Upendra: ‘ಕಬ್ಜ 2’ ಸಿನಿಮಾದಲ್ಲಿ ಯಾರೆಲ್ಲ ನಟಿಸಬೇಕು? ಆರ್. ಚಂದ್ರು ಎದುರು ನಟರ ಲಿಸ್ಟ್ ನೀಡಿದ ಉಪೇಂದ್ರ
R. Chandru | Kabzaa 2: ‘ಕಬ್ಜ’ ಸಿನಿಮಾದ ಬಿಡುಗಡೆ ಹೊಸ್ತಿಲಿನಲ್ಲಿ ಅದರ ಸೀಕ್ವೆಲ್ ಬಗ್ಗೆ ಉಪೇಂದ್ರ ಮಾತನಾಡಿದ್ದಾರೆ. ‘ಕಬ್ಜ 2’ ಪಾತ್ರವರ್ಗ ಹೇಗಿರಬೇಕು ಎಂಬುದನ್ನೂ ಅವರು ಸೂಚಿಸಿದ್ದಾರೆ.
ನಿರ್ದೇಶಕ ಆರ್. ಚಂದ್ರು (R Chandru) ಅವರ ಶ್ರಮದ ಫಲವಾಗಿ ‘ಕಬ್ಜ’ ಸಿನಿಮಾ ಮೂಡಿಬಂದಿದೆ. ಮಾರ್ಚ್ 17ರಂದು ಈ ಚಿತ್ರ ರಿಲೀಸ್ ಆಗಲಿದೆ. ಮಂಗಳವಾರ (ಮಾರ್ಚ್ 14) ನಡೆದ ಪ್ರೀ-ರಿಲೀಸ್ ಇವೆಂಟ್ನಲ್ಲಿ ‘ಕಬ್ಜ 2’ (Kabzaa 2) ಬಗ್ಗೆ ಪ್ರಸ್ತಾಪ ಆಯಿತು. ಹಾಗಾದರೆ ಆ ಸಿನಿಮಾದಲ್ಲಿ ಯಾರೆಲ್ಲ ನಟಿಸಬೇಕು? ಈ ಕುರಿತು ಉಪೇಂದ್ರ (Upendra) ಮಾತನಾಡಿದರು. ‘ಕಬ್ಜ ಪಾರ್ಟ್ 2 ಚಿತ್ರದಲ್ಲಿ ನನ್ನನ್ನು ಅತಿಥಿ ಪಾತ್ರವಾಗಿ ಇಟ್ಟುಕೊಳ್ಳಿ. ಶಿವಣ್ಣ, ಸುದೀಪ್, ಡಾಲಿ ಧನಂಜಯ್, ಪ್ರೇಮ್ ಇವರೆಲ್ಲ ಮುಖ್ಯಪಾತ್ರದಲ್ಲಿ ಇರಲಿ’ ಎಂದರು ಉಪೇಂದ್ರ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos

ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ

ಹನಿಮೂನ್ ಟ್ರಿಪ್ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್ ಕೊನೆ ರೀಲ್ಸ್

ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ

ಪಹಲ್ಗಾಮ್ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
