ಸಿದ್ದೇಶ್ವರ ಶ್ರೀಗಳ (Siddeshwar Swamiji) ಅಗಲಿಕೆಯಿಂದ ಅಪಾರ ಭಕ್ತ ಸಮುದಾಯಕ್ಕೆ ನೋವಾಗಿದೆ. ಅವರ ಹಿತವಚನಗಳನ್ನು ಮೆಲುಕು ಹಾಕಲಾಗುತ್ತಿದೆ. ನಟ ಡಾಲಿ ಧನಂಜಯ್ (Daali Dhananjay) ಕೂಡ ಸಿದ್ದೇಶ್ವರ ಗುರೂಜಿ ಬಗ್ಗೆ ಮಾತನಾಡಿದ್ದಾರೆ. ಶ್ರೀಗಳ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು. ‘ಸಿದ್ದೇಶ್ವರ ಶ್ರೀಗಳ ಪ್ರವಚನಕ್ಕೆ ಸಾವಿರಾರು ಜನರು ಯಾಕೆ ಸೇರುತ್ತಿದ್ದರು? ಯಾಕೆಂದರೆ ಜಗತ್ತಿನ ಎಲ್ಲ ಫಿಲಾಸಫಿಯನ್ನು ತಿಳಿದುಕೊಂಡಿದ್ದ ಅವರು ನಮಗೆ ಅರ್ಥ ಆಗುವ ರೀತಿಯಲ್ಲಿ ಸರಳವಾಗಿ ಹೇಳಿಕೊಡುತ್ತಿದ್ದರು. ಆ ಕಾರಣದಿಂದ ಜಾತಿ-ಮತ ಮೀರಿ ಅವರಿಗೆ ಭಕ್ತರು ಇದ್ದರು. ನುಡಿದಂತೆ ನಡೆ ಎಂಬ ಮಾತಿಗೆ ಅವರ ಇಡೀ ಬದುಕು ಉದಾಹರಣೆ ಆಗಿತ್ತು’ ಎಂದು ಧನಂಜಯ್ (Dhananjaya) ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.