Kabzaa: ಎಷ್ಟು ದೀರ್ಘವಾಗಿದೆ ‘ಕಬ್ಜ’ ಸಿನಿಮಾ? ಬಹುನಿರೀಕ್ಷಿತ ಚಿತ್ರದ ಅವಧಿ ಬಗ್ಗೆ ಸಿಕ್ತು ಮಾಹಿತಿ
Upendra | R. Chandru: ಬಹಳ ಕಾಳಜಿ ವಹಿಸಿ ನಿರ್ದೇಶಕ ಆರ್. ಚಂದ್ರು ಅವರು ‘ಕಬ್ಜ’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಸಿನಿಮಾದ ಅವಧಿ ಬಗ್ಗೆಯೂ ಅವರು ತುಂಬ ಎಚ್ಚರಿಕೆ ವಹಿಸಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ (Upendra), ಕಿಚ್ಚ ಸುದೀಪ್, ಶಿವರಾಜ್ಕುಮಾರ್ ಮುಂತಾದ ಸ್ಟಾರ್ ಕಲಾವಿದರು ನಟಿರುವ ‘ಕಬ್ಜ’ ಸಿನಿಮಾದ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿದೆ. ಮಾರ್ಚ್ 17ರಂದು ವಿಶ್ವಾದ್ಯಂತ 4 ಸಾವಿರ ಪರದೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲೂ ಈ ಚಿತ್ರ ತೆರೆಕಾಣಲಿದೆ. ಆರ್. ಚಂದ್ರು (R. Chandru) ನಿರ್ದೇಶನದ ‘ಕಬ್ಜ’ ಸಿನಿಮಾ ಹಲವು ಕಾರಣಗಳಿಂದಾಗಿ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದ ಅವಧಿ ಎಷ್ಟು ಎಂಬ ಮಾಹಿತಿ ಈಗ ಸಿಕ್ಕಿದೆ. ಅಂದರೆ, ಈ ಚಿತ್ರ ಎಷ್ಟು ದೀರ್ಘವಾಗಿದೆ ಎಂಬುದು ಗೊತ್ತಾಗಿದೆ. ‘ಕಬ್ಜ’ ಸಿನಿಮಾದ (Kabzaa Movie) ರನ್ ಟೈಮ್ ಇರುವುದು 2 ಗಂಟೆ 16 ನಿಮಿಷ. ಇದು ಒಂದು ರೀತಿಯಲ್ಲಿ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.
ಯಾವುದೇ ಸಿನಿಮಾದ ಅವಧಿ ಹೆಚ್ಚು ದೀರ್ಘವಾಗಿದ್ದರೆ ಪ್ರೇಕ್ಷಕರಿಗೆ ಬೋರಾಗುವ ಸಾಧ್ಯತೆ ಇರುತ್ತದೆ. ಆ ವಿಚಾರದಲ್ಲಿ ನಿರ್ದೇಶಕರು ಸಾಕಷ್ಟು ಎಚ್ಚರಿಕೆ ವಹಿಸುತ್ತಾರೆ. 2 ಗಂಟೆ 15 ನಿಮಿಷದಿಂದ 2 ಗಂಟೆ 30 ನಿಮಿಷಗಳ ಒಳಗೆ ಸಿನಿಮಾದ ಅವಧಿ ಇದ್ದರೆ ಸೂಕ್ತ ಎಂಬುದು ಹಲವರ ಅಭಿಪ್ರಾಯ. ಆರ್. ಚಂದ್ರು ಅವರು ‘ಕಬ್ಜ’ ಸಿನಿಮಾದ ಕಥೆ ಹೇಳಲು 2 ಗಂಟೆ 16 ನಿಮಿಷ ತೆಗೆದುಕೊಳ್ಳಲಿದ್ದಾರೆ.
ಇದನ್ನೂ ಓದಿ: Kabzaa Movie: ‘ಕಬ್ಜ’ ಸಿನಿಮಾದ ದೊಡ್ಡ ಪ್ಲಸ್ ಪಾಯಿಂಟ್ ಏನು? ವಿವರಣೆ ನೀಡಿದ ‘ರಿಯಲ್ ಸ್ಟಾರ್’ ಉಪೇಂದ್ರ
‘ಕಬ್ಜ’ ಚಿತ್ರಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಹಲವು ಕಡೆಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಮಾರ್ಚ್ 17ರಂದು ಎಲ್ಲ ಕಡೆಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುವುದು ಖಚಿತವಾಗಿದೆ. ಬೇರೆ ರಾಜ್ಯಗಳಲ್ಲೂ ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾದಿದ್ದಾರೆ. ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇದನ್ನೂ ಓದಿ: Shriya Saran: ‘ಉಪೇಂದ್ರ ದೊಡ್ಡ ಸ್ಟಾರ್ ಅಂತ ನಾವೇ ನೆನಪಿಸಬೇಕಿತ್ತು’: ‘ಕಬ್ಜ’ ಶೂಟಿಂಗ್ ಅನುಭವ ಹಂಚಿಕೊಂಡ ಶ್ರೀಯಾ
ಒಟ್ಟು 60 ಕಲಾವಿದರು ‘ಕಬ್ಜ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಉಪೇಂದ್ರ ಅವರಿಗೆ ಜೋಡಿಯಾಗಿ ಶ್ರೀಯಾ ಶರಣ್ ನಟಿಸಿದ್ದಾರೆ. ಸ್ಪೆಷಲ್ ಪಾತ್ರದಲ್ಲಿ ಶಿವರಾಜ್ಕುಮಾರ್ ಮತ್ತು ಕಿಚ್ಚ ಸುದೀಪ್ ಕಾಣಿಸಿಕೊಳ್ಳಲಿರುವುದರಿಂದ ನಿರೀಕ್ಷೆ ಹೆಚ್ಚಾಗಿದೆ. ಸುನೀಲ್ ಪುರಾಣಿಕ್, ಅವಿನಾಶ್, ಮುರಳಿ ಶರ್ಮಾ ಮುಂತಾದ ಕಲಾವಿದರು ಈ ಚಿತ್ರದಲ್ಲಿದ್ದಾರೆ.
ನುರಿತ ತಂತ್ರಜ್ಞರು ‘ಕಬ್ಜ’ ಸಿನಿಮಾದ ತೆರೆ ಹಿಂದೆ ಕೆಲಸ ಮಾಡಿದ್ದಾರೆ. ಎ.ಜೆ. ಶೆಟ್ಟಿ ಅವರ ಛಾಯಾಗ್ರಹಣಕ್ಕೆ ಎಲ್ಲರಿಂದ ಈಗಾಗಲೇ ಮೆಚ್ಚುಗೆ ಕೇಳಿಬರುತ್ತಿದೆ. ರವಿ ಬಸ್ರೂರು ಅವರ ಸಂಗೀತದ ಬಗ್ಗೆ ಹೊಸದಾಗಿ ಹೇಳುವುದೇ ಬೇಡ. ‘ಕೆಜಿಎಫ್: ಚಾಪ್ಟರ್ 2’ ಖ್ಯಾತಿಯ ಶಿವಕುಮಾರ್ ಅವರು ‘ಕಬ್ಜ’ ಚಿತ್ರಕ್ಕೆ ಕಲಾ ನಿರ್ದೇಶನ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.