Pancharatna Yatre; ಸಿದ್ದರಾಮಯ್ಯ ಮತ್ತು ಶ್ರೀರಾಮುಲುರಿಂದ ಬಾದಾಮಿ ಜನರಿಗೆ ಯಾವುದೇ ಉಪಯೋಗವಾಗಿಲ್ಲ: ಹೆಚ್ ಡಿ ಕುಮಾರಸ್ವಾಮಿ

Pancharatna Yatre; ಸಿದ್ದರಾಮಯ್ಯ ಮತ್ತು ಶ್ರೀರಾಮುಲುರಿಂದ ಬಾದಾಮಿ ಜನರಿಗೆ ಯಾವುದೇ ಉಪಯೋಗವಾಗಿಲ್ಲ: ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 07, 2023 | 11:03 AM

ಹಿಂದಿನ ಬಾರಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಮತ್ತು ಬಿ ಶ್ರೀರಾಮುಲು ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಬಾದಾಮಿಗೆ ಬಂದಿದ್ದರು ಎಂದು ಕುಮಾರಸ್ವಾಮಿ ಹೇಳಿದರು

ಬಾಗಲಕೋಟೆ: ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆ ಇಂದು ಬಾಗಲಕೋಟೆ ಜಿಲ್ಲೆ ತಲುಪಿದ್ದು ಸಿದ್ದ್ದರಾಮಯ್ಯನವರ ಕ್ಷೇತ್ರವಾಗಿರುವ ಬಾದಾಮಿಯಲ್ಲಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದರು. ಹನುಮಂತಪ್ಪ ಎನ್ನುವವರನ್ನು ಪಕ್ಷದ ಅಭ್ಯರ್ಥಿಯೆಂದು ಘೋಷಿಸಿದ ಕುಮಾರಸ್ವಾಮಿಯವರು ತಮ್ಮ ಅಭ್ಯರ್ಥಿ ಬಾದಾಮಿ ಜನರ ಮನೆ ಮಗನಂತಿರುವುದರಿಂದ ಗೆಲ್ಲಿಸಬೇಕೆಂದು ಆಗ್ರಹಿಸಿದರು. ಹಿಂದಿನ ಬಾರಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ (Siddaramaiah) ಮತ್ತು ಬಿ ಶ್ರೀರಾಮುಲು (B Sriramulu) ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಬಾದಾಮಿಗೆ ಬಂದಿದ್ದರು, ಅಂಥವರನ್ನು ನೆಚ್ಚಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 07, 2023 10:12 AM