Sign In

By signing in or creating an account, you agree with Associated Broadcasting Company's Terms & Conditions and Privacy Policy.

Dasara Movie Collection: 100 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ ‘ದಸರಾ’; ಮೊದಲ ಬಾರಿ ಶತಕೋಟಿ ಕ್ಲಬ್​ ಸೇರಿದ ನಾನಿ

‘ದಸರಾ’ ಸಿನಿಮಾ ಒಂದು ವಾರಗಳ ಕಾಲ ಭರ್ಜರಿ ಪ್ರದರ್ಶನ ಕಂಡಿದ್ದು, ಶತಕೋಟಿ ರೂಪಾಯಿ ಕ್ಲಬ್​ ಸೇರಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ.

Dasara Movie Collection: 100 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ ‘ದಸರಾ’; ಮೊದಲ ಬಾರಿ ಶತಕೋಟಿ ಕ್ಲಬ್​ ಸೇರಿದ ನಾನಿ
ನಾನಿ
Follow us
ಮದನ್​ ಕುಮಾರ್​
|

Updated on:Apr 06, 2023 | 11:31 AM

ನಟ ನಾನಿ (Nani) ಅವರು ಗೆಲುವಿನ ನಗೆ ಬೀರಿದ್ದಾರೆ. ಅವರು ನಟಿಸಿರುವ ‘ದಸರಾ’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮಾರ್ಚ್​ 30ರಂದು ಬಿಡುಗಡೆಯಾದ ಈ ಚಿತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ. ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಿರುವ ‘ದಸರಾ’ ಚಿತ್ರ (Dasara Movie) ಬರೋಬ್ಬರಿ 100 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ವಿಶ್ವಾದ್ಯಂತ ಈ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಭರ್ಜರಿ ಗೆಲುವು ಕಂಡಿರುವ ನಾನಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಈ ಸಿನಿಮಾವನ್ನು ನಿರ್ದೇಶನ ಮಾಡಿರುವ ಒಡೆಲಾ ಶ್ರೀಕಾಂತ್​ ಅವರ ಬೇಡಿಕೆ ಹೆಚ್ಚಾಗಿದೆ. ಟಾಲಿವುಡ್​ನಲ್ಲಿ ಅವರು ಬಹುಬೇಡಿಕೆಯ ನಿರ್ದೇಶಕನಾಗಿ ಹೊರಹೊಮ್ಮಿದ್ದಾರೆ.

‘ದಸರಾ’ ಸಿನಿಮಾದಲ್ಲಿ ನಟ ನಾನಿ ಅವರು ರಗಡ್​ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲು ಈ ಚಿತ್ರದ ಟ್ರೇಲರ್​ ಬಿಡುಗಡೆ ಆದಾಗ ಎಲ್ಲರೂ ‘ಪುಷ್ಪ’ ಸಿನಿಮಾಗೆ ಹೋಲಿಕೆ ಮಾಡಿದರು. ಆದರೆ ಸಿನಿಮಾ ರಿಲೀಸ್​ ಆದಾಗ ಆ ಹೋಲಿಕೆ ಮಾಯವಾಯ್ತು. ಇದು ಬೇರೆಯದೇ ಕಥೆಯನ್ನು ಹೊಂದಿದೆ ಎಂಬುದು ಪ್ರೇಕ್ಷಕರಿಗೆ ತಿಳಿಯಿತು. ಒಂದು ವಾರಗಳ ಕಾಲ ಈ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿದ್ದು, ಶತಕೋಟಿ ರೂಪಾಯಿ ಕ್ಲಬ್​ ಸೇರಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ.

ಇದನ್ನೂ ಓದಿ: ನಾನಿ ನಟನೆಯ ‘ದಸರಾ’ ತಂಡಕ್ಕೆ ಬಂಪರ್ ಗಿಫ್ಟ್​; ಸಿಕ್ತು ಬಿಎಂಡಬ್ಲ್ಯೂ ಕಾರ್, ಚಿನ್ನದ ನಾಣ್ಯ

ಇದನ್ನೂ ಓದಿ
Image
Dasara Movie Teaser: ರಾಜಮೌಳಿ ಮೆಚ್ಚಿದ ‘ದಸರಾ’ ಟೀಸರ್​; ನಾನಿ ರಗಡ್​ ಅವತಾರಕ್ಕೆ ಅಭಿಮಾನಿಗಳ ಚಪ್ಪಾಳೆ
Image
Dasara Movie Teaser: ‘ದಸರಾ’ ಟೀಸರ್​ ಝಲಕ್​ ತೋರಿಸ್ತಾರೆ ರಕ್ಷಿತ್​ ಶೆಟ್ಟಿ; ನಾನಿ ಚಿತ್ರಕ್ಕೆ ಸ್ಟಾರ್​ ನಟರ ಸಾಥ್​
Image
‘ಕನ್ನಡಕ್ಕೆ ಡಬ್​ ಮಾಡಲ್ಲ, ಕನ್ನಡಿಗರು ತೆಲುಗಿನಲ್ಲೇ ನೋಡ್ತಾರೆ’; ಟಾಲಿವುಡ್​​ ನಟ ನಾನಿ ಹೇಳಿಕೆಗೆ ಕರುನಾಡು ಗರಂ
Image
ಯಾವ ಚಿತ್ರವೂ ಗೆಲ್ಲುತ್ತಿಲ್ಲ, ಆದ್ರೂ ಈ ನಟಿಗೆ ಸಿಕ್ತಿದೆ ಒಳ್ಳೆಯ ಆಫರ್​; ಇಲ್ಲಿದೆ ಕೀರ್ತಿ ಸುರೇಶ್​ ಸೀಕ್ರೇಟ್​

ನಾನಿ ಅವರು ಟಾಲಿವುಡ್​ನಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಅನೇಕ ಒಳ್ಳೆಯ ಸಿನಿಮಾಗಳನ್ನು ಅವರು ನೀಡಿದ್ದಾರೆ. ಹಾಗಿದ್ದರೂ ಕೂಡ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಿಕ್ಕಿರಲಿಲ್ಲ. ಈಗ ‘ದಸರಾ’ ಚಿತ್ರದ ಮೂಲಕ ಅವರು ದೊಡ್ಡ ಮಟ್ಟದಲ್ಲಿ ಗೆದ್ದು ಬೀಗಿದ್ದಾರೆ. ‘ಈ ಗೆಲುವಿಗೆ ನಾನಿ ಅರ್ಹರು’ ಎಂದು ಫ್ಯಾನ್ಸ್​ ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: Dasara Movie: ‘ಸೂಪರ್ ಆ್ಯಕ್ಷನ್, ನಾನಿ ನಟನೆಗೆ ಭೇಷ್’; ‘ದಸರಾ’ ಸಿನಿಮಾ ನೋಡಿ ಫ್ಯಾನ್ಸ್ ಖುಷ್

ನಾನಿ ವೃತ್ತಿಜೀವನದಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ ಮೊದಲ ಸಿನಿಮಾ ಎಂಬ ಕೀರ್ತಿ ‘ದಸರಾ’ ಚಿತ್ರಕ್ಕೆ ಸಲ್ಲುತ್ತದೆ. ವಿಶ್ವಾದ್ಯಂತ ಈ ಚಿತ್ರ ಶತಕೋಟಿ ರೂಪಾಯಿ ಗಳಿಸಿದೆ ಎಂಬುದನ್ನು ತಿಳಿಸಲು ನಿರ್ಮಾಣ ಸಂಸ್ಥೆಯಾದ ಎಸ್​ಎಲ್​ವಿ ಸಿನಿಮಾಸ್​ ಟ್ವೀಟ್​ ಮಾಡಿದೆ.

ಖ್ಯಾತ ನಿರ್ದೇಶಕ ರಾಜಮೌಳಿ ಕೂಡ ‘ದಸರಾ’ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ‘ನಿರ್ದೇಶಕ ಶ್ರೀಕಾಂತ್​ ಒಡೆಲಾ ರಗಡ್​ ಪಾತ್ರಗಳ ಜೊತೆಗೆ ಹೃದಯಸ್ಪರ್ಶಿಯಾದ ಪ್ರೇಮಕಥೆನ್ನು ಹೇಳಿದ್ದಾರೆ. ನಾನಿ ವೃತ್ತಿಜೀವನದಲ್ಲಿನ ಅತ್ಯುತ್ತಮ ಪರ್ಫಾರ್ಮೆನ್ಸ್​ ಈ ಸಿನಿಮಾದಲ್ಲಿದೆ. ಕೀತೀ ಸುರೇಶ್​ ನಟನೆ ಕೂಡ ಚೆನ್ನಾಗಿದೆ’ ಎಂದು ಅವರು ಹೊಗಳಿದ್ದಾರೆ. ಅಲ್ಲಿದೇ ಇಡೀ ತಂಡಕ್ಕೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:31 am, Thu, 6 April 23

ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
VIDEO: ಆಂಬ್ಯುಲೆನ್ಸ್​ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!
VIDEO: ಆಂಬ್ಯುಲೆನ್ಸ್​ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!
ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ ಕಾರು ಜಸ್ಟ್​ ಮಿಸ್, ಬೈಕ್ ಹೋಗೇಬಿಡ್ತು
ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ ಕಾರು ಜಸ್ಟ್​ ಮಿಸ್, ಬೈಕ್ ಹೋಗೇಬಿಡ್ತು