AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mansore: ‘19.20.21’ ಟ್ರೇಲರ್​ಗೆ ಭರಪೂರ ಮೆಚ್ಚುಗೆ; ಮಂಸೋರೆ ನಿರ್ದೇಶನದ ಸಿನಿಮಾ ಮಾರ್ಚ್​ 3ಕ್ಕೆ ರಿಲೀಸ್

19.20.21 Kannada Movie Trailer: ‘19.20.21’ ಸಿನಿಮಾದ ಟ್ರೇಲರ್​ ಹೊಸ ಟಾಕ್​ ಸೃಷ್ಟಿ ಮಾಡಿದೆ. ಕನ್ನಡ ಚಿತ್ರರಂಗಕ್ಕೆ ಇಂಥ ಕಂಟೆಂಟ್​ ಓರಿಯೆಂಟೆಡ್​ ಸಿನಿಮಾಗಳ ಅಗತ್ಯವಿದೆ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

Mansore: ‘19.20.21’ ಟ್ರೇಲರ್​ಗೆ ಭರಪೂರ ಮೆಚ್ಚುಗೆ; ಮಂಸೋರೆ ನಿರ್ದೇಶನದ ಸಿನಿಮಾ ಮಾರ್ಚ್​ 3ಕ್ಕೆ ರಿಲೀಸ್
‘19.20.21’ ಸಿನಿಮಾದ ದೃಶ್ಯ
ಮದನ್​ ಕುಮಾರ್​
|

Updated on: Feb 15, 2023 | 7:43 PM

Share

ಪ್ರತಿ ಬಾರಿಯೂ ಗಮನ ಸೆಳೆಯುವಂತಹ ವಿಷಯವನ್ನು ಇಟ್ಟುಕೊಂಡು ಸಿನಿಮಾ ಮಾಡುವವರು ನಿರ್ದೇಶಕ ಮಂಸೋರೆ (Mansore). ‘ಹರಿವು’, ‘ನಾತಿಚರಾಮಿ’, ‘ಆಕ್ಟ್​ 1978’ ಸಿನಿಮಾಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಅವರು ಈಗ ‘19.20.21’ (19.20.21 Movie) ಚಿತ್ರವನ್ನು ಪ್ರೇಕ್ಷಕರ ಎದುರು ತರುತ್ತಿದ್ದಾರೆ. ಪೋಸ್ಟರ್​ ಮತ್ತು ಟೀಸರ್​ ಮೂಲಕ ಕೌತುಕ ಮೂಡಿಸಿದ್ದ ಈ ಸಿನಿಮಾದ ಟ್ರೇಲರ್​ ಈಗ ಬಿಡುಗಡೆ ಆಗಿದೆ. ಸಂಗೀತ ನಿರ್ದೇಶಕ ಹಂಸಲೇಖ ಮತ್ತು ಲೈಂಗಿಕ ಅಲ್ಪ ಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕಯ್​ ಪದ್ಮಶಾಲಿ ಅವರ ಸಮ್ಮುಖದಲ್ಲಿ ‘19.20.21’ ಟ್ರೇಲರ್​ (19.20.21 Movie Trailer) ಅನಾವರಣ ಮಾಡಲಾಗಿದೆ. ಇದರಲ್ಲಿನ ಕಥಾವಸ್ತು ನೋಡಿ ಸಿನಿಪ್ರಿಯರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಬಿಡುಗಡೆಯಾದ ಕೂಡಲೇ ‘19.20.21’ ಟ್ರೇಲರ್​ ಹೊಸ ಟಾಕ್​ ಸೃಷ್ಟಿ ಮಾಡಿದೆ. ಕನ್ನಡ ಚಿತ್ರರಂಗಕ್ಕೆ ಇಂಥ ಕಂಟೆಂಟ್​ ಓರಿಯೆಂಟೆಡ್​ ಸಿನಿಮಾಗಳ ಅಗತ್ಯವಿದೆ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ಕಾಡಿನ ಜನರ ಮೇಲೆ ನಡೆದ ದೌರ್ಜನ್ಯದ ಕಥೆ ಈ ಸಿನಿಮಾದಲ್ಲಿ ಇದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ. ಇನ್ನೂ ಅನೇಕ ವಿಷಯಗಳ ಮೇಲೆ ‘19.20.21’ ಸಿನಿಮಾ ಬೆಳಕು ಚೆಲ್ಲಲಿದೆ.

ಇದನ್ನೂ ಓದಿ: ಡಿಫರೆಂಟ್​ ಪಾತ್ರದಲ್ಲಿ ಪುನೀತ್​; ‘ಮಿಷನ್​ ಕೊಲಂಬಸ್​’ ಚಿತ್ರಕ್ಕಾಗಿ ಮಂಸೋರೆ ಕಂಡಿದ್ದ ಕನಸು ಭಗ್ನ

ಇದನ್ನೂ ಓದಿ
Image
‘777 ಚಾರ್ಲಿ’ ಸಿನಿಮಾಗೆ ಮಾತ್ರ ತೆರಿಗೆ ವಿನಾಯಿತಿ ಯಾಕೆ? ಬೊಮ್ಮಾಯಿ ಸರ್ಕಾರದ ಕಿವಿ ಹಿಂಡಿದ ಮಂಸೋರೆ
Image
ಬದುಕು ಬದಲಿಸಿದ ಹೆದ್ದಾರಿಯಿಂದಲೇ ಸಾವು; ಸಂಚಾರಿ ವಿಜಯ್ ನೆನೆದು ದುಃಖ ಹೊರಹಾಕಿದ ನಿರ್ದೇಶಕ ಮಂಸೋರೆ
Image
ಡಿಫರೆಂಟ್​ ಪಾತ್ರದಲ್ಲಿ ಪುನೀತ್​; ‘ಮಿಷನ್​ ಕೊಲಂಬಸ್​’ ಚಿತ್ರಕ್ಕಾಗಿ ಮಂಸೋರೆ ಕಂಡಿದ್ದ ಕನಸು ಭಗ್ನ
Image
ಮಂಸೋರೆ ನಿರ್ದೇಶನದ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಡಲಿದ್ದಾರಾ ಸಾಯಿ ಪಲ್ಲವಿ? ಇಲ್ಲಿದೆ ಅಸಲಿಯತ್ತು

ಅಕ್ಕಯ್​ ಪದ್ಮಶಾಲಿ ಮತ್ತು ಹಂಸಲೇಖ ಅವರು ‘19.20.21’ ಟ್ರೇಲರ್​ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾ ಹೆಚ್ಚು ಜನರನ್ನು ತಲುಪಲಿ ಎಂದು ಅವರು ಹಾರೈಸಿದ್ದಾರೆ. ಮಂಸೋರೆ ಅವರು ಭಿನ್ನವಾದ ಈ ಪ್ರಯತ್ನಕ್ಕೆ ನಿರ್ಮಾಪಕ ದೇವರಾಜ್​ ಆರ್​. ಅವರು ಬೆಂಬಲವಾಗಿ ನಿಂತಿದ್ದಾರೆ. ‘ಡಿ ಕ್ರಿಯೇಷನ್ಸ್​’ ಬ್ಯಾನರ್​ ಮೂಲಕ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ: ಅಗಲಿದ ಗೆಳೆಯ ಸಂಚಾರಿ ವಿಜಯ್​ಗಾಗಿ ‘ಪುಕ್ಸಟ್ಟೆ ಲೈಫು’ ಚಿತ್ರದ ಟಿಕೆಟ್​ ಖರೀದಿಸಿ, ಪತ್ರ ಬರೆದ ಮಂಸೋರೆ

ಮಾರ್ಚ್​ 3ರಂದು ‘19.20.21’ ಸಿನಿಮಾ ಬಿಡುಗಡೆ ಆಗಲಿದೆ. ಪ್ರತಿಭಾವಂತ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಶೃಂಗ ಬಿ.ವಿ., ಬಾಲಾಜಿ ಮನೋಹರ್​, ಅವಿನಾಶ್​, ಕೃಷ್ಣ ಹೆಬ್ಬಾಳೆ, ವಿಶ್ವ ಕರ್ಣ, ಎಂ.ಡಿ. ಪಲ್ಲವಿ, ಸಂಪತ್​ ಕುಮಾರ್​, ರಾಜೇಶ್​ ನಟರಂಗ ಸೇರಿದಂತೆ ಹಲವರು ನಟಿಸಿದ್ದಾರೆ. ಶಿವ ಬಿ.ಕೆ. ಕುಮಾರ್​ ಛಾಯಾಗ್ರಹಣ, ಬಿಂದು ಮಾಲಿನಿ ಸಂಗೀತ ನಿರ್ದೇಶನ, ಸುರೇಶ್​ ಆರ್ಮುಗಂ ಸಂಕಲನ, ರೋಣದ ಬಕ್ಕೇಶ್​ ಹಿನ್ನೆಲೆ ಸಂಗೀತ, ಕಿರಣ್​ ಕಾವೇರಪ್ಪ ಸಾಹಿತ್ಯ ಈ ಚಿತ್ರಕ್ಕಿದೆ.

ಕನ್ನಡಿಗರು ಮಾತ್ರವಲ್ಲದೇ ಪರಭಾಷೆಯ ಪ್ರೇಕ್ಷಕರು ಕೂಡ ‘19.20.21’ ಟ್ರೇಲರ್​ ನೋಡಿ ಕಮೆಂಟ್​ ಮಾಡುತ್ತಿದ್ದಾರೆ. ಇದು ಗಡಿ ಮೀರಿ ಎಲ್ಲರನ್ನೂ ಸೆಳೆಯುವ ಸಿನಿಮಾ ಎಂಬ ಅಭಿಪ್ರಾಯ ಬಹುತೇಕರಿಂದ ಕೇಳಿ ಬರುತ್ತಿದೆ. ಪ್ರಶಸ್ತಿಗಳು ಕೂಡ ಖಂಡಿತ ಬರಲಿವೆ ಎಂದು ಹಲವರು ಭವಿಷ್ಯ ನುಡಿಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ