- Kannada News Photo gallery Kantara movie actress Sapthami Gowda and Sharan inaugurated M J Production
‘ಎಂ.ಜೆ. ಪ್ರೊಡಕ್ಷನ್’ ನಿರ್ಮಾಣ ಸಂಸ್ಥೆಗೆ ಶುಭ ಕೋರಿದ ಸಪ್ತಮಿ ಗೌಡ, ಶರಣ್; ಏನಿದರ ವಿಶೇಷತೆ?
ನಟಿ ಸಪ್ತಮಿ ಗೌಡ ಮತ್ತು ನಟ ಶರಣ್ ಅವರು ‘ಎಂ.ಜೆ. ಪ್ರೊಡಕ್ಷನ್’ಗೆ ಶುಭ ಕೋರಿದ್ದಾರೆ. ಚಿತ್ರೀಕರಣಕ್ಕೆ ಇದೊಂದು ಸೂಕ್ತ ಜಾಗ ಎಂದು ಸಪ್ತಮಿ ಗೌಡ ಅಭಿಪ್ರಾಯಪಟ್ಟಿದ್ದಾರೆ.
Updated on: Mar 14, 2023 | 9:12 PM

ಜಿಗಣಿ-ಆನೇಕಲ್ ರಸ್ತೆಯಲ್ಲಿರುವ ಎಂ.ಜೆ. ಅವ್ಯಾನಾ ರೆಸಾರ್ಟ್ನಲ್ಲಿ ಅನಿಲ್ ಕುಮಾರ್ ಅವರು ‘ಎಂ.ಜೆ. ಪ್ರೊಡಕ್ಷನ್’ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಟ ಶರಣ್, ‘ಕಾಂತಾರ’ ಬೆಡಗಿ ಸಪ್ತಮಿ ಗೌಡ ಮುಂತಾದವರು ಇದನ್ನು ಉದ್ಘಾಟಿಸಿದ್ದಾರೆ.

‘ಎಂ.ಜೆ. ಪ್ರೊಡಕ್ಷನ್’ ಉದ್ಘಾಟನೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ನಿರ್ದೇಶಕ ಹರಿ ಸಂತು, ಮುಖೇಶ್ ಕುಮಾರ್, ಸತೀಶ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಕೂಡ ಭಾಗಿ ಆಗಿದ್ದರು.

ಅನಿಲ್ ಕುಮಾರ್ ಅವರು ಮೂಲತಃ ಕೇರಳದವರು. ಮಲಯಾಳಂನಲ್ಲಿ ಕೆಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಈಗ ‘ಎಂ.ಜೆ. ಪ್ರೊಡಕ್ಷನ್’ ಮೂಲಕ ಕನ್ನಡದಲ್ಲೂ ಸದಭಿರುಚಿಯ ಚಿತ್ರಗಳನ್ನು ಸದ್ಯದಲ್ಲೇ ನಿರ್ಮಾಣ ಮಾಡುವುದಾಗಿ ಅವರು ತಿಳಿಸಿದ್ದಾರೆ.

‘ಎಂ.ಜೆ. ಪ್ರೊಡಕ್ಷನ್’ನಲ್ಲಿ ಒಂದು ಸಿನಿಮಾ ಶೂಟಿಂಗ್ಗೆ ಬೇಕಾದ ಎಲ್ಲ ಅನುಕೂಲಗಳು ಇವೆ. ಸಭಾಂಗಣ, ಜಲಪಾತ, ಕ್ರಿಕೆಟ್ ಮೈದಾನ ಮುಂತಾದ ಲೊಕೇಷನ್ಗಳಿವೆ. ಇದನ್ನು ಕನ್ನಡ ಚಿತ್ರರಂಗ ಉಪಯೋಗಿಸಿಕೊಳ್ಳಬೇಕು ಎಂದು ಅನಿಲ್ ಕುಮಾರ್ ಹೇಳಿದ್ದಾರೆ.

ನಟಿ ಸಪ್ತಮಿ ಗೌಡ ಮತ್ತು ನಟ ಶರಣ್ ಅವರು ‘ಎಂ.ಜೆ. ಪ್ರೊಡಕ್ಷನ್’ಗೆ ಶುಭ ಕೋರಿದ್ದಾರೆ. ಚಿತ್ರೀಕರಣಕ್ಕೆ ಇದೊಂದು ಸೂಕ್ತ ಜಾಗ ಎಂದು ಸಪ್ತಮಿ ಗೌಡ ಅಭಿಪ್ರಾಯಪಟ್ಟಿದ್ದಾರೆ.
























