Kabzaa Movie: ತಮಿಳುನಾಡಿನಲ್ಲಿ ‘ಕಬ್ಜ’ ಹಂಚಿಕೆ ಮಾಡಲಿದೆ ಲೈಕಾ ಪ್ರೊಡಕ್ಷನ್ಸ್; ಉಪ್ಪಿ ಚಿತ್ರಕ್ಕೆ ಸಿಕ್ತು ಬಲ

ಉಪೇಂದ್ರ, ಸುದೀಪ್ ಹಾಗೂ ಶಿವರಾಜ್​ಕುಮಾರ್ ಪರಿಚಯ ತಮಿಳುನಾಡಿನ ಮಂದಿಗೆ ಇದೆ. ಈ ಮೂವರು ಒಂದೇ ಸಿನಿಮಾದಲ್ಲಿ ನಟಿಸಿರುವ ಕಾರಣದಿಂದ ‘ಕಬ್ಜ’ ಚಿತ್ರದ ಬಗ್ಗೆ ಪರ ರಾಜ್ಯದವರೂ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Kabzaa Movie: ತಮಿಳುನಾಡಿನಲ್ಲಿ ‘ಕಬ್ಜ’ ಹಂಚಿಕೆ ಮಾಡಲಿದೆ ಲೈಕಾ ಪ್ರೊಡಕ್ಷನ್ಸ್; ಉಪ್ಪಿ ಚಿತ್ರಕ್ಕೆ ಸಿಕ್ತು ಬಲ
ಉಪೇಂದ್ರ-ಲೈಕಾ
Follow us
ರಾಜೇಶ್ ದುಗ್ಗುಮನೆ
|

Updated on:Mar 08, 2023 | 8:04 AM

‘ಕಬ್ಜ’ ಚಿತ್ರ (Kabzaa Movie) ರಿಲೀಸ್​ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ದೊಡ್ಡ ಮಟ್ಟದಲ್ಲಿ ಈ ಚಿತ್ರವನ್ನು ರಿಲೀಸ್ ಮಾಡಲು ಭರದ ಸಿದ್ಧತೆ ನಡೆದಿದೆ. ಆರ್​. ಚಂದ್ರು ನಿರ್ದೇಶಿಸಿ, ನಿರ್ಮಾಣ ಮಾಡಿರುವ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಸೃಷ್ಟಿ ಆಗಿದೆ. ಈಗ ಚಿತ್ರತಂಡದಿಂದ ಹೊಸ ಅಪ್​​ಡೇಟ್ ಒಂದು ಸಿಕ್ಕಿದೆ. ತಮಿಳಿನಾಡಿನಲ್ಲಿ ‘ಕಬ್ಜ’ ಹಂಚಿಕೆ ಹಕ್ಕು ಖ್ಯಾತ ನಿರ್ಮಾಣ ಸಂಸ್ಥೆ ‘ಲೈಕಾ ಪ್ರೊಡಕ್ಷನ್ಸ್​’ (Lyca Production) ಪಾಲಾಗಿದೆ. ಇದರಿಂದ ಚಿತ್ರತಂಡಕ್ಕೆ ದೊಡ್ಡ ಬಲ ಸಿಕ್ಕಂತೆ ಆಗಿದೆ. ಈ ಬಗ್ಗೆ ಲೈಕಾ ಪ್ರೊಡಕ್ಷನ್ಸ್ ಹಾಗೂ ಆರ್​. ಚಂದ್ರು ಕಡೆಯಿಂದ ಅಧಿಕೃತ ಘೋಷಣೆ ಆಗಿದೆ.

ಯಾವುದೇ ಸಿನಿಮಾ ಹೆಚ್ಚು ಜನರಿಗೆ ತಲುಪಬೇಕು ಎಂದರೆ ಅದಕ್ಕೆ ಹಂಚಿಕೆದಾರರು ತುಂಬಾನೇ ಮುಖ್ಯವಾಗುತ್ತಾರೆ. ಸಿನಿಮಾ ಜನಪ್ರಿಯ ಹಂಚಿಕೆದಾರರ ಕೈಗೆ ಸೇರಿದರೆ ಹೆಚ್ಚು ಪ್ರೇಕ್ಷಕರನ್ನು ತಲುಪಲು ಸಹಕಾರಿ ಆಗಲಿದೆ. ಈಗ ಲೈಕಾ ಪ್ರೊಡಕ್ಷನ್ಸ್ ಅವರು ‘ಕಬ್ಜ’ ಚಿತ್ರವನ್ನು ತಮಿಳುನಾಡಿನಾದ್ಯಂತ ಹಂಚಿಕೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಸಿನಿಮಾಗೆ ಬಲ ಸಿಕ್ಕಂತೆ ಆಗಿದೆ. ಕಾಲಿವುಡ್​ನಲ್ಲಿ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡುವ ಸೂಚನೆ ಸಿಕ್ಕಿದೆ.

ಇದನ್ನೂ ಓದಿ
Image
Kabzaa Movie: ‘ಕಬ್ಜ’ ಆಡಿಯೋ ರಿಲೀಸ್​ಗೆ ಶಿಡ್ಲಘಟ್ಟದಲ್ಲಿ ಸಿದ್ಧವಾಗ್ತಿದೆ ಬೃಹತ್​ ವೇದಿಕೆ; ಸರ್ವರಿಗೂ ಆಹ್ವಾನ ನೀಡಿದ ಚಿತ್ರತಂಡ
Image
Kabzaa: ನಾರ್ತ್​ ಅಮೆರಿಕದಲ್ಲಿ ಕನ್ನಡದ ‘ಕಬ್ಜ’ ಚಿತ್ರಕ್ಕೆ ಭಾರಿ ಡಿಮ್ಯಾಂಡ್​; ರಿಲೀಸ್​ಗೆ ಭರ್ಜರಿ ತಯಾರಿ
Image
‘ಒಟಿಟಿಯವರು ಕಣ್ಮುಚ್ಚಿಕೊಂಡು ಕಬ್ಜ ಹಕ್ಕು ಖರೀದಿಸಿಲ್ಲ; ಟೀಕಾಕಾರರಿಗೆ ಚಂದ್ರು ಉತ್ತರ
Image
Kabzaa: ಟ್ವಿಟರ್​ ಟ್ರೆಂಡಿಂಗ್​ನಲ್ಲಿ ‘ಪಠಾಣ್​’ ಚಿತ್ರವನ್ನೇ ಮೀರಿಸಿದ ‘ಕಬ್ಜ’: ಉಪ್ಪಿ-ಆರ್​. ಚಂದ್ರು ಕಮಾಲ್​

ಉಪೇಂದ್ರ, ಸುದೀಪ್ ಹಾಗೂ ಶಿವರಾಜ್​ಕುಮಾರ್ ಪರಿಚಯ ತಮಿಳುನಾಡಿನ ಮಂದಿಗೆ ಇದೆ. ಈ ಮೂವರು ಒಂದೇ ಸಿನಿಮಾದಲ್ಲಿ ನಟಿಸಿರುವ ಕಾರಣದಿಂದ ‘ಕಬ್ಜ’ ಚಿತ್ರದ ಬಗ್ಗೆ ಪರ ರಾಜ್ಯದವರೂ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಈ ಟ್ರೇಲರ್​ನಿಂದ ಸಿನಿಮಾ ಬಗ್ಗೆ ಇದ್ದ ನಿರೀಕ್ಷೆ ದುಪ್ಪಟ್ಟಾಗಿದೆ. ಆರ್. ಚಂದ್ರು ಅವರು ಸಿನಿಮಾನ ಹೇಗೆ ಕಟ್ಟಿಕೊಟ್ಟಿದ್ದಾರೆ ಎಂಬುದನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾದು ಕೂತಿದ್ದಾರೆ.

ಇದನ್ನೂ ಓದಿ: Kabzaa: ‘ಕಬ್ಜ’ ಚಿತ್ರದಲ್ಲಿ ಅನೂಪ್​ ರೇವಣ್ಣ ನಟನೆ; ಪಾತ್ರದ ಬಗ್ಗೆ ಬಾಯ್ಬಿಟ್ಟ ‘ಹೈಡ್​ ಆ್ಯಂಡ್​ ಸೀಕ್​’ ಹೀರೋ

ಲೈಕಾ ಪ್ರೊಡಕ್ಷನ್ ಬಗ್ಗೆ

ಸುಭಾಸ್ಕರನ್ ಅವರು ಲೈಕಾ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದವರು. 2014ರಲ್ಲಿ ರಿಲೀಸ್ ಆದ ‘ಕತ್ತಿ’ ಅವರ ನಿರ್ಮಾಣದಲ್ಲಿ ಮೂಡಿ ಬಂದ ಮೊದಲ ಸಿನಿಮಾ. ರಜನಿಕಾಂತ್ ಹಾಗೂ ಸುಭಾಸ್ಕರನ್ ಮಧ್ಯೆ ಒಳ್ಳೆಯ ಒಡನಾಟ ಇದೆ. ರಜನಿ ನಟನೆಯ ‘ದರ್ಬಾರ್​’ ಚಿತ್ರವನ್ನು ಲೈಕಾ ಸಂಸ್ಥೆ ನಿರ್ಮಾಣ ಮಾಡಿತ್ತು. ಇತ್ತೀಚೆಗೆ ಸುಭಾಸ್ಕರನ್ ಹುಟ್ಟುಹಬ್ಬದ ದಿನ ರಜನಿಕಾಂತ್ ಅವರ 170ನೇ ಚಿತ್ರ ಘೋಷಣೆ ಆಯಿತು. ಈ ಚಿತ್ರಕ್ಕೆ ಲೈಕಾ ಬಂಡವಾಳ ಹೂಡುತ್ತಿದೆ. ಕಳೆದ ವರ್ಷ ರಿಲೀಸ್ ಆಗಿ ಹಿಟ್ ಆದ ‘ಪೊನ್ನಿಯಿನ್ ಸೆಲ್ವನ್​’, ಈ ವರ್ಷ ತೆರೆಗೆ ಬರಲಿರುವ ‘ಪೊನ್ನಿಯಿನ್ ಸೆಲ್ವನ್​ 2’, ‘ಇಂಡಿಯನ್ 2’ ‘ಅಜಿತ್ ಕುಮಾರ್ 62’ ಚಿತ್ರಗಳಿಗೆ ಲೈಕಾ ಬಂಡವಾಳ ಹೂಡುತ್ತಿದೆ. ಇದರ ಜೊತೆ ಹಲವು ಚಿತ್ರಗಳನ್ನು ಹಂಚಿಕೆ ಮಾಡುತ್ತಿದೆ.

‘ಕಬ್ಜ’ ಚಿತ್ರದ ಬಗ್ಗೆ

‘ಕಬ್ಜ’ ಚಿತ್ರ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಪುನೀತ್ ರಾಜ್​ಕುಮಾರ್ ಬರ್ತ್​​ಡೇ ಪ್ರಯುಕ್ತ ಈ ಸಿನಿಮಾ ಮಾ.17ರಂದು ರಿಲೀಸ್ ಆಗುತ್ತಿದೆ. ಆರ್​. ಚಂದ್ರು ನಿರ್ಮಿಸಿ, ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಉಪೇಂದ್ರ, ಶಿವರಾಜ್​ಕುಮಾರ್, ಸುದೀಪ್, ಶ್ರೀಯಾ ಶರಣ್ ಮೊದಲಾದವರು ನಟಿಸಿದ್ದಾರೆ.

ಇದನ್ನೂ ಓದಿ: Kabzaa Movie: ‘ಕಬ್ಜ’ ಚಿತ್ರದಲ್ಲಿ ವಿಂಟೇಜ್​ ಕಾರುಗಳ ಕಾರುಬಾರು; ರೆಟ್ರೋ ಕಥೆಗೆ ಮೆರುಗು ತಂದ ವಾಹನಗಳು

Published On - 7:58 am, Wed, 8 March 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ