Rishab Shetty: ಸಿಎಂ ಬೊಮ್ಮಾಯಿ ಭೇಟಿ ಮಾಡಿದ ರಿಷಬ್ ಶೆಟ್ಟಿ: ಕಾಡಿನ ಜನರ ಬೆಂಬಲಕ್ಕೆ ನಿಂತ ‘ಕಾಂತಾರ’ ಹೀರೋ
Rishab Shetty Meets CM Basavaraj Bommai: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ರಿಷಬ್ ಶೆಟ್ಟಿ ಭೇಟಿ ಆಗಿದ್ದಾರೆ. ಈ ಭೇಟಿಯ ಉದ್ದೇಶ ಏನು ಎಂಬುದನ್ನು ಅವರು ವಿವರಿಸಿದ್ದಾರೆ.
ರಿಷಬ್ ಶೆಟ್ಟಿ ಅವರು ‘ಕಾಂತಾರ’ (Kantara Movie) ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡರು. ಆ ಚಿತ್ರದಲ್ಲಿ ಕಾಡಿನ ಜನರ ಕಷ್ಟದ ಬಗ್ಗೆ ವಿವರಿಸಲಾಗಿತ್ತು. ಹಾಗಂತ ಬರೀ ಸಿನಿಮಾದಲ್ಲಿ ಮೆಸೇಜ್ ನೀಡಿ ರಿಷಬ್ ಶೆಟ್ಟಿ (Rishab Shetty) ಸುಮ್ಮನಾಗಿಲ್ಲ. ರಿಯಲ್ ಲೈಫ್ನಲ್ಲಿಯೂ ಕಾಡಿನ ಜನರಿಗಾಗಿ ಸಹಾಯ ಮಾಡಲು ಅವರು ಮುಂದಾಗಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ರಿಷಬ್ ಶೆಟ್ಟಿ ಭೇಟಿ ಆಗಿದ್ದಾರೆ. ಈ ವೇಳೆ 20 ಅಂಶಗಳನ್ನು ಪಟ್ಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಇದಕ್ಕೆಲ್ಲ ಕಾರಣ ಆಗಿದ್ದು ‘ಕಾಂತಾರ’ ಸಿನಿಮಾ ಎಂಬುದು ವಿಶೇಷ. ಈ ಬಗ್ಗೆ ಮಾಹಿತಿ ನೀಡಲು ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಶೆಟ್ಟಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಪೂರ್ತಿ ವಿವರ ನೀಡಿದ್ದಾರೆ.
ರಿಷಬ್ ಶೆಟ್ಟಿ-ಬಸವರಾಜ ಬೊಮ್ಮಾಯಿ ಭೇಟಿ ಆಗಿದ್ದೇಕೆ?
‘ಕಾಂತಾರ ಸಿನಿಮಾದ ನಂತರ ಕಾಡಂಚಿನ ಜನರು ಮತ್ತು ಕಾಡಿನ ಜೊತೆ ಸಮಯ ಕಳೆಯುತ್ತಾ, ಅರಣ್ಯ ಇಲಾಖೆಯವರ ಜೊತೆ ಬರೆಯುತ್ತಾ, ಇಲ್ಲಿನ ಜನರ ಸಮಸ್ಯೆಗಳನ್ನು ಕೇಳುತ್ತಾ ಒಂದಷ್ಟು ಜರ್ನಿ ಮಾಡಿದೆ. ಕೃಷಿಕರಿಗೆ ಕಾಡಾನೆ ಸಮಸ್ಯೆ ಇದೆ. ಕಾಡ್ಗಿಚ್ಚಿನ ಸಂದರ್ಭದಲ್ಲಿ ವಾಚರ್ಗಳು ಸಾಕಷ್ಟು ರಿಸ್ಕ್ ತೆಗೆದುಕೊಂಡು ಕಾಡನ್ನು ಉಳಿಸುತ್ತಿದ್ದಾರೆ. ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯವರ ಜೊತೆಗೆ ಒಂದಷ್ಟು ಚರ್ಚೆ ಮಾಡಿದ್ದೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
‘ಆಗಬೇಕಾದ ಕೆಲಸ ಸಾಕಷ್ಟು ಇವೆ. ಅರಣ್ಯ ಇಲಾಖೆಯಲ್ಲಿ ಉದ್ಯೋಗ ಭರ್ತಿ ಆಗಬೇಕು. ವಾಚರ್ಗಳ ನೇಮಕಾತಿ ಆಗಬೇಕು. ಆ ರೀತಿ 20 ಅಂಶಗಳನ್ನು ಪಟ್ಟಿ ಮಾಡಿ ಮುಖ್ಯಮಂತ್ರಿಗಳಿಗೆ ನೀಡಿದ್ದೇವೆ. ಅವರು ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಕೂಡ ಇತ್ತೀಚಿನ ದಿನಗಳಲ್ಲಿ ಕಾಡಿಗೆ ಹೋಗಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರುವಂತೆ ಆದೇಶ ನೀಡುವುದಾಗಿ ಅವರು ತಿಳಿಸಿದ್ದಾರೆ. ಇಂಥ ಮುಖ್ಯಮಂತ್ರಿಗಳನ್ನು ಪಡೆದಿದ್ದಕ್ಕೆ ನಾವೆಲ್ಲ ಧನ್ಯ. ಈ ರೀತಿಯ ಚಿಕ್ಕ ಸಮಸ್ಯೆಗಳನ್ನೂ ಕೂಡ ಗಮನಿಸಿ ಅದಕ್ಕೆ ಪರಿಹಾರ ಸಿಗುವ ರೀತಿಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಕಾಂತಾರ ಚಿತ್ರದ ನಂತರದ ದಿನಗಳಲ್ಲಿ ಕಾಡು ಸುತ್ತಿ,ಅಡವಿ ಅಂಚಿನ ಜನರ ಜತೆ ಮಾತಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳ ಜತೆ ಚರ್ಚಿಸಿ ಕಲೆಹಾಕಿದ ಅಂಶಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದಿಟ್ಟಾಗ ಅವರು ತಕ್ಷಣವೇ ಪರಿಹರಿಸುವುದಾಗಿ ಹೇಳಿದ್ದಾರೆ. ಸಮಸ್ಯೆಗೆ ಸ್ಪಂದಿಸಿದ ಶ್ರೀ @BSBommai ಯವರಿಗೆ ಧನ್ಯವಾದಗಳು.@CMofKarnataka @aranya_kfd pic.twitter.com/VRL9YDDZcg
— Rishab Shetty (@shetty_rishab) March 8, 2023
‘ಕಾಂತಾರ 2’ ಕೆಲಸದಲ್ಲಿ ರಿಷಬ್ ಶೆಟ್ಟಿ ಬ್ಯುಸಿ:
ರಿಷಬ್ ಶೆಟ್ಟಿ ಅವರು ಈಗ ‘ಕಾಂತಾರ 2’ ಸಿನಿಮಾಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸ್ಕ್ರಿಪ್ಟ್ ಬರವಣಿಗೆ, ಲೊಕೇಷನ್ ಹುಡುಕಾಟ, ಪಾತ್ರವರ್ಗದ ಆಯ್ಕೆ ಸೇರಿದಂತೆ ಹಲವು ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:49 pm, Wed, 8 March 23