AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shriya Saran: ‘ಉಪೇಂದ್ರ ದೊಡ್ಡ ಸ್ಟಾರ್​ ಅಂತ ನಾವೇ ನೆನಪಿಸಬೇಕಿತ್ತು’: ‘ಕಬ್ಜ’ ಶೂಟಿಂಗ್​ ಅನುಭವ ಹಂಚಿಕೊಂಡ ಶ್ರೀಯಾ​

Shriya Saran: ‘ಉಪೇಂದ್ರ ದೊಡ್ಡ ಸ್ಟಾರ್​ ಅಂತ ನಾವೇ ನೆನಪಿಸಬೇಕಿತ್ತು’: ‘ಕಬ್ಜ’ ಶೂಟಿಂಗ್​ ಅನುಭವ ಹಂಚಿಕೊಂಡ ಶ್ರೀಯಾ​

ಮದನ್​ ಕುಮಾರ್​
|

Updated on:Mar 10, 2023 | 12:56 PM

Share

Kabzaa Movie | Upendra: ಶ್ರೀಯಾ ಶರಣ್​ ಮತ್ತು ಉಪೇಂದ್ರ ಅವರು ಜೋಡಿಯಾಗಿ ‘ಕಬ್ಜ’ ಚಿತ್ರದಲ್ಲಿ ನಟಿಸಿದ್ದಾರೆ. ಮಾರ್ಚ್​ 17ರಂದು ಈ ಸಿನಿಮಾ ರಿಲೀಸ್​ ಆಗುತ್ತಿದ್ದು, ಶೂಟಿಂಗ್​ ಅನುಭವದ ಬಗ್ಗೆ ಶ್ರೀಯಾ ಮಾತನಾಡಿದ್ದಾರೆ.

ಆ​ರ್​. ಚಂದ್ರು ನಿರ್ದೇಶನ ಮಾಡಿರುವ ‘ಕಬ್ಜ’ ಸಿನಿಮಾ (Kabzaa Movie) ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದಲ್ಲಿ ಉಪೇಂದ್ರ (Upendra) ಅವರಿಗೆ ಜೋಡಿಯಾಗಿ ಶ್ರೀಯಾ ಶರಣ್​ ನಟಿಸಿದ್ದಾರೆ. ಟಿವಿ9 ಕನ್ನಡ ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರು ಶೂಟಿಂಗ್​ ಅನುಭವಗಳನ್ನು ಹಂಚಿಕೊಂಡಿದ್ದಾರೆ. ‘ಉಪ್ಪಿ ಸರ್​ ತುಂಬ ಸಿಂಪಲ್​ ವ್ಯಕ್ತಿ. ಅವರು ಸೂಪರ್​ ಸ್ಟಾರ್​ ಅನ್ನೋದನ್ನು ನಾವೇ ಕೆಲವು ಬಾರಿ ನೆನಪಿಸಬೇಕಿತ್ತು. ಅಷ್ಟು ಸರಳವಾಗಿ ಅವರು ಎಲ್ಲರೊಂದಿಗೆ ಬೆರೆಯುತ್ತಾರೆ’ ಎಂದು ಶ್ರೀಯಾ ಶರಣ್ (Shriya Saran)​ ಹೇಳಿದ್ದಾರೆ. ‘ಕಬ್ಜ’ ಚಿತ್ರದಲ್ಲಿ ಶ್ರೀಯಾ ಧರಿಸಿದ ಕಾಸ್ಟ್ಯೂಮ್​ ಮತ್ತು ಆಭರಣಗಳು ಗಮನ ಸೆಳೆದಿವೆ. ಆ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Mar 10, 2023 12:56 PM

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More