ಸಿದ್ದರಾಮಯ್ಯ ಸಿಎಮ್ ಆಗಿದ್ದಾಗ ಅತಿಥಿಗಳ ಕಾಫಿ-ತಿಂಡಿಗಾಗಿ ರೂ. 200 ಕೋಟಿ ಖರ್ಚು ಮಾಡಲಾಗಿದೆ: ಎನ್ ಆರ್ ರಮೇಶ್, ಬಿಜೆಪಿ ಮುಖಂಡ

ಸಿದ್ದರಾಮಯ್ಯ ಸಿಎಮ್ ಆಗಿದ್ದಾಗ ಅತಿಥಿಗಳ ಕಾಫಿ-ತಿಂಡಿಗಾಗಿ ರೂ. 200 ಕೋಟಿ ಖರ್ಚು ಮಾಡಲಾಗಿದೆ: ಎನ್ ಆರ್ ರಮೇಶ್, ಬಿಜೆಪಿ ಮುಖಂಡ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Mar 07, 2023 | 11:46 AM

ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಅವರನ್ನು ಕಾಣಲೆಂದು ಕಚೇರಿಗೆ ಬರುತ್ತಿದ್ದ ಅತಿಥಿಗಳಿಗೆ ಉಪಚಾರದ ಲೆಕ್ಕ ತೋರಿಸಿ ಪ್ರತಿದಿನ ರೂ. 14 ಲಕ್ಷ ಖರ್ಚು ಮಾಡಲಾಗಿದೆ ಎಂದು ರಮೇಶ್ ಹೇಳಿದ್ದಾರೆ.

ಬೆಂಗಳೂರು: ಬಿಜೆಪಿ ನಾಯಕ ಮತ್ತು ಮಾಜಿ ಕಾರ್ಪೋರೇಟರ್ ಎನ್ ಆರ್ ರಮೇಶ್ (NR Ramesh) ಹಗರಣಗಳನ್ನು ಬಯಲು ಮಾಡುವಲ್ಲಿ ಸಿದ್ಧಹಸ್ತರು. ಈ ಬಾರಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಮೇಲೆ ರೂ. 200 ಕೋಟಿ ಹಗರಣದ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಅವರನ್ನು ಕಾಣಲೆಂದು ಕಚೇರಿಗೆ (CMO) ಬರುತ್ತಿದ್ದ ಅತಿಥಿಗಳಿಗೆ ಕಾಫಿ-ಬಿಸ್ಕತ್ತು ತಿಂಡಿ-ಉಪಚಾರದ ಲೆಕ್ಕ ತೋರಿಸಿ ಪ್ರತಿದಿನ ರೂ. 14 ಲಕ್ಷ ಖರ್ಚು ಮಾಡಲಾಗಿದೆ ಮತ್ತು ಕೇವಲ ಈ ಬಾಬತ್ತಿನಲ್ಲೇ 200 ಕೋಟಿ ರೂ. ಗಳಿಗೂ ಹೆಚ್ಚಿನ ಹಣವನ್ನು ಲೂಟಿ ಮಾಡಲಾಗಿದೆ ಎಂದು ರಮೇಶ್ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 07, 2023 11:45 AM