19.20.21 Movie: ಗಮನ ಸೆಳೆಯುತ್ತಿದೆ ‘19.20.21’ ಹೊಸ ಪೋಸ್ಟರ್​; ಬಿಡುಗಡೆ ಹೊಸ್ತಿಲಿನಲ್ಲಿ ಹೆಚ್ಚಿತು ಕೌತುಕ

Mansore | Shrunga BV: ‘ಕೈಗೆ ಬೇಡಿ ಹಾಕಿ ಪರೀಕ್ಷೆ ಬರೆಸಿದರೆ ಹಾಳಾಗೋದು ಕೇವಲ ವಿದ್ಯಾರ್ಥಿಯ ಕೈಬರಹ ಅಷ್ಟೇ ಅಲ್ಲ, ದೇಶದ ಹಣೆಬರಹ ಕೂಡ’ ಎಂಬ ಕ್ಯಾಪ್ಷನ್​ನೊಂದಿಗೆ ನಿರ್ದೇಶಕ ಮಂಸೋರೆ ಅವರು ಈ ಪೋಸ್ಟರ್​ ಹಂಚಿಕೊಂಡಿದ್ದಾರೆ.

19.20.21 Movie: ಗಮನ ಸೆಳೆಯುತ್ತಿದೆ ‘19.20.21’ ಹೊಸ ಪೋಸ್ಟರ್​; ಬಿಡುಗಡೆ ಹೊಸ್ತಿಲಿನಲ್ಲಿ ಹೆಚ್ಚಿತು ಕೌತುಕ
ಶೃಂಗ ಬಿ.ವಿ.
Follow us
ಮದನ್​ ಕುಮಾರ್​
|

Updated on:Feb 26, 2023 | 6:46 PM

ನೈಜ ಘಟನೆ ಆಧರಿಸಿ ತಯಾರಾಗಿರುವ ‘19.20.21’ ಸಿನಿಮಾದ (19.20.21 Movie) ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದುಕೊಂಡಿವೆ. ಈಗಾಗಲೇ 10 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿರುವ ಟ್ರೇಲರ್​ ಮೂಲಕ ಈ ಚಿತ್ರದ ಬಗ್ಗೆ ಸಖತ್​ ಕೌತುಕ ನಿರ್ಮಾಣ ಆಗಿದೆ. ಮಂಸೋರೆ (Mansore) ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಮಾರ್ಚ್​ 3ರಂದು ‘19.20.21’ ಸಿನಿಮಾ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ಒಂದು ಹೊಸ ಪೋಸ್ಟರ್​ ಮೂಲಕ ಕುತೂಹಲ ಹೆಚ್ಚಿಸುವ ಕೆಲಸ ಆಗಿದೆ. ರಂಗಭೂಮಿ ಕಲಾವಿದ ಶೃಂಗ ಬಿ.ವಿ. (Shrunga BV) ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.

ಶೃಂಗ ಬಿ.ವಿ. ಕಾಣಿಸಿಕೊಂಡಿರುವ ಈ ಹೊಸ ಪೋಸ್ಟರ್​ನಲ್ಲಿ ಕಥೆಯ ಬಗ್ಗೆ ಒಂದಷ್ಟು ಸುಳಿವು ಬಿಟ್ಟುಕೊಡಲಾಗಿದೆ. ಸರಪಳಿಯಿಂದ ಬಂಧಿತನಾಗಿರುವ ನಾಯಕ ಪೊಲೀಸ್ ಕಾವಲಿನ ನಡುವೆ ಪರೀಕ್ಷೆ ಬರೆಯುತ್ತಿರುವ ದೃಶ್ಯ ಈ ಪೋಸ್ಟರ್​ನಲ್ಲಿದೆ. ‘ಕೈಗೆ ಬೇಡಿ ಹಾಕಿ ಪರೀಕ್ಷೆ ಬರೆಸಿದರೆ ಹಾಳಾಗೋದು ಕೇವಲ ವಿದ್ಯಾರ್ಥಿಯ ಕೈಬರಹ ಅಷ್ಟೇ ಅಲ್ಲ, ದೇಶದ ಹಣೆಬರಹ ಕೂಡ. ನೆನಪಿರಲಿ’ ಎಂಬ ಕ್ಯಾಪ್ಷನ್​ನೊಂದಿಗೆ ನಿರ್ದೇಶಕ ಮಂಸೋರೆ ಅವರು ಈ ಪೋಸ್ಟರ್​ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
Image
‘777 ಚಾರ್ಲಿ’ ಸಿನಿಮಾಗೆ ಮಾತ್ರ ತೆರಿಗೆ ವಿನಾಯಿತಿ ಯಾಕೆ? ಬೊಮ್ಮಾಯಿ ಸರ್ಕಾರದ ಕಿವಿ ಹಿಂಡಿದ ಮಂಸೋರೆ
Image
ಬದುಕು ಬದಲಿಸಿದ ಹೆದ್ದಾರಿಯಿಂದಲೇ ಸಾವು; ಸಂಚಾರಿ ವಿಜಯ್ ನೆನೆದು ದುಃಖ ಹೊರಹಾಕಿದ ನಿರ್ದೇಶಕ ಮಂಸೋರೆ
Image
ಡಿಫರೆಂಟ್​ ಪಾತ್ರದಲ್ಲಿ ಪುನೀತ್​; ‘ಮಿಷನ್​ ಕೊಲಂಬಸ್​’ ಚಿತ್ರಕ್ಕಾಗಿ ಮಂಸೋರೆ ಕಂಡಿದ್ದ ಕನಸು ಭಗ್ನ
Image
ಮಂಸೋರೆ ನಿರ್ದೇಶನದ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಡಲಿದ್ದಾರಾ ಸಾಯಿ ಪಲ್ಲವಿ? ಇಲ್ಲಿದೆ ಅಸಲಿಯತ್ತು

‘19.20.21’ ಚಿತ್ರದ ಹಾಡುಗಳಿಗೆ ಬಿಂದು ಮಾಲಿನಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ‘ಹಾಡು ಪಾಡು ಇವರ ಸಿಂಗಾರ, ನೋಡಾ ಬಾರ ಭುವಿಗೆ ಮಾಯ್ಕಾರ..’ ಗೀತೆ ಬಿಡುಗಡೆ ಆಗಿದೆ. ಕಿರಣ್ ಕಾವೇರಪ್ಪ ಹಾಗೂ ಉದಯ್ ರಾಜ್ ಅವರ ಸಾಹಿತ್ಯದಲ್ಲಿ ಮೂಡಿಬಂದಿರುವ ಈ ಗೀತೆಗೆ ಎಂ.ಡಿ. ಪಲ್ಲವಿ, ಬಿಂದು ಮಾಲಿನಿ, ಉಮಾ ವೈಜಿ, ಮೋಹನ್  ಕುಮಾರ್, ಶೃಂಗ ಬಿ.ವಿ. ಧ್ವನಿ ನೀಡಿದ್ದಾರೆ. ದೇವರಾಜ್. ಆರ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸತ್ಯ ಹೆಗಡೆ ಅವರ ಸಹ ನಿರ್ಮಾಣವಿದೆ.

ಇದನ್ನೂ ಓದಿ: Mansore: ‘19.20.21’ ಟ್ರೇಲರ್​ಗೆ ಭರಪೂರ ಮೆಚ್ಚುಗೆ; ಮಂಸೋರೆ ನಿರ್ದೇಶನದ ಸಿನಿಮಾ ಮಾರ್ಚ್​ 3ಕ್ಕೆ ರಿಲೀಸ್

ಶೃಂಗ ಬಿ.ವಿ., ಬಾಲಾಜಿ ಮನೋಹರ್, ಸಂಪತ್, ಎಂ.ಡಿ. ಪಲ್ಲವಿ, ಮಹದೇವ್ ಹಡಪದ್, ಉಗ್ರಂ ಸಂದೀಪ್ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಶಿವು ಬಿ.ಕೆ. ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ, ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ. ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಅವರ ಸಾಹಿತ್ಯ ಈ ಚಿತ್ರಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:46 pm, Sun, 26 February 23

ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್