19.20.21: ‘ನಾನು ಈ ವರ್ಷ ನೋಡಿದ ಬೆಸ್ಟ್​ ಸಿನಿಮಾ 19.20.21’: ಮನಸಾರೆ ಹೊಗಳಿದ ಡಾಲಿ ಧನಂಜಯ್​

Daali Dhananjay | 19.20.21 Kannada Movie: ‘ಈ ಸಿನಿಮಾ ಕಾಡುತ್ತದೆ. ಪ್ರತಿ ದೃಶ್ಯ, ಪಾತ್ರ, ಸಂಭಾಷಣೆ ಎಲ್ಲವೂ ಚೆನ್ನಾಗಿದೆ. ಅದರಲ್ಲೂ ಕ್ಲೈಮ್ಯಾಕ್ಸ್​ ಅದ್ಭುತ ಎನಿಸಿತು’ ಎಂದು ಡಾಲಿ ಧನಂಜಯ್​ ಹೇಳಿದ್ದಾರೆ.

19.20.21: ‘ನಾನು ಈ ವರ್ಷ ನೋಡಿದ ಬೆಸ್ಟ್​ ಸಿನಿಮಾ 19.20.21’: ಮನಸಾರೆ ಹೊಗಳಿದ ಡಾಲಿ ಧನಂಜಯ್​
19.20.21 ಸಿನಿಮಾ ಪೋಸ್ಟರ್​. ಡಾಲಿ ಧನಂಜಯ್
Follow us
ಮದನ್​ ಕುಮಾರ್​
|

Updated on: Mar 08, 2023 | 10:51 AM

ಮಂಸೋರೆ ನಿರ್ದೇಶನದ ‘19.20.21’ ಸಿನಿಮಾ (19.20.21 Movie) ಜನಮನ ಗೆಲ್ಲುತ್ತಿದೆ. ನೈಜ ಘಟನೆ ಆಧರಿಸಿ ತಯಾರಾದ ಈ ಚಿತ್ರಕ್ಕೆ ಅತ್ಯುತ್ತಮ ವಿಮರ್ಶೆ ಸಿಕ್ಕಿದೆ. ಸೋಶಿಯಲ್​ ಮೀಡಿಯಾದಲ್ಲಿ ಸಿನಿಪ್ರೇಮಿಗಳು ಈ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಈ ಸಿನಿಮಾ ವೀಕ್ಷಿಸಿದ್ದಾರೆ. ಡಾಲಿ ಧನಂಜಯ್ (Daali Dhananjay)​ ಅವರಿಗೆ ‘19.20.21’ ಚಿತ್ರ ತುಂಬ ಇಷ್ಟ ಆಗಿದೆ. ಇತ್ತೀಚೆಗೆ ಸಿನಿಮಾ ನೋಡಿರುವ ಅವರು ಮನಸಾರೆ ಹೊಗಳಿದ್ದಾರೆ. ‘ಇದು ಎಲ್ಲರೂ ನೋಡಬೇಕಾದ’ ಸಿನಿಮಾ ಎಂದಿದ್ದಾರೆ ಧನಂಜಯ್​. ಮಲೆಕುಡಿಯ ಸಮುದಾಯದವರು ಎದುರಿಸಿದ ದೌರ್ಜನ್ಯದ ಕಥೆಯನ್ನು ‘19.20.21’ ಸಿನಿಮಾ ಒಳಗೊಂಡಿದೆ. ಮಂಸೋರೆ (Mansore) ಅವರ ನಿರ್ದೇಶನಕ್ಕೆ ಎಲ್ಲ ಕಡೆಗಳಿಂದ ಪ್ರಶಂಸೆ ಸಿಗುತ್ತಿದೆ.

‘19.20.21’ ಬಗ್ಗೆ ಡಾಲಿ ಧನಂಜಯ್​ ಹೇಳಿದ್ದೇನು?

‘ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಇದು ಎಲ್ಲರೂ ನೋಡಬೇಕಾದ ಸಿನಿಮಾ. ರಿಯಲ್​ ಘಟನೆಗಳನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ. ಆ ಚಿತ್ರದ ಪಾತ್ರಗಳು ಇನ್ನೂ ನಮ್ಮ ನಡುವೆ ಇದ್ದಾರೆ. ತುಂಬ ಅದ್ಭುತವಾದ ಅನುಭವ, ಅತ್ಯುತ್ತಮವಾದ ಬರವಣಿಗೆ. ಈ ರೀತಿಯ ಸಿನಿಮಾ ಮಾಡೋದು ತುಂಬ ಕಷ್ಟ. ನಾನು ಈ ವರ್ಷದಲ್ಲಿ ನೋಡಿರುವ ಬೆಸ್ಟ್​ ಸಿನಿಮಾ ಅಂತ ಹೇಳೋಕೆ ಇಷ್ಟಪಡುತ್ತೇನೆ’ ಎಂದಿದ್ದಾರೆ ಡಾಲಿ ಧನಂಜಯ್​.

ಇದನ್ನೂ ಓದಿ
Image
19.20.21: ಹೊಸ ಕನ್ನಡ ಸಿನಿಮಾಕ್ಕೆ ಸಿಕ್ತು ಸೆಲೆಬ್ರಿಟಿಗಳ ಭರಪೂರ ಬೆಂಬಲ, ಪ್ರಶಂಸೆಯ ಸುರಿಮಳೆ
Image
19 20 21 Movie Review: ನಾಡಿನ ಜನ ನೋಡಲೇಬೇಕಾದ ಕಾಡಿನ ಮಕ್ಕಳ ಕಥೆ ಮತ್ತು ಘನತೆ
Image
Vittal Malekudiya: ‘19.20.21’ ಚಿತ್ರದಲ್ಲಿರುವ ರಿಯಲ್​ ಕಥೆ ಯಾರದ್ದು? ಫೋಟೋ ಸಹಿತ ಮಾಹಿತಿ ಹಂಚಿಕೊಂಡ ಚಿತ್ರತಂಡ
Image
Mansore: ತಮ್ಮದೇ ಕಥೆಯನ್ನು ತೆರೆ ಮೇಲೆ ನೋಡಿ ಕಣ್ಣೀರು ಹಾಕಿದ ‘19.20.21’ ಚಿತ್ರದ ನೈಜ ಪಾತ್ರಗಳು

ಇದನ್ನೂ ಓದಿ: 19 20 21 Movie Review: ನಾಡಿನ ಜನ ನೋಡಲೇಬೇಕಾದ ಕಾಡಿನ ಮಕ್ಕಳ ಕಥೆ ಮತ್ತು ಘನತೆ

‘ಎಷ್ಟೋ ಸಿನಿಮಾಗಳಿಗೆ ಬರ್ತೀವಿ, ನೋಡ್ತೀವಿ, ಮಾತಾಡ್ತೀವಿ. ಅದು ಏನೂ ವ್ಯತ್ಯಾಸ ಅನಿಸಲ್ಲ. ಒಂದು ನೈತಿಕ ಬೆಂಬಲ ನೀಡೋಕೆ ಬರ್ತೀವಿ. ಆದರೆ ‘19.20.21’ ರೀತಿಯ ಸಿನಿಮಾಗಳನ್ನು ನೋಡಿದಾಗ ಇದು ತುಂಬ ಜನರನ್ನು ತಲುಪಬೇಕು ಅನಿಸುತ್ತೆ. ಇದರಲ್ಲಿ ಒಂದು ಎಜುಕೇಷನ್​ ಇದೆ. ಎಲ್ಲದರ ಬಗ್ಗೆ ನಾವು ಸಹಾನುಭೂತಿ ಕಳೆದುಕೊಳ್ಳುತ್ತಾ ಇದೀವಿ. ಸುತ್ತಮುತ್ತ ನಡೆದಿದ್ದು, ನಮನ್ನು ಬಂದು ತಟ್ಟುವ ತನಕ ನಮಗೆ ಏನೂ ಅನಿಸಲ್ಲ. ‘19.20.21’ ಇಡೀ ಸಿನಿಮಾ ಕಾಡುತ್ತದೆ. ಪ್ರತಿ ದೃಶ್ಯ, ಪಾತ್ರ, ಸಂಭಾಷಣೆ ಎಲ್ಲವೂ.. ಅದರಲ್ಲೂ ಕ್ಲೈಮ್ಯಾಕ್ಸ್​ ಅದ್ಭುತ ಎನಿಸಿತು’ ಎಂದು ಡಾಲಿ ಧನಂಜಯ್​ ಹೇಳಿದ್ದಾರೆ.

View this post on Instagram

A post shared by Manso Re (@manso.re.10)

ಶೃಂಗ ಬಿ.ವಿ. ಅವರು ‘19.20.21’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಬಾಲಾಜಿ ಮನೋಹರ್​, ರಾಜೇಶ್​ ನಟರಂಗ, ಕೃಷ್ಣ ಹೆಬ್ಬಾಳೆ, ವಿಶ್ವ ಕರ್ಣ, ಮಹದೇವ ಹಡಪದ, ಎಂ.ಡಿ. ಪಲ್ಲವಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶಿವು ಬಿ.ಕೆ. ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ, ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ. ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಅವರ ಸಾಹಿತ್ಯ ಈ ಚಿತ್ರಕ್ಕಿದೆ. ದೇವರಾಜ್. ಆರ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸತ್ಯ ಹೆಗಡೆ ಅವರ ಸಹ ನಿರ್ಮಾಣವಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ