Hoysala Trailer: ಮಾ.20ಕ್ಕೆ ರಿಲೀಸ್​ ಆಗಲಿದೆ ‘ಹೊಯ್ಸಳ’ ಟ್ರೇಲರ್​; ನಿರೀಕ್ಷೆ ಹೆಚ್ಚಿಸಿದ ಡಾಲಿ ಧನಂಜಯ್​ ಸಿನಿಮಾ

Daali Dhananjay | Hoysala Movie: ‘ಆನಂದ್ ಆಡಿಯೋ’ ಯೂಟ್ಯೂಬ್​ ಮೂಲಕ ‘ಹೊಯ್ಸಳ’ ಟ್ರೇಲರ್​ ರಿಲೀಸ್​ ಆಗಲಿದೆ. ಡಾಲಿ ನಿರ್ವಹಿಸಿರುವ ಗುರುದೇವ್​ ಹೊಯ್ಸಳ ಎಂಬ ಪಾತ್ರದ ಬಗ್ಗೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ.

Hoysala Trailer: ಮಾ.20ಕ್ಕೆ ರಿಲೀಸ್​ ಆಗಲಿದೆ ‘ಹೊಯ್ಸಳ’ ಟ್ರೇಲರ್​; ನಿರೀಕ್ಷೆ ಹೆಚ್ಚಿಸಿದ ಡಾಲಿ ಧನಂಜಯ್​ ಸಿನಿಮಾ
ಡಾಲಿ ಧನಂಜಯ್
Follow us
ಮದನ್​ ಕುಮಾರ್​
|

Updated on: Mar 15, 2023 | 3:05 PM

ಯಾವ ಪಾತ್ರ ಕೊಟ್ಟರೂ ಸೈ ಎನ್ನುವಂತಹ ನಟ ಡಾಲಿ ಧನಂಜಯ್​ (Daali Dhananjay) ಅವರು ಪ್ರತಿ ಸಿನಿಮಾದಲ್ಲೂ ಹೊಸ ಹೊಸ ಗೆಟಪ್​ ಪ್ರಯತ್ನಿಸುತ್ತಾರೆ. ಈಗ ಅವರು ಅಭಿನಯಿಸಿರುವ 25ನೇ ಸಿನಿಮಾ ‘ಹೊಯ್ಸಳ’ (Hoysala Movie) ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗಿದೆ. ಧನಂಜಯ್​ ಅವರು ಚಂದನವನಕ್ಕೆ ಕಾಲಿಟ್ಟಿದ್ದು 2013ರಲ್ಲಿ. ನೋಡ ನೋಡುತ್ತಿದ್ದಂತೆಯೇ ಅವರು 25ನೇ ಸಿನಿಮಾದ ಮೈಲಿಗಲ್ಲು ತಲುಪಿದ್ದಾರೆ. ಅವರ ಪ್ರತಿ ಸಿನಿಮಾ ಮೇಲೆ ಪ್ರೇಕ್ಷಕರಿಗೆ ಸಖತ್​ ನಿರೀಕ್ಷೆ ಇರುತ್ತದೆ. ಅದರಲ್ಲೂ ‘ಹೊಯ್ಸಳ’ ಸಿನಿಮಾ ಹೆಚ್ಚು ಕೌತುಕ ಮೂಡಿಸಿದೆ. ಅದಕ್ಕೆ ಕಾರಣ ಪೊಲೀಸ್​ ಗೆಟಪ್​. ಈ ಸಿನಿಮಾದ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ ಆಗಿದೆ. ಮಾರ್ಚ್​ 20ರ ಸಂಜೆ 7.29ಕ್ಕೆ ‘ಹೊಯ್ಸಳ’ ಟ್ರೇಲರ್​ ರಿಲೀಸ್ (Hoysala Movie Trailer)​ ಆಗಲಿದೆ.

ಈ ಸಿನಿಮಾದಲ್ಲಿ ಡಾಲಿ ಧನಂಜಯ್​ ಅವರು ಗುರುದೇವ್​ ಹೊಯ್ಸಳ ಎಂಬ ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಮತ್ತು ಹಾಡು ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ. ಪೋಸ್ಟರ್​ಗಳಲ್ಲಿ ಡಾಲಿ ಧನಂಜಯ್​ ಅವರ ಗೆಟಪ್​ ಗಮನ ಸೆಳೆದಿದೆ. ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಸಮಯದಲ್ಲಿ ಟ್ರೇಲರ್​ ಮೂಲಕ ಕೌತುಕ ಹೆಚ್ಚಿಸಲು ‘ಹೊಯ್ಸಳ’ ತಂಡ ಸಜ್ಜಾಗಿದೆ.

ಇದನ್ನೂ ಓದಿ
Image
ಜನ್ಮದಿನದಂದು ‘ಡಾಲಿ’ ಧನಂಜಯ್ ಹೊಸ ಘೋಷಣೆ; ಹೊಸ ಪ್ರತಿಭೆಗಳಿಗೆ ಸಿಗಲಿದೆ ಅವಕಾಶ
Image
Rachita Ram: ಡಾಲಿ ಧನಂಜಯ್​ ಅಣ್ಣನ ಮಗಳಿಗೆ ರಚಿತಾ ಹೆಸರು; ಆ ಘಟನೆ ನೆನೆದ ‘ಡಿಂಪಲ್​ ಕ್ವೀನ್​’
Image
ಡಾಲಿ ಧನಂಜಯ್​-ಅಮೃತಾ ಅಯ್ಯಂಗಾರ್​ ನಡುವೆ ಏನು ನಡೆಯುತ್ತಿದೆ? ನೇರ ಉತ್ತರ ನೀಡಿದ ನಟಿ
Image
ಡಾಲಿ ಧನಂಜಯ್​ ಹೆಸರಲ್ಲಿ ವಂಚನೆ; ಅಪರಿಚಿತರ ಪೋಸ್ಟ್​ ನಂಬಿ ಮೋಸ ಹೋಗ್ಬೇಡಿ ಎಂದ ನಟ

ಇದನ್ನೂ ಓದಿ: 19.20.21: ‘ನಾನು ಈ ವರ್ಷ ನೋಡಿದ ಬೆಸ್ಟ್​ ಸಿನಿಮಾ 19.20.21’: ಮನಸಾರೆ ಹೊಗಳಿದ ಡಾಲಿ ಧನಂಜಯ್​

‘ಹೊಯ್ಸಳ’ ಟ್ರೇಲರ್​ ಯಾವಾಗ ಬರಲಿದೆ ಎಂದು ಫ್ಯಾನ್ಸ್​ ಕಾಯುತ್ತಿದ್ದರು. ಆ ಕಾಯುವಿಕೆಗೆ ಮಾರ್ಚ್ 20ರ ಸಂಜೆ 7.29ಕ್ಕೆ ಫಲ ಸಿಗಲಿದೆ. ಆನಂದ್ ಆಡಿಯೋ ಯೂಟ್ಯೂಬ್​ ಮೂಲಕ ಟ್ರೇಲರ್​ ರಿಲೀಸ್​ ಆಗಲಿದೆ. ಡಾಲಿ ನಿರ್ವಹಿಸಿರುವ ಗುರುದೇವ್​ ಹೊಯ್ಸಳ ಎಂಬ ಪಾತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಅನುಮಾನಗಳಿವೆ. ಈ ಚಿತ್ರದಲ್ಲಿ ಡಾಲಿ ಪಾತ್ರಕ್ಕೆ ನೆಗೆಟಿವ್​ ಶೇಡ್​ ಇದೆಯಾ? ಗುರುದೇವ್​ ಹೊಯ್ಸಳ ಒಳ್ಳೆಯ ಅಧಿಕಾರಿಯಾ ಅಥವಾ ಕೆಟ್ಟವನಾ? ಈ ಎಲ್ಲ ಪ್ರಶ್ನೆಗಳಿಗೆ ಸಿನಿಮಾದಲ್ಲಿ ಉತ್ತರ ಸಿಗಲಿದೆ.

ಇದನ್ನೂ ಓದಿ: Daali Dhananjay: ‘ಸಿದ್ದೇಶ್ವರ ಶ್ರೀಗಳ ಪ್ರವಚನಕ್ಕೆ ಸಾವಿರಾರು ಜನ ಯಾಕೆ ಸೇರುತ್ತಿದ್ದರು?’: ಕಾರಣ ತಿಳಿಸಿದ ನಟ ಧನಂಜಯ್

‘ಹೊಯ್ಸಳ’ ಸಿನಿಮಾದಲ್ಲಿ ಡಾಲಿ ಧನಂಜಯ್​ ಅವರಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ. ಇವರಿಬ್ಬರನ್ನು ತೆರೆಮೇಲೆ ಒಟ್ಟಿಗೆ ನೋಡಲು ಫ್ಯಾನ್ಸ್​ ಕಾದಿದ್ದಾರೆ. ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ, ನಾಗಭೂಷಣ್ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಮಾರ್ಚ್​ 30ರಂದು ‘ಹೊಯ್ಸಳ’ ಸಿನಿಮಾ ರಿಲೀಸ್​ ಆಗಲಿದೆ. ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆ ಮೂಲಕ ಯೋಗಿ ಜಿ. ರಾಜ್ ಹಾಗೂ ಕಾರ್ತಿಕ್ ಗೌಡ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಪಕ್ಕಾ ಕಮರ್ಷಿಯಲ್​ ಶೈಲಿಯಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಒಂದು ಸಾಮಾಜಿಕ ಸಂದೇಶ ಇರಲಿದೆ. ಅದೇನು ಎಂಬುದು ತಿಳಿದುಕೊಳ್ಳಲು ಮಾರ್ಚ್​ 30ರ ತನಕ ಕಾಯಬೇಕು. ಈ ಸಿನಿಮಾಗೆ ವಿಜಯ್​ ಎನ್​. ಅವರು ನಿರ್ದೇಶನ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.