AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀವು ಬಿಡಿ ಐದು ವರ್ಷಕ್ಕೊಂದು ಸಿನಿಮಾ ಮಾಡ್ತೀರಾ’ ಎಂದ ಉಪ್ಪಿಗೆ ಸುದೀಪ್ ಕೊಟ್ರು ಉತ್ತರ

‘ಕಬ್ಜ 2’ ಚಿತ್ರದ ಬಗ್ಗೆಯೂ ಪ್ರೀ-ರಿಲೀಸ್ ಇವೆಂಟ್​ನಲ್ಲಿ ಚರ್ಚೆ ಆಗಿದೆ. ಇದರಲ್ಲಿ ಸುದೀಪ್ ಮುಖ್ಯಭೂಮಿಕೆ ಮಾಡಬೇಕು ಎನ್ನುವ ಆಸೆಯನ್ನು ಉಪೇಂದ್ರ ವ್ಯಕ್ತಪಡಿಸಿದರು.

‘ನೀವು ಬಿಡಿ ಐದು ವರ್ಷಕ್ಕೊಂದು ಸಿನಿಮಾ ಮಾಡ್ತೀರಾ’ ಎಂದ ಉಪ್ಪಿಗೆ ಸುದೀಪ್ ಕೊಟ್ರು ಉತ್ತರ
ಉಪೇಂದ್ರ-ಸುದೀಪ್
ರಾಜೇಶ್ ದುಗ್ಗುಮನೆ
|

Updated on: Mar 15, 2023 | 7:17 AM

Share

ಕಿಚ್ಚ ಸುದೀಪ್ (Sudeep) ಅವರು ಇತ್ತೀಚೆಗೆ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ‘ವಿಕ್ರಾಂತ್ ರೋಣ’ ಸಿನಿಮಾ ಕಳೆದ ವರ್ಷ ರಿಲೀಸ್ ಆಯಿತು. ಅವರು ಉಪೇಂದ್ರ ಜೊತೆ ನಟಿಸಿರುವ ‘ಕಬ್ಜ’ ಸಿನಿಮಾ (Kabzaa) ಈ ವಾರ (ಮಾರ್ಚ್​ 17) ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸುದೀಪ್ ಅವರು ಪೊಲೀಸ್ ಆಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ ಮಂಗಳವಾರ (ಮಾರ್ಚ್​ 14) ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿದೆ. ಕಿಚ್ಚ ಸುದೀಪ್, ಉಪೇಂದ್ರ, ಡಾಲಿ ಧನಂಜಯ್, ನೆನಪಿರಲಿ ಪ್ರೇಮ್​, ಕೆಪಿ ಶ್ರೀಕಾಂತ್ ಮೊದಲಾದವರು ವೇದಿಕೆ ಮೇಲಿದ್ದರು. ಈ ವೇಳೆ ಉಪ್ಪಿ ಹೇಳಿದ ಮಾತಿಗೆ ಸುದೀಪ್ ಉತ್ತರ ಕೊಟ್ಟಿದ್ದಾರೆ.

‘ಕಬ್ಜ’ ಸಿನಿಮಾ ಸೆಟ್ಟೇರಿ ಬಹಳ ಸಮಯ ಕಳೆದಿದೆ. ಸಿನಿಮಾದಲ್ಲಿ ಅದ್ದೂರಿ ಮೇಕಿಂಗ್ ಇರುವುದರಿಂದ ನಿರ್ದೇಶಕ ಆರ್​. ಚಂದ್ರುಗೆ ಹೆಚ್ಚು ಸಮಯ ಬೇಕಾಗಿದೆ. ‘ಕಬ್ಜ 2’ ಚಿತ್ರದ ಬಗ್ಗೆಯೂ ಪ್ರೀ-ರಿಲೀಸ್ ಇವೆಂಟ್​ನಲ್ಲಿ ಚರ್ಚೆ ಆಗಿದೆ. ಇದರಲ್ಲಿ ಸುದೀಪ್ ಮುಖ್ಯಭೂಮಿಕೆ ಮಾಡಬೇಕು ಎನ್ನುವ ಆಸೆಯನ್ನು ಉಪೇಂದ್ರ ವ್ಯಕ್ತಪಡಿಸಿದರು.

‘ಕಬ್ಜ ಚಿತ್ರದ ಎರಡನೇ ಪಾರ್ಟ್​​ನಲ್ಲಿ ನನಗೆ ಅತಿಥಿ ಪಾತ್ರ ಕೊಟ್ಟು, ಸುದೀಪ್​ಗೆ ಮುಖ್ಯಭೂಮಿಕೆ ನೀಡಬೇಕು’ ಎಂದು ಉಪೇಂದ್ರ ಹೇಳಿದರು. ಇದಕ್ಕೆ ಉತ್ತರಿಸಿದ ಸುದೀಪ್,​ ‘ಆರ್​. ಚಂದ್ರು ಒಂದು ಸಿನಿಮಾ ಒಪ್ಪಿಕೊಂಡ್ರೆ ನಾಲ್ಕು ವರ್ಷ ಮಾಡ್ತಾರೆ ಅಂತ ಉಪೇಂದ್ರ ಅವರಿಗೆ ಗೊತ್ತು. ಹೀಗಾಗಿ, ಎರಡನೇ ಪಾರ್ಟ್​ನ ಜವಾಬ್ದಾರಿನ ನನಗೆ ವಹಿಸಿಬಿಟ್ರು’ ಎಂದರು. ಇದಕ್ಕೆ ಉತ್ತರಿಸಿದ ಉಪೇಂದ್ರ, ‘ಇವರು (ಸುದೀಪ್​) ಮತ್ತಿನ್ನೇನು, ಐದು ವರ್ಷಕ್ಕೆ ಒಂದು ಸಿನಿಮಾ ಮಾಡ್ತಾರೆ. ಅಲ್ಲಿಗೆ ಸರಿ ಆಗುತ್ತದೆ’ ಎಂದು ಕಿಚ್ಚನ ಕಾಲೆಳೆದು ನಕ್ಕರು.

ಇದನ್ನೂ ಓದಿ
Image
Kabzaa Movie: ‘ಕಬ್ಜ’ ಆಡಿಯೋ ರಿಲೀಸ್​ಗೆ ಶಿಡ್ಲಘಟ್ಟದಲ್ಲಿ ಸಿದ್ಧವಾಗ್ತಿದೆ ಬೃಹತ್​ ವೇದಿಕೆ; ಸರ್ವರಿಗೂ ಆಹ್ವಾನ ನೀಡಿದ ಚಿತ್ರತಂಡ
Image
Kabzaa: ನಾರ್ತ್​ ಅಮೆರಿಕದಲ್ಲಿ ಕನ್ನಡದ ‘ಕಬ್ಜ’ ಚಿತ್ರಕ್ಕೆ ಭಾರಿ ಡಿಮ್ಯಾಂಡ್​; ರಿಲೀಸ್​ಗೆ ಭರ್ಜರಿ ತಯಾರಿ
Image
‘ಒಟಿಟಿಯವರು ಕಣ್ಮುಚ್ಚಿಕೊಂಡು ಕಬ್ಜ ಹಕ್ಕು ಖರೀದಿಸಿಲ್ಲ; ಟೀಕಾಕಾರರಿಗೆ ಚಂದ್ರು ಉತ್ತರ
Image
Kabzaa: ಟ್ವಿಟರ್​ ಟ್ರೆಂಡಿಂಗ್​ನಲ್ಲಿ ‘ಪಠಾಣ್​’ ಚಿತ್ರವನ್ನೇ ಮೀರಿಸಿದ ‘ಕಬ್ಜ’: ಉಪ್ಪಿ-ಆರ್​. ಚಂದ್ರು ಕಮಾಲ್​

ಇದನ್ನೂ ಓದಿ: Kabzaa Movie: ‘ಕಬ್ಜ’ ಸಿನಿಮಾದ ದೊಡ್ಡ ಪ್ಲಸ್​ ಪಾಯಿಂಟ್​ ಏನು? ವಿವರಣೆ ನೀಡಿದ ‘ರಿಯಲ್​ ಸ್ಟಾರ್’​ ಉಪೇಂದ್ರ

‘ಐದು ವರ್ಷಕ್ಕೆ ಒಂದು ಸಿನಿಮಾ ಮಾಡೋಕೂ, ಒಂದೇ ಸಿನಿಮಾ ಐದು ವರ್ಷ ಮಾಡೋಕೂ ವ್ಯತ್ಯಾಸ ಇದೆ’ ಎಂಬ ಉತ್ತರ ಕಿಚ್ಚನ ಕಡೆಯಿಂದ ಬಂತು. ‘ನೀವು ಈ ರೀತಿ ಪ್ರಾಜೆಕ್ಟ್​ ಒಪ್ಪಿಕೊಂಡ್ರೆ ಮಧ್ಯೆ ಕ್ರಿಕೆಟ್ ಆಡುತ್ತಾ ಹಾಯಾಗಿ ಶೂಟಿಂಗ್ ಮಾಡಿಕೊಂಡು ಇರಬಹುದು’ ಎಂದು ಉಪ್ಪಿ ಹೇಳಿದರು.

ಇದನ್ನೂ ಓದಿ: Kabzaa: ಎಷ್ಟು ದೀರ್ಘವಾಗಿದೆ ‘ಕಬ್ಜ’ ಸಿನಿಮಾ? ಬಹುನಿರೀಕ್ಷಿತ ಚಿತ್ರದ ಅವಧಿ ಬಗ್ಗೆ ಸಿಕ್ತು ಮಾಹಿತಿ

‘ಕಬ್ಜ’ ಚಿತ್ರಕ್ಕಾಗಿ ಸುದೀಪ್ ಒಳ್ಳೆಯ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆಯೂ ಸುದೀಪ್ ಮಾತನಾಡಿದ್ದಾರೆ. ‘ವೃತ್ತಿಜೀವನದಲ್ಲಿ ಕಬ್ಜದಂತಹ ಸಿನಿಮಾಗಳು ಬರ್ತಾ ಇರಬೇಕು. ಶೂಟಿಂಗ್ ಮಾಡೋದು ಕೆಲವೇ ದಿನ ಆದ್ರೂ ಒಳ್ಳೆಯ ಪೇಮೆಂಟ್ ಕೊಡ್ತಾರೆ’ ಎಂದು ಸುದೀಪ್ ನಕ್ಕರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು