Mansore: ತಮ್ಮದೇ ಕಥೆಯನ್ನು ತೆರೆ ಮೇಲೆ ನೋಡಿ ಕಣ್ಣೀರು ಹಾಕಿದ ‘19.20.21’ ಚಿತ್ರದ ನೈಜ ಪಾತ್ರಗಳು

19.20.21 Kannada Movie | Sandalwood: ಬಿಡುಗಡೆಗೂ ಮುನ್ನ ‘19.20.21’ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಅದರ ಅನುಭವವನ್ನು ನಿರ್ದೇಶನ ಮಂಸೋರೆ ಅವರು ಹಂಚಿಕೊಂಡಿದ್ದಾರೆ.

Mansore: ತಮ್ಮದೇ ಕಥೆಯನ್ನು ತೆರೆ ಮೇಲೆ ನೋಡಿ ಕಣ್ಣೀರು ಹಾಕಿದ ‘19.20.21’ ಚಿತ್ರದ ನೈಜ ಪಾತ್ರಗಳು
‘19.20.21’ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಪ್ರೇಕ್ಷಕರ ಜೊತೆ ನಿರ್ದೇಶಕ ಮಂಸೋರೆ
Follow us
ಮದನ್​ ಕುಮಾರ್​
|

Updated on: Mar 01, 2023 | 4:35 PM

ನಿರ್ದೇಶಕ ಮಂಸೋರೆ (Mansore) ಅವರು ಪ್ರತಿ ಬಾರಿಯೂ ಒಂದು ವಿಶೇಷ ಕಥಾವಸ್ತು ಇಟ್ಟುಕೊಂಡು ಸಿನಿಮಾ ಮಾಡುತ್ತಾರೆ. ‘ಹರಿವು’, ‘ನಾತಿಚರಾಮಿ’, ‘ಆಕ್ಟ್​ 1978’ ಬಳಿಕ ಅವರು ‘19.20.21’ (19.20.21 Movie) ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮಾರ್ಚ್​ 3ರಂದು ರಿಲೀಸ್​ ಆಗುತ್ತಿದೆ. ಹಲವು ವರ್ಷಗಳಿಂದ ದೌರ್ಜನ್ಯಕ್ಕೆ ಒಳಗಾದ ಬುಡಕಟ್ಟು ಸಮುದಾಯದ ಜನರ ಕುರಿತು ಈ ಸಿನಿಮಾ ಮಾಡಲಾಗಿದೆ. ವಿಶೇಷ ಏನೆಂದರೆ, ಈ ಜನರಿಗಾಗಿಯೇ ಚಿತ್ರತಂಡದವರು ಪ್ರದರ್ಶನ ಏರ್ಪಡಿಸಿದ್ದಾರೆ. ತಮ್ಮದೇ ಕಥೆಯನ್ನು ಬೆಳ್ಳಿಪರದೆಯ ಮೇಲೆ ನೋಡಿದ ಅವೆಲ್ಲರೂ ಭಾವುಕರಾಗಿದ್ದಾರೆ. ಆ ಅನುಭವದ ಕುರಿತು ಮಂಸೋರೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

‘ಇದಕ್ಕಿಂತ ಸಾರ್ಥಕತೆ ಇನ್ನೇನಿದೆ? ಇಲ್ಲಿಯವರೆಗಿನ ನನ್ನ ಸಿನಿ ಪಯಣದಲ್ಲಿ ಇಂತಹ ಭಾವುಕ ಸಂಗತಿ ಎಂದೂ ಘಟಿಸಿಲ್ಲ. ‘ಹರಿವು’ ನೈಜ ಘಟನೆ ಆಧರಿಸಿದ ಕತೆಯಾದರೂ ಮೂಲ ವ್ಯಕ್ತಿಯನ್ನು ಭೇಟಿ ಮಾಡುವ ಅವಕಾಶ ದೊರಕಿರಲಿಲ್ಲ. ಆದರೆ ಈ ಬಾರಿ ಸಿನಿಮಾ ಮಾಡುವ ಮೊದಲು ಅವರೊಂದಿಗಿನ ಒಡನಾಟ ಹಾಗೂ ಆ ನಂತರ ಅವರದೇ ಕತೆಯ ಸಿನಿಮಾವನ್ನು ಅವರಿಗೇ ತೋರಿಸುವ ಅವಕಾಶ ಮೊದಲ ಬಾರಿಗೆ ದಕ್ಕಿತು. ಅದರಲ್ಲೂ ಆ ಸಮುದಾಯದ ಬಹುತೇಕರು ಮೊದಲ ಬಾರಿಗೆ ಚಿತ್ರಮಂದಿರದ ಒಳಗೆ ಪ್ರವೇಶ ಮಾಡಿರುವುದು’ ಎಂದು ಮಂಸೋರೆ ಅವರು ಬರಹ ಆರಂಭಿಸಿದ್ದಾರೆ.

ಇದನ್ನೂ ಓದಿ
Image
‘777 ಚಾರ್ಲಿ’ ಸಿನಿಮಾಗೆ ಮಾತ್ರ ತೆರಿಗೆ ವಿನಾಯಿತಿ ಯಾಕೆ? ಬೊಮ್ಮಾಯಿ ಸರ್ಕಾರದ ಕಿವಿ ಹಿಂಡಿದ ಮಂಸೋರೆ
Image
ಬದುಕು ಬದಲಿಸಿದ ಹೆದ್ದಾರಿಯಿಂದಲೇ ಸಾವು; ಸಂಚಾರಿ ವಿಜಯ್ ನೆನೆದು ದುಃಖ ಹೊರಹಾಕಿದ ನಿರ್ದೇಶಕ ಮಂಸೋರೆ
Image
ಡಿಫರೆಂಟ್​ ಪಾತ್ರದಲ್ಲಿ ಪುನೀತ್​; ‘ಮಿಷನ್​ ಕೊಲಂಬಸ್​’ ಚಿತ್ರಕ್ಕಾಗಿ ಮಂಸೋರೆ ಕಂಡಿದ್ದ ಕನಸು ಭಗ್ನ
Image
ಮಂಸೋರೆ ನಿರ್ದೇಶನದ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಡಲಿದ್ದಾರಾ ಸಾಯಿ ಪಲ್ಲವಿ? ಇಲ್ಲಿದೆ ಅಸಲಿಯತ್ತು

ಇದನ್ನೂ ಓದಿ: 19.20.21 Movie: ಗಮನ ಸೆಳೆಯುತ್ತಿದೆ ‘19.20.21’ ಹೊಸ ಪೋಸ್ಟರ್​; ಬಿಡುಗಡೆ ಹೊಸ್ತಿಲಿನಲ್ಲಿ ಹೆಚ್ಚಿತು ಕೌತುಕ

‘ಅವರದೇ ಬದುಕಿನ ಪುಟ್ಟ ಭಾಗವನ್ನು ಸಿನಿಮಾ ರೂಪದಲ್ಲಿ ತೆರೆಯ ಮೇಲೆ ಕಂಡ ನಂತರ ಆ ಮುಗ್ಧ ಕಣ್ಣಲ್ಲಿ ಕಾಣಿಸಿದ್ದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಾಗದು. ಆ ಕ್ಷಣಗಳಲ್ಲಿ ಆ ಕಣ್ಣುಗಳ ಮೂಲಕ ಅವರು ದಾಟಿಸಿದ ಪ್ರೀತಿ ಎದೆಯಾಳವನ್ನು ಹೊಕ್ಕು ಶಾಶ್ವತವಾಗಿ ಕೂತುಬಿಟ್ಟಿದೆ. ಅವರು ತಮ್ಮ ಬೆಚ್ಚನೆಯ ಕೈಯಲ್ಲಿ ನನ್ನ ಕೈಹಿಡಿದು ಮಾತೇ ಆಡದೇ ನೀಡಿದ ಮೆಚ್ಚುಗೆಯ ಮುಂದೆ ಇನ್ಯಾವ ಪ್ರಶಸ್ತಿ ಗೌರವಗಳು ಸರಿಗಟ್ಟಲಾರವೇನೊ. ಹೌದು ಇವರು ಅದೇ ಮಲೆಕುಡಿಯರು. ದಶಕಗಳ ಕಾಲ ದೌರ್ಜನ್ಯವನ್ನು ಅನುಭವಿಸುತ್ತಾ, ನ್ಯಾಯಯುತ ಹೋರಾಟದಿಂದಲೇ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವವರು. ಇದು ಅವರದೇ ಕತೆ. ಈ ಜೀವಕ್ಕೆ ಇದಕ್ಕಿಂತ ಸಾರ್ಥಕತೆ ಇನ್ನೇನು ಬೇಕಿದೆ?’ ಎಂದು ಮಂಸೋರೆ ಬರೆದುಕೊಂಡಿದ್ದಾರೆ.

View this post on Instagram

A post shared by Manso Re (@manso.re.10)

ಶೃಂಗ ಬಿ.ವಿ., ಬಾಲಾಜಿ ಮನೋಹರ್, ಸಂಪತ್, ಎಂ.ಡಿ. ಪಲ್ಲವಿ, ಮಹದೇವ್ ಹಡಪದ್, ಉಗ್ರಂ ಸಂದೀಪ್ ಸೇರಿದಂತೆ ಅನೇಕರು ‘19.20.21’ ಚಿತ್ರದಲ್ಲಿ ನಟಿಸಿದ್ದಾರೆ. ಶಿವು ಬಿ.ಕೆ. ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ, ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ. ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಅವರ ಸಾಹಿತ್ಯ ಈ ಚಿತ್ರಕ್ಕಿದೆ. ದೇವರಾಜ್. ಆರ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸತ್ಯ ಹೆಗಡೆ ಅವರ ಸಹ ನಿರ್ಮಾಣವಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ