Siddeshwara Swamiji Funeral: ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಕಿಲೋ ಮೀಟರ್ಗಟ್ಟಲೇ ಕ್ಯೂನಲ್ಲಿ ನಿಂತು ಕಾಯುತ್ತಿರುವ ಭಕ್ತರು
ವಿಜಯಪುರದ ಇತಿಹಾಸದಲ್ಲೇ ಕಂಡು ಕೇಳರಿಯದ ಭಕ್ತಗಣ ಶ್ರೀಗಳ ಅಂತಿಮ ದರ್ಶನಕ್ಕೆ ಆಗಮಿಸಿದೆ. ಕಿಲೋ ಮೀಟರ್ಗಟ್ಟಲೇ ಕ್ಯೂ.
ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ(82) ಅಸ್ತಂಗತರಾಗಿದ್ದಾರೆ. ಶ್ರೀಗಳ ಅಂತಿಮ ದರ್ಶನಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ. ಮಧ್ಯಾಹ್ನ 3 ಗಂಟೆ ಬದಲು ಸಂಜೆಯವರೆಗೂ ಅಂತಿಮ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಲು ಮುಂದಾಗಿದೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಜೊತೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದುವರೆಗೂ 12 ಲಕ್ಷಕ್ಕೂ ಹೆಚ್ಚು ಜನರು ಅಂತಿಮ ದರ್ಶನ ಪಡೆದಿದ್ದಾರೆ.
ವಿಜಯಪುರದ ಇತಿಹಾಸದಲ್ಲೇ ಕಂಡು ಕೇಳರಿಯದ ಭಕ್ತಗಣ ಶ್ರೀಗಳ ಅಂತಿಮ ದರ್ಶನಕ್ಕೆ ಆಗಮಿಸಿದೆ. ಕಿಲೋ ಮೀಟರ್ಗಟ್ಟಲೇ ಕ್ಯೂ.. ಕಣ್ಣಾಯಿಸಿದಷ್ಟು ಜನರು ಕಂಡುಬರುತ್ತಿದ್ದಾರೆ. ಮಕ್ಕಳು, ಮಹಿಳೆಯರು & ವೃದ್ಧರಿಂದ ಸಂತನಿಗೆ ನಮನ ಸಲ್ಲಿಸಲಾಗುತ್ತಿದೆ. ಜ್ಞಾನಯೋಗಾಶ್ರಮ ಅಪಾರ ಭಕ್ತರಿಂದ ತುಂಬಿ ಹೋಗಿದೆ. ಮಹಾಸಂತನಿಗೆ ಕಣ್ಣೀರುಡುತ್ತಲೇ ಭಕ್ತರು ನಮಿಸುತ್ತಿದ್ದಾರೆ. ಟಿವಿ9 ಡ್ರೋನ್ ಕಣ್ಣಲ್ಲಿ ಭಕ್ತ ಪ್ರವಾಹದ ದೃಶ್ಯ ಸೆರೆಯಾಗಿದೆ.

