Rachita Ram: ಡಾಲಿ ಧನಂಜಯ್​ ಅಣ್ಣನ ಮಗಳಿಗೆ ರಚಿತಾ ಹೆಸರು; ಆ ಘಟನೆ ನೆನೆದ ‘ಡಿಂಪಲ್​ ಕ್ವೀನ್​’

Daali Dhananjay | Monsoon Raga: ‘ಮಾನ್ಸೂನ್​ ರಾಗ’ ಸಿನಿಮಾದಲ್ಲಿ ರಚಿತಾ ರಾಮ್​ ಮತ್ತು ಡಾಲಿ ಧನಂಜಯ್​ ಅವರು ಜೊತೆಯಾಗಿ ನಟಿಸಿದ್ದಾರೆ. ಹಾಡುಗಳ ಮೂಲಕ ಈ ಚಿತ್ರ ನಿರೀಕ್ಷೆ ಹುಟ್ಟುಹಾಕಿದೆ.

Rachita Ram: ಡಾಲಿ ಧನಂಜಯ್​ ಅಣ್ಣನ ಮಗಳಿಗೆ ರಚಿತಾ ಹೆಸರು; ಆ ಘಟನೆ ನೆನೆದ ‘ಡಿಂಪಲ್​ ಕ್ವೀನ್​’
| Updated By: ಮದನ್​ ಕುಮಾರ್​

Updated on: Aug 10, 2022 | 1:02 PM

ನಟಿ ರಚಿತಾ ರಾಮ್​ (Rachita Ram) ಅವರು ಕನ್ನಡ ಚಿತ್ರರಂಗದಲ್ಲಿ ಸಖತ್​ ಬ್ಯುಸಿ ಆಗಿದ್ದಾರೆ. ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಈಗ ಅವರು ಡಾಲಿ ಧನಂಜಯ್ ಜೊತೆ ನಟಿಸಿರುವ ‘ಮಾನ್ಸೂನ್​ ರಾಗ’ (Monsoon Raga) ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಒಂದು ಘಟನೆಯನ್ನು ಡಾಲಿ ಮತ್ತು ರಚಿತಾ ನೆನಪು ಮಾಡಿಕೊಂಡರು. ಧನಂಜಯ್​ (Daali Dhananjay) ಅವರ ಅಣ್ಣನ ಮಗಳಿಗೆ ರಚಿತಾ ಎಂದು ಹೆಸರು ಇಡಲಾಗಿದೆ. ಈ ಹಿಂದೆ ‘ಬಡವ ರಾಸ್ಕಲ್​’ ಚಿತ್ರದ ಪ್ರೀ-ರಿಲೀಸ್ ಇವೆಂಟ್​​ ವೇಳೆ ಆ ಬಾಲಕಿಯನ್ನು ಭೇಟಿಯಾಗಿದ್ದರ ಬಗ್ಗೆ ರಚಿತಾ ರಾಮ್​ ಮಾತನಾಡಿದ್ದಾರೆ.

Follow us