ಮಾರ್ಚ್ 17ರಂದು ‘ಕಬ್ಜ’ ಸಿನಿಮಾ (Kabzaa Movie) ವಿಶ್ವಾದ್ಯಂತ ರಿಲೀಸ್ ಆಗಲಿದೆ. ನಿರ್ದೇಶಕ ಆರ್. ಚಂದ್ರು (R. Chandru) ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಕಬ್ಜ’ ತೆರೆಕಾಣುತ್ತಿದೆ. ‘ಪ್ರತಿಯೊಬ್ಬರು ಬೆರಗಾಗಿರುವುದು ನಮ್ಮ ಸಿನಿಮಾದ ಮೇಕಿಂಗ್ನಿಂದ. ಆ ವಿಚಾರದಲ್ಲಿ ಇದು ಸಂಪೂರ್ಣ ಡಿಫರೆಂಟ್ ಸಿನಿಮಾ. ಅದೇ ಈ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್’ ಎಂದು ಉಪೇಂದ್ರ (Upendra) ಹೇಳಿದ್ದಾರೆ. ‘ಈ ಸಿನಿಮಾದ ಫೋಟೋಶೂಟ್ಗೆ ಹೋದ ಬಳಿಕ ಚಂದ್ರು ಅವರ ಆಲೋಚನೆ ಬಗ್ಗೆ ನನಗೆ ಅರಿವಾಯಿತು. ಹಾಗಾಗಿ ಅವರ ಕೆಲಸದಲ್ಲಿ ನಾನು ಮಧ್ಯೆ ಮಾತನಾಡಲು ಹೋಗಿಲ್ಲ’ ಎಂದಿದ್ದಾರೆ ಉಪೇಂದ್ರ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.