Holi 2023 Celebration: ಬಣ್ಣದೋಕುಳಿಯಲ್ಲಿ ಮಿಂದೆದ್ದ ಕುಂದಾನಗರಿ ನಾರಿಯರು
ಶಾಸಕ ಅಭಯ್ ಪಾಟೀಲ್ ಆಯೋಜನೆ ಮಾಡಿರುವ ಹೋಳಿ ಮಿಲನ್ ಕಾರ್ಯಕ್ರಮದಲ್ಲಿ ಕಾರಂಜಿ ನೀರು, ಬಣ್ಣದಲ್ಲಿ ಕುಂದಾನಗರಿ ಜನ ಮಿಂದೇಳಿದ್ದಾರೆ.
ಬೆಳಗಾವಿ: ಬೆಳಗಾವಿ ನಗರದಲ್ಲಿ ಅದ್ದೂರಿಯಾಗಿ ಹೋಳಿ ಹಬ್ಬ ಆಚರಣೆ ಮಾಡಲಾಗಿದೆ. ಬೆಳಗಾವಿಯ ಮಿಲಿನಿಯಂ ಗಾರ್ಡನ್ ಪಕ್ಕದಲ್ಲಿ ರಂಗೋತ್ಸವ ಆಚರಣೆ ಮಾಡಲಾಗುತ್ತಿದೆ. ಸಾವಿರಾರು ಮಹಿಳೆಯರು ಡಿಜೆ ಹಾಡುಗಳಿಗೆ ಸಖತ್ ಡ್ಯಾನ್ಸ್ ಮಾಡುತ್ತ ಬಣ್ಣದಲ್ಲಿ ಮಿಂದೆದ್ದಿದ್ದಾರೆ.
ಯುವತಿಯರು, ಮಹಿಳೆಯರು ಸಕ್ಕತ್ ಸ್ಟೆಪ್ಸ್ ಹಾಕಿ ಸಂಭ್ರಮಿಸಿದ್ದಾರೆ. ಶಾಸಕ ಅಭಯ್ ಪಾಟೀಲ್ ಆಯೋಜನೆ ಮಾಡಿರುವ ಹೋಳಿ ಮಿಲನ್ ಕಾರ್ಯಕ್ರಮದಲ್ಲಿ ಕಾರಂಜಿ ನೀರು, ಬಣ್ಣದಲ್ಲಿ ಕುಂದಾನಗರಿ ಜನ ಮಿಂದೇಳಿದ್ದಾರೆ.
Published on: Mar 07, 2023 03:02 PM
Latest Videos