BSY eyes Lingayat votes: ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಲೂ ಬಿಎಸ್ ಯಡಿಯೂರಪ್ಪ ಭಾರೀ ಜನಪ್ರಿಯ ಬಿಜೆಪಿ ನಾಯಕ
ಸಹಸ್ರಾರು ಸಂಖ್ಯೆಯಲ್ಲಿ ಜನ ರೋಡ್ ಶೋನಲ್ಲಿ ನೆರೆದಿರುವುದು ಅವರ ಜನಪ್ರಿಯತೆಗೆ ಸಾಕ್ಷಿ. ಈ ಭಾಗದಲ್ಲಿ ಲಂಬಾಣಿ ಸಮುದಾಯದವರು ಸಹ ಆಪಾರ ಸಂಖ್ಯೆಯಲ್ಲಿದ್ದು ಅವರನ್ನು ಸಹ ವಿಡಿಯೋದಲ್ಲಿ ನೋಡಬಹುದು.
ಕಲಬುರಗಿ: ರಾಜ್ಯ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪನವರು (BS Yediyurappa) ಚುನಾವಣಾ ರಾಜಕೀಯದಿಂದ (electoral politics) ದೂರವಾದರೂ ಜನಪ್ರಿಯತೆ ಮಾತ್ರ ಕಿಂಚಿತ್ತೂ ಕಡಮೆಯಾಗಿಲ್ಲ ಮಾರಾಯ್ರೇ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ (Kalyana Karnataka region) ಲಿಂಗಾಯತರು ಆಧಿಕ ಮತ್ತು ನಿರ್ಣಾಯಕ ಮತದಾರರಾಗಿರುವುದರಿಂದ ಅವರು ಈ ಪ್ರದೇಶ ಮೇಲೆ ಗಮನ ಕೇಂದ್ರೀಕರಿಸಿರುವುದು ಸತ್ಯ. ಜಿಲ್ಲೆಯ ಸಿಮೆಂಟ್ ಖನಿಜವೆನಿಸಿಕೊಂಡಿರುವ ಶಹಾಬಾದ್ ಪಟ್ಟಣದಲ್ಲಿ ಯಡಿಯೂರಪ್ಪ ಇಂದು ರೋಡ್ ಶೋ ನಡೆಸಿದರು. ಸಹಸ್ರಾರು ಸಂಖ್ಯೆಯಲ್ಲಿ ಜನ ರೋಡ್ ಶೋನಲ್ಲಿ ನೆರೆದಿರುವುದು ಅವರ ಜನಪ್ರಿಯತೆಗೆ ಸಾಕ್ಷಿ. ಈ ಭಾಗದಲ್ಲಿ ಲಂಬಾಣಿ ಸಮುದಾಯದವರು ಸಹ ಆಪಾರ ಸಂಖ್ಯೆಯಲ್ಲಿದ್ದು ಅವರನ್ನು ಸಹ ವಿಡಿಯೋದಲ್ಲಿ ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 07, 2023 02:03 PM
Latest Videos