Rajamouli: ‘ಸ್ಟಾರ್ ವಾರ್ಸ್’ ನಿರ್ದೇಶಕನ ಭೇಟಿ ಆದ ರಾಜಮೌಳಿ; ಹಾಲಿವುಡ್ ಅಂಗಳದಲ್ಲೂ ಭರ್ಜರಿ ಹವಾ
Governors Awards | SS Rajamouli: ದಿಗ್ಗಜ ನಿರ್ದೇಶಕ ಜೆಜೆ ಎಬ್ರಮ್ಸ್ ಜೊತೆ ರಾಜಮೌಳಿ ಅವರು ನಗುನಗುತ್ತ ಪೋಸ್ ನೀಡಿದ್ದಾರೆ. ಅಭಿಮಾನಿಗಳ ವಲಯದಲ್ಲಿ ಈ ಫೋಟೋ ಸಖತ್ ವೈರಲ್ ಆಗಿದೆ.
ನಿರ್ದೇಶಕ ಎಸ್.ಎಸ್. ರಾಜಮೌಳಿ (SS Rajamouli) ಅವರು ವಿಶ್ವಾದ್ಯಂತ ಕೀರ್ತಿ ಗಳಿಸಿದ್ದಾರೆ. ತಾಂತ್ರಿಕವಾಗಿ ಶ್ರೀಮಂತವಾಗಿರುವ ಸಿನಿಮಾಗಳನ್ನು ಮಾಡುವ ಮೂಲಕ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಹಾಲಿವುಡ್ ಮಂದಿಗೂ ರಾಜಮೌಳಿ ಅವರ ಸಾಮರ್ಥ್ಯ ಏನು ಎಂಬುದು ತಿಳಿದಿದೆ. ಸದ್ಯ ರಾಜಮೌಳಿ ವಿದೇಶಿ ಪ್ರವಾಸದಲ್ಲಿ ಇದ್ದಾರೆ. ಆಸ್ಕರ್ ಪ್ರಶಸ್ತಿಯ ಒಂದು ಭಾಗವಾಗಿರುವ ‘ಗವರ್ನರ್ಸ್ ಅವಾರ್ಡ್ಸ್’ (Governors Awards) ಸಮಾರಂಭದಲ್ಲಿ ಅವರು ಭಾಗಿ ಆಗಿದ್ದಾರೆ. ಈ ವೇಳೆ ಅವರು ಖ್ಯಾತ ಹಾಲಿವುಡ್ ನಿರ್ದೇಶಕ ಜೆಜೆ ಎಬ್ರಮ್ಸ್ (JJ Abrams) ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿದೆ. ರಾಜಮೌಳಿ ಅವರ ಬಗ್ಗೆ ಅಭಿಮಾನಿಗಳಿಗೆ ಇನ್ನಷ್ಟು ಹೆಮ್ಮೆ ಎನಿಸುತ್ತಿದೆ. ‘ಆರ್ಆರ್ಆರ್’ ಚಿತ್ರದ ಗೆಲುವಿನ ಬಳಿಕ ಈ ಸ್ಟಾರ್ ನಿರ್ದೇಶಕನ ಚಾರ್ಮ್ ಹೆಚ್ಚಿದೆ.
ಜೆಜೆ ಎಬ್ರಮ್ಸ್ ಅವರು ಹಾಲಿವುಡ್ನಲ್ಲಿ ಸೂಪರ್ ಹಿಟ್ ಸಿನಿಮಾಗಳ ಮೂಲಕ ಹೆಸರು ಮಾಡಿದ್ದಾರೆ. ‘ಮಿಷನ್ ಇಂಪಾಸಿಬಲ್ 3’ ಹಾಗೂ ‘ಸ್ಟಾರ್ ವಾರ್ಸ್’ ಸರಣಿ ಸಿನಿಮಾಗಳ ಮೂಲಕ ಅವರು ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ದಿಗ್ಗಜ ನಿರ್ದೇಶಕನ ಜೊತೆಗೆ ರಾಜಮೌಳಿ ಅವರು ನಗುನಗುತ್ತ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ‘ಆರ್ಆರ್ಆರ್’ ಸಿನಿಮಾದ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
‘ಆರ್ಆರ್ಆರ್’ ಸಿನಿಮಾದಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ ಈ ಸಿನಿಮಾ, ವಿದೇಶದಲ್ಲೂ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಈಗ ಆಸ್ಕರ್ ಕಣದಲ್ಲಿ ಸ್ಪರ್ಧಿಸಲು ಸಕಲ ಪ್ರಯತ್ನ ಮಾಡುತ್ತಿದೆ. ಭಾರತದಿಂದ ಅಧಿಕೃತವಾಗಿ ಆಸ್ಕರ್ ಸ್ಪರ್ಧೆಗೆ ಆಯ್ಕೆ ಆಗದಿದ್ದರೂ ಕೂಡ ಬೇರೆ ಮಾರ್ಗದ ಮೂಲಕ ಈ ಚಿತ್ರ ಪೈಪೋಟಿ ನೀಡುವ ಪ್ರಯತ್ನದಲ್ಲಿದೆ.
And the foRRRce continues to be with #RRRMovie ???
Hollywood filmmaker @JJAbrams, the director of Star Wars, Mission Impossible and many other remarkable movies, said that he is a ???? ??? ?? #???.
Glad to see @SSRajamouli meet him at the Governors Awards.❤️ pic.twitter.com/U2Jf9BYEGT
— RRR Movie (@RRRMovie) November 20, 2022
‘For Your Consideration’ ಎಂಬ ಕ್ಯಾಂಪೇನ್ ಮೂಲಕ ‘ಆರ್ಆರ್ಆರ್’ ಸಿನಿಮಾವನ್ನು ಆಸ್ಕರ್ ಕಣಕ್ಕೆ ಕಳಿಸಲು ಪ್ರಯತ್ನ ನಡೆದಿದೆ. ಆಸ್ಕರ್ ಕಮಿಟಿಯ ಗಮನ ಸೆಳೆಯಲು ಈ ಕ್ಯಾಂಪೇನ್ ಮಾಡಲಾಗುತ್ತದೆ. ಇದಕ್ಕೆ ಬಹುಕೋಟಿ ರೂಪಾಯಿ ಹಣ ಖರ್ಚಾಗುತ್ತದೆ. ಎಲ್ಲ ಸಿನಿಮಾಗಳಿಗೂ ಈ ಪರಿ ಹಣ ಖರ್ಚು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ‘ಆರ್ಆರ್ಆರ್’ ನಿರ್ಮಾಪಕರು ಸಾಕಷ್ಟು ಲಾಭ ಕಂಡಿರುವುದರಿಂದ ಈ ಕ್ಯಾಂಪೇನ್ಗೆ ಖರ್ಚು ಮಾಡುತ್ತಿದ್ದಾರೆ.
ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ-ನಟಿ, ಅತ್ಯುತ್ತಮ ಪೋಷಕ ಕಲಾವಿದರು, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಹಾಡು ಮುಂತಾದ ವಿಭಾಗಗಳಲ್ಲಿ ನಾಮನಿರ್ದೇಶನಗೊಳ್ಳಲು ‘ಆರ್ಆರ್ಆರ್’ ಚಿತ್ರ ಪ್ರಯತ್ನಿಸುತ್ತಿದೆ. ಹೀಗೆ ಸ್ವತಂತ್ರವಾಗಿ ಆಸ್ಕರ್ಗೆ ಎಂಟ್ರಿ ನೀಡುವ ಸಾಹಸಕ್ಕೆ ಮುಂದಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:44 pm, Mon, 21 November 22