಬ್ಜ’ ಪೋಸ್ಟರ್
ರಾಜೇಶ್ ದುಗ್ಗುಮನೆ
|

Updated on:Mar 15, 2023 | 8:22 AM

Share

ಸಿನಿಮಾ ಸ್ಟಾರ್ಸ್​​ಗಳು ತಾವು ನಟಿಸಿದ ಸಿನಿಮಾದ ಇವೆಂಟ್​ನಲ್ಲಿ ಕಾಣಿಸಿಕೊಂಡಿಲ್ಲ ಎಂದಾಕ್ಷಣ ಒಂದಷ್ಟು ವದಂತಿಗಳು ಹುಟ್ಟಿಕೊಳ್ಳುತ್ತವೆ. ಚಿತ್ರತಂಡದ ಜೊತೆಗೆ ಏನೋ ವೈಮನಸ್ಸು ಮೂಡಿದೆ ಎಂಬ ಸುದ್ದಿ ಹಬ್ಬಿಸುತ್ತಾರೆ. ಮಂಗಳವಾರ (ಮಾರ್ಚ್​ 14) ನಡೆದ ‘ಕಬ್ಜ’ (Kabzaa Movie) ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಉಪೇಂದ್ರ, ಸುದೀಪ್, ಶ್ರೀಯಾ ಶರಣ್, ತಾನ್ಯಾ ಹೋಪ್, ನೆನಪಿರಲಿ ಪ್ರೇಮ್, ಡಾಲಿ ಧನಂಜಯ್ ಮೊದಲಾದವರು ಆಗಮಿಸಿದ್ದರು. ಚಿತ್ರದಲ್ಲಿ ನಟಿಸಿದ ಶಿವರಾಜ್​ಕುಮಾರ್ (Shivarajkumar) ಅವರೇ ಇವೆಂಟ್​ಗೆ ಗೈರಾಗಿದ್ದರು. ಹೀಗೇಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ವದಂತಿಗಳು ಹುಟ್ಟಿಕೊಳ್ಳುವ ಮೊದಲೇ ‘ಕಬ್ಜ’ ಚಿತ್ರದ ನಿರ್ದೇಶಕ ಕಮ್ ನಿರ್ಮಾಪಕ ಆರ್. ಚಂದ್ರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

‘ಕಬ್ಜ’ ಮಲ್ಟಿಸ್ಟಾರರ್ ಸಿನಿಮಾ. ಉಪೇಂದ್ರ, ಶಿವಣ್ಣ, ಸುದೀಪ್ ಚಿತ್ರದಲ್ಲಿ ನಟಿಸಿದ್ದಾರೆ. ಇವರ ಪಾತ್ರಗಳ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲ ಮೂಡಿದೆ. ಚಿತ್ರದ ಟ್ರೇಲರ್ ರಿಲೀಸ್ ಆಗಿ ಅಬ್ಬರಿಸಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಅದ್ದೂರಿಯಾಗಿ ಸಿನಿಮಾ ತೆರೆಕಾಣಿಸಲು ಪ್ಲ್ಯಾನ್ ನಡೆದಿದೆ. ಅದಕ್ಕೆ ತಕ್ಕಂತೆ ಪ್ರಚಾರ ನಡೆಯುತ್ತಿದೆ. ಮಂಗಳವಾರ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಅದ್ದೂರಿ ಪ್ರೀ-ರಿಲೀಸ್ ಇವೆಂಟ್ ನಡೆಯಿತು.

ಶಿವಣ್ಣ ಏಕೆ ಬಂದಿಲ್ಲ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ವೇದಿಕೆ ಏರುತ್ತಿದ್ದಂತೆ ಈ ಬಗ್ಗೆ ಆರ್.ಚಂದ್ರು ಮಾತನಾಡಿದರು. ‘ಕಬ್ಜ ಸಿನಿಮಾ ಆಗೋಕೆ ಈ ಮೂವರು (ಉಪೇಂದ್ರ, ಸುದೀಪ್​, ಶಿವರಾಜ್​ಕುಮಾರ್) ಕಾರಣ. ಇಬ್ಬರು ಲೆಜೆಂಡ್​​ಗಳು ಇಲ್ಲಿದ್ದಾರೆ. ಮತ್ತೋರ್ವ ಲೆಜೆಂಡ್ ಶಿವಣ್ಣ ಬಂದಿಲ್ಲ. ಅವರು ನನಗೆ, ಮತ್ತು ಕರ್ನಾಟಕಕ್ಕೆ ಅಣ್ಣ. ಅವರು ಇಂದು ಬರಬೇಕಿತ್ತು. ಆದರೆ, ಕೇರಳದಲ್ಲಿ ಶೂಟಿಂಗ್​ನಲ್ಲಿ ಇರೋದ್ರಿಂದ ಅವರು ಬರೋಕೆ ಆಗುತ್ತಿಲ್ಲ’ ಎಂದರು ಚಂದ್ರು.

ಇದನ್ನೂ ಓದಿ
Image
‘ನನ್ನ ಸಿನಿಮಾದಲ್ಲೇ ನಾನು ಡ್ಯಾನ್ಸ್ ಮಾಡಲ್ಲ’; ಆ್ಯಂಕರ್ ಬೇಡಿಕೆಗೆ ಸುದೀಪ್ ಉತ್ತರ
Image
‘ನೀವು ಬಿಡಿ ಐದು ವರ್ಷಕ್ಕೊಂದು ಸಿನಿಮಾ ಮಾಡ್ತೀರಾ’ ಎಂದ ಉಪ್ಪಿಗೆ ಸುದೀಪ್ ಕೊಟ್ರು ಉತ್ತರ
Image
Upendra: ‘ಕಬ್ಜ 2’ ಸಿನಿಮಾದಲ್ಲಿ ಯಾರೆಲ್ಲ ನಟಿಸಬೇಕು? ಆರ್​. ಚಂದ್ರು ಎದುರು ನಟರ ಲಿಸ್ಟ್​ ನೀಡಿದ ಉಪೇಂದ್ರ

ಇದನ್ನೂ ಓದಿ: ‘ನನ್ನ ಸಿನಿಮಾದಲ್ಲೇ ನಾನು ಡ್ಯಾನ್ಸ್ ಮಾಡಲ್ಲ’; ಆ್ಯಂಕರ್ ಬೇಡಿಕೆಗೆ ಸುದೀಪ್ ಉತ್ತರ

ಶಿವರಾಜ್​ಕುಮಾರ್ ಕೈಯಲ್ಲಿ 8-10 ಸಿನಿಮಾಗಳಿವೆ. ‘ನೀ ಸಿಗೊವರೆಗೂ’, ‘ಘೋಸ್ಟ್​’, ‘45’ ಮೊದಲಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನ ‘ಜೈಲರ್’ ಚಿತ್ರದಲ್ಲಿ ರಜನಿಕಾಂತ್ ಜೊತೆ ಶಿವಣ್ಣ ಬಣ್ಣ ಹಚ್ಚಿದ್ದಾರೆ. ‘ಕ್ಯಾಪ್ಟನ್ ಮಿಲ್ಲರ್’ ಹೆಸರಿನ ತಮಿಳಿನ ಚಿತ್ರವನ್ನೂ ಅವರು ಒಪ್ಪಿಕೊಂಡಿದ್ದಾರೆ. ಈ ಎಲ್ಲಾ ಚಿತ್ರಗಳ ಶೂಟಿಂಗ್​ಗೆ ಶಿವಣ್ಣ ಡೇಟ್ಸ್ ನೀಡಿದ್ದಾರೆ. ಅವರು ಶೂಟಿಂಗ್ ತಪ್ಪಿಸಿದರೆ ಇಡೀ ತಂಡಕ್ಕೆ ತೊಂದರೆ ಆಗುತ್ತದೆ. ಈ ಕಾರಣಕ್ಕೆ ಅವರು ಶೂಟಿಂಗ್​ನಲ್ಲಿ ಭಾಗಿ ಆಗಲೇಬೇಕಿತ್ತು. ಹೀಗಾಗಿ, ‘ಕಬ್ಜ’ ಇವೆಂಟ್​ಗೆ ಬಂದಿಲ್ಲ.

ಇದನ್ನೂ ಓದಿ: ‘ನೀವು ಬಿಡಿ ಐದು ವರ್ಷಕ್ಕೊಂದು ಸಿನಿಮಾ ಮಾಡ್ತೀರಾ’ ಎಂದ ಉಪ್ಪಿಗೆ ಸುದೀಪ್ ಕೊಟ್ರು ಉತ್ತರ

‘ಕಬ್ಜ’ ಸಿನಿಮಾ ಮಾರ್ಚ್​ 17ರಂದು ರಿಲೀಸ್ ಆಗುತ್ತಿದೆ. ಈಗಾಗಲೇ ಚಿತ್ರದ ಆನ್​ಲೈಟ್ ಟಿಕೆಟ್ ಬುಕಿಂಗ್ ಆರಂಭಗೊಂಡಿದ್ದು, ವೇಗವಾಗಿ ಟಿಕೆಟ್​ಗಳು ಮಾರಾಟ ಆಗುತ್ತಿವೆ. ಅದ್ದೂರಿ ಮೇಕಿಂಗ್​ನಿಂದ ಸಿನಿಮಾದ ಟ್ರೇಲರ್ ಗಮನ ಸೆಳೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:18 am, Wed, 15 March 23