AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dasara Movie Teaser: ರಾಜಮೌಳಿ ಮೆಚ್ಚಿದ ‘ದಸರಾ’ ಟೀಸರ್​; ನಾನಿ ರಗಡ್​ ಅವತಾರಕ್ಕೆ ಅಭಿಮಾನಿಗಳ ಚಪ್ಪಾಳೆ

Dasara Movie | Nani: ‘ದಸರಾ’ ಟೀಸರ್​ನಲ್ಲಿ ಅದ್ದೂರಿ ಆ್ಯಕ್ಷನ್​ ದೃಶ್ಯಗಳು ಗಮನ ಸೆಳೆಯುತ್ತಿವೆ. ನಾನಿ ಅಭಿಮಾನಿಗಳಿಗೆ ಮಾತ್ರವಲ್ಲದೇ ರಾಜಮೌಳಿ ಅವರಿಗೂ ಈ ಟೀಸರ್​ ತುಂಬ ಇಷ್ಟ ಆಗಿದೆ.

Dasara Movie Teaser: ರಾಜಮೌಳಿ ಮೆಚ್ಚಿದ ‘ದಸರಾ’ ಟೀಸರ್​; ನಾನಿ ರಗಡ್​ ಅವತಾರಕ್ಕೆ ಅಭಿಮಾನಿಗಳ ಚಪ್ಪಾಳೆ
ನಾನಿ
Follow us
ಮದನ್​ ಕುಮಾರ್​
|

Updated on: Jan 30, 2023 | 6:31 PM

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ದಸರಾ’ (Dasara Movie) ಕೂಡ ಇದೆ. ಟಾಲಿವುಡ್​ ನಟ ನಾನಿ ಅವರು ಈ ಸಿನಿಮಾದಲ್ಲಿ ಭಿನ್ನ ಗೆಟಪ್​ ತಾಳಿದ್ದಾರೆ. ಹಲವು ಕಾರಣಗಳಿಂದ ಈ ಚಿತ್ರ ನಿರೀಕ್ಷೆ ಹುಟ್ಟುಹಾಕಿದೆ. ಮಾರ್ಚ್ 30ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ನಾನಿ (Nani) ಅವರಿಗೆ ಜೋಡಿಯಾಗಿ ಕೀರ್ತಿ ಸುರೇಶ್​ ಅಭಿನಯಿಸಿದ್ದಾರೆ. ‘ದಸರಾ’ ಸಿನಿಮಾ ಹೇಗಿರಲಿದೆ ಎಂಬುದರ ಝಲಕ್​ ತೋರಿಸಲು ಟೀಸರ್​ ರಿಲೀಸ್​ ಮಾಡಲಾಗಿದೆ. ತುಂಬ ರಗಡ್​ ಆಗಿ ಮೂಡಿಬಂದಿರುವ ಈ ಟೀಸರ್​ ಕಂಡು ಎಸ್​ಎಸ್​ ರಾಜಮೌಳಿ ಅವರು ಮೆಚ್ಚುಗೆ ಸೂಚಿಸಿದ್ದಾರೆ. ನಾನಿ ಅಭಿಮಾನಿಗಳು ವಾವ್​ ಎನ್ನುತ್ತಿದ್ದಾರೆ. ಸದ್ಯ ‘ದಸರಾ’ ಟೀಸರ್​ (Dasara Movie Teaser) ವೈರಲ್ ಆಗಿದ್ದು, ಸಿನಿಪ್ರಿಯರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ನಾನಿ ಅವರು ಈಗಾಗಲೇ ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಅಭಿಮಾನಿಗಳು ಪ್ರೀತಿಯಿಂದ ಅವರನ್ನು ‘ನ್ಯಾಚುರಲ್ ಸ್ಟಾರ್’ ಎಂದು ಕರೆಯುತ್ತಾರೆ. ‘ದಸರಾ’ ಸಿನಿಮಾ ನಾನಿ ಪಾಲಿಗೆ ತುಂಬ ಸ್ಪೆಷಲ್​ ಆಗಲಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈಗ ಟೀಸರ್​ ರಿಲೀಸ್​ ಮಾಡಲಾಗಿದೆ.

ಇದನ್ನೂ ಓದಿ
Image
SS Rajamouli: ​ಅಮೆರಿಕಾದಲ್ಲಿ ‘ಆರ್​ಆರ್​ಆರ್’ಗೆ ವಿಶೇಷ ಮನ್ನಣೆ: ರಾಜಮೌಳಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ
Image
Rajamouli: ‘ಸ್ಟಾರ್​ ವಾರ್ಸ್​’ ನಿರ್ದೇಶಕನ ಭೇಟಿ ಆದ ರಾಜಮೌಳಿ; ಹಾಲಿವುಡ್​ ಅಂಗಳದಲ್ಲೂ ಭರ್ಜರಿ ಹವಾ
Image
ರಾಜಮೌಳಿ ಕಾಲಿಗೆ ನಮಸ್ಕರಿಸಿದ ರಣಬೀರ್ ಕಪೂರ್; ಪಬ್ಲಿಸಿಟಿ ಸ್ಟಂಟ್ಸ್ ಎಂದ ನೆಟ್ಟಿಗರು
Image
ಕೊನೇ ಕ್ಷಣದಲ್ಲಿ ಅಮಿತ್ ಶಾ ಭೇಟಿಯಿಂದ ಹಿಂದೆ ಸರಿದ ರಾಜಮೌಳಿ? ಇದಕ್ಕಿದೆ ದೊಡ್ಡ ಕಾರಣ

ಇದನ್ನೂ ಓದಿ: RGV Twitter: ‘ರಾಜಮೌಳಿ ಹತ್ಯೆಗೆ ಸಂಚು ನಡೆದಿದೆ, ತಂಡ ಸಿದ್ಧವಾಗಿದೆ’; ರಾಮ್​ ಗೋಪಾಲ್​ ವರ್ಮಾ ಹೇಳಿಕೆ

ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ‘ದಸರಾ’ ಟೀಸರ್​ ಅನಾವರಣ ಮಾಡಿದ್ದಾರೆ. ಅದೇ ರೀತಿ, ಹಿಂದಿಯಲ್ಲಿ ಶಾಹಿದ್ ಕಪೂರ್, ತಮಿಳಿನಲ್ಲಿ​ ಧನುಷ್, ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ಹಾಗೂ ತೆಲುಗಿನಲ್ಲಿ ಎಸ್​ಎಸ್​ ರಾಜಮೌಳಿ ಅವರು ಟೀಸರ್​ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ‘ದಸರಾ ಟೀಸರ್​ನಲ್ಲಿನ ದೃಶ್ಯಗಳು ಇಷ್ಟವಾಯ್ತು. ಪಾತ್ರಕ್ಕಾಗಿ ನಾನಿ ಅವರಲ್ಲಿನ ಬದಲಾವಣೆ ತುಂಬ ಇಂಪ್ರೆಸ್​ ಮಾಡುವಂತಿದೆ. ಹೊಸ ನಿರ್ದೇಶಕರೊಬ್ಬರು ಈ ರೀತಿ ಪರಿಣಾಮಕಾರಿಯಾದ ಕೆಲಸ ಮಾಡಿದ್ದನ್ನು ನೋಡಲು ಖುಷಿ ಆಗುತ್ತದೆ. ನಿರ್ದೇಶಕ ಶ್ರೀಕಾಂತ್ ಒಡೆಲಾ ಹಾಗೂ ಇಡೀ ತಂಡಕ್ಕೆ ಆಲ್​ ದಿ ಬೆಸ್ಟ್​’ ಎಂದು ರಾಜಮೌಳಿ ಟ್ವೀಟ್​ ಮಾಡಿದ್ದಾರೆ.

ದೀಕ್ಷಿತ್ ಶೆಟ್ಟಿ, ಸಮುದ್ರಕಣಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್’ ಬ್ಯಾನರ್ ಮೂಲಕ ಸುಧಾಕರ್ ಚೆರುಕುರಿ ಅವರು ‘ದಸರಾ’ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸತ್ಯನ್ ಸೂರ್ಯನ್ ಛಾಯಾಗ್ರಹಣ, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ.

ಟೀಸರ್​ನಲ್ಲಿ ಅದ್ದೂರಿ ಆ್ಯಕ್ಷನ್​ ದೃಶ್ಯಗಳು ಗಮನ ಸೆಳೆಯುತ್ತಿವೆ. ನಾನಿ ಅಭಿಮಾನಿಗಳಿಗೆ ಈ ಟೀಸರ್​ ಸಾಕಷ್ಟು ಇಷ್ಟ ಆಗಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಇದು ಮಿಲಿಯನ್​ಗಟ್ಟಲೆ ವೀಕ್ಷಣೆ ಕಂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಕೊಪ್ಪಳ: ಗೃಹ ಲಕ್ಷ್ಮಿ ಹಣ ಕೂಡಿಟ್ಟು ಬೋರವೆಲ್ ಕೊರೆಸಿದ ಅಜ್ಜಿ
ಕೊಪ್ಪಳ: ಗೃಹ ಲಕ್ಷ್ಮಿ ಹಣ ಕೂಡಿಟ್ಟು ಬೋರವೆಲ್ ಕೊರೆಸಿದ ಅಜ್ಜಿ
ಬೆಂಗಳೂರಿನಲ್ಲಿ ನಡೆಯುತ್ತಿರುವ ಮಾಕ್ ಡ್ರಿಲ್​ ನೇರ ಪ್ರಸಾರ ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ನಡೆಯುತ್ತಿರುವ ಮಾಕ್ ಡ್ರಿಲ್​ ನೇರ ಪ್ರಸಾರ ಇಲ್ಲಿದೆ ನೋಡಿ
ಆಪರೇಷನ್​ ಸಿಂಧೂರ್​: ರಾಜ್ಯದ ಕರಾವಳಿಯಲ್ಲಿ ಕಾವಲು ಪಡೆ ತೀವ್ರ ನಿಗಾ
ಆಪರೇಷನ್​ ಸಿಂಧೂರ್​: ರಾಜ್ಯದ ಕರಾವಳಿಯಲ್ಲಿ ಕಾವಲು ಪಡೆ ತೀವ್ರ ನಿಗಾ
ವಿಮಾನ ನಿಲ್ದಾಣಗಳಲ್ಲಿ ದಿಕ್ಕುತೋಚದೆ ಕುಳಿತ ಪ್ರಯಾಣಿಕರು!
ವಿಮಾನ ನಿಲ್ದಾಣಗಳಲ್ಲಿ ದಿಕ್ಕುತೋಚದೆ ಕುಳಿತ ಪ್ರಯಾಣಿಕರು!
ಆಪರೇಷನ್​ ಸಿಂಧೂರ್: ಇಂದೊಂದು ಸಂತೋಷದ ಸಂಗತಿ, ಮೃತ ಮಂಜುನಾಥ್​ ತಾಯಿ
ಆಪರೇಷನ್​ ಸಿಂಧೂರ್: ಇಂದೊಂದು ಸಂತೋಷದ ಸಂಗತಿ, ಮೃತ ಮಂಜುನಾಥ್​ ತಾಯಿ
ಭಾರತದ ದಾಳಿಯಿಂದ ಕಂಗಾಲಾದ ಪಾಕಿಸ್ತಾನದಿಂದ ಮತ್ತೊಮ್ಮೆ ಹೇಡಿತನ
ಭಾರತದ ದಾಳಿಯಿಂದ ಕಂಗಾಲಾದ ಪಾಕಿಸ್ತಾನದಿಂದ ಮತ್ತೊಮ್ಮೆ ಹೇಡಿತನ
ಆಪರೇಷನ್ ಸಿಂಧೂರ್: ಯುದ್ಧವಾದರೆ ನಾವೂ ಸಿದ್ಧ ಎಂದ ಬಾಗಲಕೋಟೆ ಮಾಜಿ ಯೋಧರು
ಆಪರೇಷನ್ ಸಿಂಧೂರ್: ಯುದ್ಧವಾದರೆ ನಾವೂ ಸಿದ್ಧ ಎಂದ ಬಾಗಲಕೋಟೆ ಮಾಜಿ ಯೋಧರು
ಭಾರತೀಯ ಸೇನೆಯಿರುವಾಗ ನಮಗ್ಯಾವ ಭಯವೂ ಇಲ್ಲ: ಪ್ರವಾಸಿಗರು
ಭಾರತೀಯ ಸೇನೆಯಿರುವಾಗ ನಮಗ್ಯಾವ ಭಯವೂ ಇಲ್ಲ: ಪ್ರವಾಸಿಗರು
ಆಪರೇಷನ್ ಸಿಂಧೂರವನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ
ಆಪರೇಷನ್ ಸಿಂಧೂರವನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ
ಮನೆಮಾಳಿಗೆ ಮೇಲೆ ನಿಂತು ಧ್ವಂಸಗೊಂಡಿರುವ ಮಸೀದಿಯನ್ನು ವೀಕ್ಷಿಸಿದ ಜನ
ಮನೆಮಾಳಿಗೆ ಮೇಲೆ ನಿಂತು ಧ್ವಂಸಗೊಂಡಿರುವ ಮಸೀದಿಯನ್ನು ವೀಕ್ಷಿಸಿದ ಜನ