ಬಹುನಿರೀಕ್ಷಿತ ‘ಕಬ್ಜ’ (Kabzaa Movie) ಸಿನಿಮಾದಲ್ಲಿ ಉಪೇಂದ್ರ ಮತ್ತು ಕಿಚ್ಚ ಸುದೀಪ್ ನಟಿಸಿದ್ದಾರೆ. ಅವರ ಜೊತೆ ಅನೂಪ್ ರೇವಣ್ಣ (Anup Revanna) ಕೂಡ ಬಣ್ಣ ಹಚ್ಚಿದ್ದಾರೆ. ಅವರ ಪಾತ್ರ ರಗಡ್ ಮತ್ತು ರಫ್ ಆಗಿರಲಿದೆ ಎಂಬುದು ಈಗ ಗೊತ್ತಾಗಿದೆ. ಉಪೇಂದ್ರ ಅವರ ಬಲಗೈ ಬಂಟನಾಗಿ ಅನೂಪ್ ಪಾತ್ರ ಇರಲಿದೆ. ಆ ಪಾತ್ರದ ಹೆಸರು ಟಾರ್ಗೆಟ್. ಇಡೀ ಚಿತ್ರದಲ್ಲಿ ಅವರು ಉಪೇಂದ್ರ (Upendra) ಜೊತೆ ಕಾಣಿಸಿಕೊಳ್ಳುತ್ತಾರೆ. ‘ಮಾತು ಕಡಿಮೆ. ಆದರೆ ಕೈ ಮಾಡಲು ಮುಂದೆ ನುಗ್ಗುವ ಪಾತ್ರ ನನ್ನದು’ ಎಂದು ಅನೂಪ್ ರೇವಣ್ಣ ಹೇಳಿದ್ದಾರೆ. ‘ಹೈಡ್ ಆ್ಯಂಡ್ ಸೀಕ್’ ಸಿನಿಮಾದಲ್ಲೂ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ‘ಕಬ್ಜ’ ತೆರೆಕಂಡ ಬಳಿಕ ಆ ಸಿನಿಮಾ ಬಿಡುಗಡೆ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.