ಬ್ಯಾಂಕ್ ಆಫ್ ಮಹಾರಾಷ್ಟ್ರ ತನ್ನಲ್ಲಿನ ಗೃಹ ಸಾಲದ ದರಗಳನ್ನು ಇನ್ನಷ್ಟು ಇಳಿಸಿದೆ. ಈ ಬ್ಯಾಂಕಿಗಿಂತಲೂ ಕಡಿಮೆ ಬಡ್ಡಿಗೆ ಗೃಹ ಸಾಲ ನೀಡುವ ಬ್ಯಾಂಕುಗಳುಂಟು. ಯಾವ್ಯಾವ ಬ್ಯಾಂಕಿನಲ್ಲಿ ಗೃಹ ಸಾಲಗಳ ದರ ಎಷ್ಟಿದೆ ಎನ್ನುವ ವಿವರ ಮುಂದಿನ ಸ್ಲೈಡ್ಗಳಲ್ಲಿ ಇದೆ.
ಜಿಐಸಿ ಹೌಸಿಂಗ್ ಫೈನಾನ್ಸ್: ಮಹಾರಾಷ್ಟ್ರ ಮೂಲದ ಈ ಬ್ಯಾಂಕಿನಲ್ಲಿ ಗೃಹ ಸಾಲಕ್ಕೆ ಬಡ್ಡಿ ದರ ಕೇವಲ ಶೇ. 8.10ರಷ್ಟು ಇದೆ. ಇದು ಈಗಿರುವ ಬ್ಯಾಂಕು, ಎನ್ಬಿಎಫ್ಸಿಗಳ ಪೈಕಿ ಅತ್ಯಂತ ಕಡಿಮೆ ಹೋಲ್ ಲೋನ್ ದರ ಹೊಂದಿದೆ. ಬೆಂಗಳೂರಿನಲ್ಲೂ ಈ ಬ್ಯಾಂಕಿನ ಶಾಖೆಗಳಿವೆ.
ರೆಪ್ಕೋ: ಬಡ್ಡಿ ದರ ಶೇ. 8.30. ಚೆನ್ನೈನಲ್ಲಿ ಮುಖ್ಯ ಕಚೇರಿ ಇರುವ ರೆಪ್ಕೋ ಹೋಮ್ ಫೈನಾನ್ಸ್ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದೆ. ಇದರ ಶಾಖೆಗಳು ಕರ್ನಾಟಕದ ಕೆಲವೆಡೆ ಇವೆ.
ಬ್ಯಾಂಕ್ ಆಫ್ ಮಹಾರಾಷ್ಟ್ರ: ಗೃಹ ಸಾಲಕ್ಕೆ ಬಡ್ಡಿ ದರ ಶೇ. 8.40 ಇದೆ. ಇದರ ಶಾಖೆಗಳು ದೇಶಾದ್ಯಂತ ಇವೆ. ಬೆಂಗಳೂರಿನಲ್ಲೂ ಹಲವು ಕಡೆ ಇದರ ಬ್ರ್ಯಾಂಚುಗಳಿವೆ. ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳ ಪೈಕಿ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಅತಿ ಕಡಿಮೆ ಗೃಹ ಸಾಲ ದರ ಇದೆ.
ಹೆಚ್ಡಿಎಫ್ಸಿ: ಇದು ಗೃಹ ಸಾಲಕ್ಕೆಂದೇ ಇರುವ ಹಣಕಾಸು ಸಂಸ್ಥೆ. ಇದರಲ್ಲಿ ಗೃಹ ಸಾಲಕ್ಕೆ ಬಡ್ಡಿ ದರ ಶೇ. 8.45 ಇದೆ. ಹೆಚ್ಡಿಎಫ್ಸಿ ಬ್ಯಾಂಕ್ನ ಅಂಗ ಸಂಸ್ಥೆಯೂ ಆಗಿರುವ ಎಚ್ಡಿಎಫ್ಸಿ ಭಾರತದ ಎಲ್ಲೆಡೆ ಶಾಖೆಗಳನ್ನು ಹೊಂದಿದೆ.
ಪಿಎನ್ಬಿ ಹೌಸಿಂಗ್ ಫೈನಾನ್ಸ್: ಗೃಹ ಸಾಲಕ್ಕೆ ಬಡ್ಡಿ ದರ ಶೇ. 8.5 ಇದೆ. ಇದೂ ಕೂಡ ಬೆಂಗಳೂರು ಸೇರಿದಂತೆ ಹಲವೆಡೆ ಶಾಖೆಗಳನ್ನು ಹೊಂದಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: ಗೃಹ ಸಾಲಕ್ಕೆ ಬಡ್ಡಿ ದರ ಶೇ. 8.55. ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಆಗಿರುವ ಸಿಬಿಐ ಕರ್ನಾಟಕದ ಹಲವು ಕಡೆ ಬ್ರ್ಯಾಂಚ್ ಹೊಂದಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಐಒಬಿ, ಬಜಾಜ್: ಗೃಹ ಸಾಲಕ್ಕೆ ಬಡ್ಡಿ ದರ ಶೇ. 8.6 ಇದೆ. ಈ ಮೂರು ಸಂಸ್ಥೆಗಳಲ್ಲಿ ಬಡ್ಡಿ ದರ ಏಕ ರೀತಿಯಲ್ಲಿವೆ. ಯುಬಿಐ ಮತ್ತು ಐಒಬಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಾಗಿವೆ. ಎಲ್ಲವೂ ಕೂಡ ಕರ್ನಾಟಕದಲ್ಲಿ ಹಲವು ಶಾಖೆಗಳನ್ನು ಹೊಂದಿವೆ.
ಕೋಟಕ್ ಮಹೀಂದ್ರ ಬ್ಯಾಂಕ್: ಗೃಹ ಸಾಲಕ್ಕೆ ಬಡ್ಡಿ ದರ ಶೇ. 8.65 ಇದೆ. ಇದೂ ಕೂಡ ದೇಶಾದ್ಯಂತ ಶಾಖೆಗಳನ್ನು ಹೊಂದಿದೆ. ಎಲ್ಐಸಿ ಹೌಸಿಂಗ್ ಫೈನಾನ್ಸ್ ಸಂಸ್ಥೆ ಕೂಡ ಇದೇ ಬಡ್ಡಿ ದರ ಆಫರ್ ಮಾಡುತ್ತಿದೆ.
ಆ್ಯಕ್ಸಿಸ್ ಬ್ಯಾಂಕ್, ಆದಿತ್ಯ ಬಿರ್ಲಾ: ಬಡ್ಡಿ ದರ ಶೇ. 8.75 ಇದೆ. ಆದಿತ್ಯ ಬಿರ್ಲಾ ಹೌಸಿಂಗ್ ಫೈನಾನ್ಸ್ ಸಂಸ್ಥೆ ಮತ್ತು ಎಕ್ಸಿಸ್ ಬ್ಯಾಂಕು ಇವು ಕೂಡ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲಗಳನ್ನು ನೀಡುತ್ತವೆ.
Published On - 10:35 am, Tue, 14 March 23