Kabzaa: ನಾರ್ತ್ ಅಮೆರಿಕದಲ್ಲಿ ಕನ್ನಡದ ‘ಕಬ್ಜ’ ಚಿತ್ರಕ್ಕೆ ಭಾರಿ ಡಿಮ್ಯಾಂಡ್; ರಿಲೀಸ್ಗೆ ಭರ್ಜರಿ ತಯಾರಿ
R Chandru | Upendra: ‘ಕಬ್ಜ’ ಸಿನಿಮಾಗೆ ಈಗ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಆರ್. ಚಂದ್ರು ನಿರ್ದೇಶನ ಮಾಡಿರುವ ಈ ಚಿತ್ರದ ಪ್ರೀ-ರಿಲೀಸ್ ಬಿಸ್ನೆಸ್ ಚೆನ್ನಾಗಿ ಆಗುತ್ತಿದೆ.
ಕನ್ನಡದ ಸಿನಿಮಾಗಳಿಗೆ (Sandalwood Movies) ಜಾಗತಿಕ ಮಟ್ಟದಲ್ಲಿ ಬೇಡಿಕೆ ಬಂದಿದೆ. ‘ಕೆಜಿಎಫ್: ಚಾಪ್ಟರ್ 2’, ‘ಕಾಂತಾರ’ ಸಿನಿಮಾಗಳು ಅಬ್ಬರಿಸಿದ ಬಳಿಕ ಕ್ರೇಜ್ ಇನ್ನೂ ಜೋರಾಯಿತು. ಚಂದನವನದಿಂದ ಮುಂಬರುವ ಸಿನಿಮಾಗಳ ಬಗ್ಗೆ ವಿದೇಶದಲ್ಲಿನ ಪ್ರೇಕ್ಷಕರಿಗೂ ನಿರೀಕ್ಷೆ ಇದೆ. ಆ ಪೈಕಿ ಆರ್. ಚಂದ್ರು (R Chandru) ನಿರ್ದೇಶನದ ‘ಕಬ್ಜ’ ಚಿತ್ರವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ವಿದೇಶದ ಪ್ರೇಕ್ಷಕರು ಸಜ್ಜಾಗಿದ್ದಾರೆ. ನಾರ್ತ್ ಅಮೆರಿಕದಲ್ಲಿ ಈ ಸಿನಿಮಾ ಭಾರಿ ಓಪನಿಂಗ್ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಅಲ್ಲಿನ ದೊಡ್ಡ ಸಂಸ್ಥೆಗಳು ‘ಕಬ್ಜ’ (Kabzaa Movie) ವಿತರಣಾ ಹಕ್ಕುಗಳನ್ನು ಪಡೆಯುಲು ಮುಂದೆ ಬಂದಿವೆ. ‘ಪ್ರೈಂ ಶೋ ಎಂಟರ್ಟೇನ್ಮೆಂಟ್’ ಸಂಸ್ಥೆಯು ಈ ಚಿತ್ರದ ಹಕ್ಕುಗಳನ್ನು ಪಡೆದುಕೊಂಡಿದ್ದು, 450ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಬಿಡುಗಡೆ ಮಾಡಲಿದೆ.
ಉಪೇಂದ್ರ ಮತ್ತು ಸುದೀಪ್ ಅವರು ‘ಕಬ್ಜ’ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ನಾಯಕಿಯಾಗಿ ಶ್ರೀಯಾ ಶರಣ್ ನಟಿಸಿದ್ದಾರೆ. ಅದ್ದೂರಿ ಮೇಕಿಂಗ್ ಕಾರಣದಿಂದ ಈ ಚಿತ್ರ ಗಮನ ಸೆಳೆಯುತ್ತಿದೆ. ಟೀಸರ್ ಬಿಡುಗಡೆ ಆದಾಗಿನಿಂದಲೂ ಈ ಸಿನಿಮಾ ಇನ್ನಿಲ್ಲದಷ್ಟು ಹೈಪ್ ಸೃಷ್ಟಿ ಮಾಡಿದೆ. ಇತ್ತೀಚೆಗೆ ಬಂದ ಟೈಟಲ್ ಟ್ರ್ಯಾಕ್ ಕೂಡ ದೂಳೆಬ್ಬಿಸಿದೆ. ಅದರಿಂದ ‘ಕಬ್ಜ’ ಕ್ರೇಜ್ ಇನ್ನೂ ಜೋರಾಗಿದೆ.
ಇದನ್ನೂ ಓದಿ: Kabzaa Tittle Song: ರಿಲೀಸ್ ಆಯ್ತು ‘ಕಬ್ಜ’ ಟೈಟಲ್ ಸಾಂಗ್; ರವಿ ಬಸ್ರೂರ್ ಕಮಾಲ್
‘ಕಬ್ಜ’ ಕೇವಲ ಕನ್ನಡದ ಸಿನಿಮಾ ಅಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ. ತೆಲುಗು, ತಮಿಳು, ಮಲಯಾಳ, ಹಿಂದಿ ಮುಂತಾದ ಭಾಷೆಗಳಿಗೆ ಡಬ್ ಆಗಿ ತೆರೆಕಾಣುತ್ತಿದೆ. ಅದ್ದೂರಿ ಬಜೆಟ್ನಲ್ಲಿ ಆರ್. ಚಂದ್ರು ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೀಗ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಪ್ರೀ-ರಿಲೀಸ್ ಬಿಸ್ನೆಸ್ ಚೆನ್ನಾಗಿ ಆಗುತ್ತಿದೆ.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ದಿನವೇ ಉಪೇಂದ್ರ-ಸುದೀಪ್ ನಟನೆಯ ‘ಕಬ್ಜ’ ಸಿನಿಮಾ ರಿಲೀಸ್
ಮಾರ್ಚ್ 17 ಎಂದರೆ ಕನ್ನಡ ಸಿನಿಪ್ರಿಯರ ಪಾಲಿಗೆ ಸಖತ್ ವಿಶೇಷ. ಅಂದು ‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಜನ್ಮದಿನ. ಆ ಶುಭ ದಿನದಂದು ‘ಕಬ್ಜ’ ಸಿನಿಮಾ ಕೂಡ ಬಿಡುಗಡೆ ಆಗಲಿರುವುದು ವಿಶೇಷ. ಈ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಪುನೀತ್ ರಾಜ್ಕುಮಾರ್ ಅವರು ಬೆನ್ನು ತಟ್ಟಿದ್ದರು. ಆ ಕಾರಣದಿಂದ ಅವರಿಗೆ ನಮನ ಸಲ್ಲಿಸುವ ರೀತಿಯಲ್ಲಿ ಅವರ ಜನ್ಮದಿನದ ಪ್ರಯುಕ್ತ ‘ಕಬ್ಜ’ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ‘ಒಟಿಟಿಯವರು ಕಣ್ಮುಚ್ಚಿಕೊಂಡು ಕಬ್ಜ ಹಕ್ಕು ಖರೀದಿಸಿಲ್ಲ; ಟೀಕಾಕಾರರಿಗೆ ಚಂದ್ರು ಉತ್ತರ
‘ಕಬ್ಜ’ ಚಿತ್ರದ ಹಿಂದಿ ವರ್ಷನ್ಗೆ ಸಾಕಷ್ಟು ಬೇಡಿಕೆ ಇದೆ. ಹಿಂದಿ ಮಾರುಕಟ್ಟೆಯಲ್ಲಿ ಈ ಚಿತ್ರವನ್ನು ವಿತರಣೆ ಮಾಡಲು ಖ್ಯಾತ ನಿರ್ಮಾಪಕ/ವಿತರಕ ಆನಂದ್ ಪಂಡಿತ್ ಸಜ್ಜಾಗಿದ್ದಾರೆ. ರೆಟ್ರೋ ಕಾಲದ ಭೂಗತ ಲೋಕದ ಕಥೆಯನ್ನು ಈ ಸಿನಿಮಾ ಹೊಂದಿರಲಿದೆ. ತೆರೆಹಿಂದೆ ಘಟಾನುಘಟಿ ತಂತ್ರಜ್ಞರು ಕೆಲಸ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:36 pm, Fri, 10 February 23