ದೊಡ್ಮನೆ ಮನೆ ಮಕ್ಳು ಎಂಬ ವಿಶೇಷಣ ಬೇಡ, ಎಲ್ಲರಂತೆ ಅವರೂ ಕಷ್ಟಪಡುತ್ತಿದ್ದಾರೆ: ಯುವ ಅತ್ತೆ ಪೂರ್ಣಿಮಾ
ಯುವ ರಾಜ್ಕುಮಾರ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಬಗ್ಗೆ ಅವರ ಅತ್ತೆ, ರಾಜ್ಕುಮಾರ್ ಪುತ್ರಿ ಪೂರ್ಣಿಮಾ ಮಾತನಾಡಿದ್ದಾರೆ.
ಯುವ ರಾಜ್ಕುಮಾರ್ (Yuva Rajkumar) ಚಿತ್ರರಂಗ ಪ್ರವೇಶಿಸುತ್ತಿರುವ ಕುರಿತು ಮಾತನಾಡಿರುವ ಡಾ ರಾಜ್ಕುಮಾರ್ (Dr Rajkumar) ಪುತ್ರಿ ಪೂರ್ಣಿಮಾ (Poornima Ramkumar), ”ಅವನು ಈ ಬಗ್ಗೆ ಬಹು ಸಮಯ ಯೋಚಿಸಿ ಚರ್ಚಿಸಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾನೆ. ದೊಡ್ಮನೆ ಮಕ್ಕಳು ಎಂದು ವಿಶೇಷತೆ ಏನಿಲ್ಲ, ಎಲ್ಲರೂ ಕಷ್ಟಪಡುತ್ತಿದ್ದಾರೆ ಅಂತೆಯೇ ಅವನೂ ಸಹ ಕಷ್ಟಪಟ್ಟು ಸೂಕ್ತ ತಯಾರಿ ನಡೆಸಿಯೇ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾನೆ. ಎಲ್ಲ ಕಲಾವಿದರನ್ನು ಪ್ರೀತಿಸಿ ಬೆಳೆಸುವಂತೆ ಅವನನ್ನೂ ಬೆಳೆಸಿ” ಎಂದು ಪೂರ್ಣಿಮಾ ಮನವಿ ಮಾಡಿದ್ದಾರೆ. ಪೂರ್ಣಿಮಾರ ಇಬ್ಬರು ಮಕ್ಕಳಾದ ಧನ್ಯಾ ರಾಮ್ಕುಮಾರ್ ಹಾಗೂ ಧೀರೇನ್ ರಾಮ್ಕುಮಾರ್ ಸಹ ಚಿತ್ರರಂಗ ಪ್ರವೇಶಿಸಿದ್ದಾರೆ.
Published on: Mar 06, 2023 10:56 PM
Latest Videos